ಶಿರಸಿ: ತಾಲೂಕಿನ ಕಡಕೋಡ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಕೋ ಕೇರ್( ರಿ ) ಸಂಸ್ಥೆ, ಶಿರಸಿ, ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘ, ಜಿಲ್ಲಾ ಶಾಖೆ : ಉತ್ತರ ಕನ್ನಡ, ಗ್ರೀನ್ ಕೇರ್ ಸಂಸ್ಥೆ, ಶಿರಸಿ, ಕರ್ನಾಟಕ ರಾಜ್ಯ ಔಷಧ & ಮಾರಾಟ ಪ್ರತಿನಿಧಿಗಳ ಸಂಘ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಟ್ರಸ್ಟ್ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಪ್ರಥಮ ಚಿಕಿತ್ಸೆ ಪೆಟ್ಟಿಗೆ ವಿತರಣೆ ಹಾಗೂ ಆರೋಗ್ಯ, ಶಿಕ್ಷಣ ಮತ್ತು ಔಷಧಗಳ ಬಗ್ಗೆ ಉಪನ್ಯಾಸ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.
ಕಾರ್ಯಕ್ರಮದ ಉದ್ಘಾಟನೆ ಮಾಡಿದ ಆಹಾರ ಸುರಕ್ಷತಾಧಿಕಾರಿ ಅರುಣ ವಿ. ಕಾಶಿಭಟ್ ಮಾತನಾಡಿ ಸ್ವಚ್ಛತೆ ಮತ್ತು ಪ್ರಥಮ ಚಿಕಿತ್ಸೆಯಲ್ಲಿ ಮಕ್ಕಳ ಪಾತ್ರವನ್ನು ವಿವರಿಸಿದರು.BRP ಶ್ರೀಧರ್ ಎಸ್. ನಾಯ್ಕ್, CRP ಬಿ. ಪಿ. ಹೆಗಡೆ ಭಾಗವಹಿಸಿದ್ದರು. ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಗಳ ಸಂಘ, ಜಿಲ್ಲಾ ಉತ್ತರ ಕನ್ನಡ ಶಾಖೆ ಅಧ್ಯಕ್ಷ ಮಹೇಶ್ ಡಿ. ನಾಯಕ ಆರೋಗ್ಯ ಶಿಕ್ಷಣದ ಕುರಿತು ಮಾಹಿತಿ ನೀಡಿದರು. ಅತಿಥಿಗಳಾಗಿ ICTC ಕೌನ್ಸಿಲರ್ ಗಿರಿಜಾ ಹೆಗಡೆ,ಮಾನವ ಹಕ್ಕುಗಳ ರಕ್ಷಣಾ ಪರಿಷತ್ ಉಪಾಧ್ಯಕ್ಷ ಮಹೇಶ್ ಗಾಳಿಮನೆ, ಮುಖ್ಯೋಪಾಧ್ಯಾಯ ಪದ್ಮಜಾ ನಾಯ್ಕ್, ಎಸ್ ಡಿ ಎಮ್ ಸಿ ಅಧ್ಯಕ್ಷರು ಮತ್ತು ಪಾಲಕರು, ಸೇವಾ ಮನೋಭಾವನೆ ಹೊಂದಿದ ಜಗದೀಶ್ ನಾಯ್ಕ್ ಹಲವರು ಭಾಗವಹಿಸಿದ್ದರು.
ಈ ಶಿಬಿರದಲ್ಲಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಮತ್ತು ಸಹ ಶಿಕ್ಷಕರು ಹಾಜರಿದ್ದರು. ಇಕೋ ಕೇರ್ ಅಧ್ಯಕ್ಷ ಸುನೀಲ ಭೋವಿ ಸ್ವಾಗತ ಮಾಡಿದರು. ಕಾರ್ಯಕ್ರಮವನ್ನು ರಾಜೇಶ್ ವೆರ್ಣೇಕರ್, ವೈದ್ಯಕೀಯ ಪ್ರತಿನಿಧಿ ಇವರು ಪ್ರಥಮ ಚಿಕಿತ್ಸೆ ಪೆಟ್ಟಿಗೆಯಲ್ಲಿರುವ ಔಷಧಗಳ ಕುರಿತು ಮಾಹಿತಿ ನೀಡಿ ಕಾರ್ಯಕ್ರಮ ನಡೆಸಿಕೊಟ್ಟರು.