• Slide
    Slide
    Slide
    previous arrow
    next arrow
  • ಮೃತ ಡಿಆರ್‌ಎಫ್‌ಗೆ ಶ್ರದ್ಧಾಂಜಲಿ ಸಲ್ಲಿಕೆ

    300x250 AD

    ದಾಂಡೇಲಿ: ಆಕಸ್ಮಿಕ ದುರ್ಘಟನೆಯಿಂದ ಮೃತಪಟ್ಟ ತಾಲ್ಲೂಕಿನ ಕುಳಗಿ ಶಾಖೆಯ ಉಪ ವಲಯಾರಣ್ಯಾಧಿಕಾರಿ ಯೋಗೇಶ್ ನಾಯ್ಕ ಅವರಿಗೆ ನಗರದ ಸೋಮಾನಿ ವೃತ್ತದಲ್ಲಿ ಅರಣ್ಯ ಇಲಾಖೆಯ ಅಧಿಕಾರಿ- ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಸೇರಿ ಶ್ರದ್ಧಾಂಜಲಿ ಸಲ್ಲಿಸಿದರು.

    ಈ ಸಂದರ್ಭದಲ್ಲಿ ಮೃತ ಯೋಗೇಶ್ ನಾಯ್ಕರ ಆತ್ಮಕ್ಕೆ ಚಿರಶಾಂತಿ ಕೋರಿ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಯೋಗೇಶ್ ನಾಯ್ಕ ಅವರ ಜೀವನ ವ್ಯಕ್ತಿತ್ವವನ್ನು ಸ್ಮರಿಸಿ, ಅವರ ಅಗಲಿಕೆಯನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬವರ್ಗಕ್ಕೆ ದಯಪಾಲಿಸಲೆಂದು ಪ್ರಾರ್ಥಿಸಲಾಯಿತು.

    300x250 AD

    ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು, ಉಪ ವಲಯಾರಣ್ಯಾಧಿಕಾರಿಗಳು, ಅರಣ್ಯ ಇಲಾಖೆಯ ಸಿಬ್ಬಂದಿಗಳು, ನಗರಸಭಾ ಸದಸ್ಯರಾದ ರೋಶನಜಿತ್, ಕೋಗಿಲಬನ ಗ್ರಾಮ ಪಂಚಾಯ್ತು ಸದಸ್ಯರಾದ ರಮೇಶ್ ನಾಯ್ಕ, ಶ್ರೀವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿಯ ಅಧ್ಯಕ್ಷ ಚೆನ್ನಬಸಪ್ಪ ಮುರುಗೋಡ ಮೊದಲಾದವರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top