• Slide
    Slide
    Slide
    previous arrow
    next arrow
  • ಜಗನ್ನಾಥ ಜೋಷಿಯವರ ವ್ಯಕ್ತಿತ್ವ ನಮಗೆ ಆದರ್ಶವಾಗಲಿ: ರೋಹಿತ್ ಚಕ್ರತೀರ್ಥ

    300x250 AD

    ಯಲ್ಲಾಪುರ : ರಾಷ್ಟ್ರಹಿತಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ, ನಮ್ಮ ನಾಡಿನ ದಿ.ಜಗನ್ನಾಥ ರಾವ್ ಜೋಷಿಯವರು ಅಟಲ್ ಬಿಹಾರಿ ವಾಜಪೇಯಿಯವರ ವ್ಯಕ್ತಿತ್ವಕ್ಕೆ ಸರಿಸಮನಾದ ವ್ಯಕ್ತಿತ್ವ ಹೊಂದಿದ್ದರು. ಪ್ರಧಾನಿಯಾಗುವ ಎಲ್ಲ ಅರ್ಹತೆಗಳೂ ಅವರಲ್ಲಿದ್ದವು. ವಾಜಪೇಯಿ ಮತ್ತು ಜೋಷಿಯವರು ದೇಶ ಸೇವೆಯಲ್ಲಿ ಒಂದೇ ರಥದ ಎರಡು ಚಕ್ರಗಳಂತೆ ಕೆಲಸ ಮಾಡಿದರು. ಜಗನ್ನಾಥ ರಾವ್ ಜೋಷಿಯವರ ವ್ಯಕ್ತಿತ್ವ ನಮಗೆ ಆದರ್ಶವಾಗಬೇಕು ಎಂದು ಚಿಂತಕ,ಶಿಕ್ಷಣ ತಜ್ಞ, ಖ್ಯಾತ ಲೇಖಕ ರೋಹಿತ್ ಚಕ್ರತೀರ್ಥ ಹೇಳಿದರು.

    ಅಖಿಲ ಭಾರತೀಯ ಸಾಹಿತ್ಯ ಪರಿಷದ್ ತಾಲೂಕಾ ಸಮಿತಿ, ವಿಶ್ವದರ್ಶನ ಶಿಕ್ಷಣ ಸಂಸ್ಥೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸಭಾಭವನದಲ್ಲಿ ಶನಿವಾರ ರಾಷ್ಟ್ರ ನಮನ ಶೀರ್ಷಿಕೆಯಲ್ಲಿ ನಡೆದ ಉಪನ್ಯಾಸಕ ತಿಮ್ಮಣ್ಣ ಭಟ್ಟ ವಿರಚಿತ ಕರ್ನಾಟಕ ಕೇಸರಿ ಶ್ರೀ ಜಗನ್ನಾಥ ರಾವ್ ಜೋಷಿ ಪುಸ್ತಕ ಬಿಡುಗಡೆ ಮತ್ತು ರಾಷ್ಟ್ರನಮನ ಮಕ್ಕಳ ಕವಿಗೋಷ್ಟಿ ಕಾರ್ಯಕ್ರಮದಲ್ಲಿ ಪುಸ್ತಕ ಪರಿಚಯ ಮಾಡಿದ ರೋಹಿತ್ ಚಕ್ರತೀರ್ಥ ಮಾತನಾಡಿ, ಜೋಷಿ ಅವರು ದಂತಕಥೆಯಯಂತೆ ಇದ್ದರು. ರಾಜ್ಯಪಾಲ, ರಾಷ್ಟ್ರಪತಿ ಹುದ್ದೆಯನ್ನು ನಿರಾಕರಿಸಿ, ಸಾಮಾನ್ಯ ಕಾರ್ಯಕರ್ತನಾಗಿ ಜೀವನ ನಡೆಸಿದರು. ಗೋವಾ ವಿಮೋಚನಾ ಹೋರಾಟದಲ್ಲಿ ಪಾಲ್ಗೊಂಡು, ಚಿತ್ರಹಿಂಸೆಯನ್ನು ಅನುಭವಿಸಿದರು. ಬಿಜೆಪಿ ಪಕ್ಷ ಬೆಳೆಯಲು ಜೋಷಿಯವರಂತಹ ಮಹಾನ್ ವ್ಯಕ್ತಿಗಳ ನಿರಂತರ ಪರಿಶ್ರಮ ಕಾರಣವಾಗಿದೆ. ಪಕ್ಷದ ಪ್ರಾರಂಭದ ದುರ್ಭರ ದಿನಗಳಲ್ಲಿ ಅವರು ಕಾರ್ಯಕರ್ತರನ್ನು ಹುರಿದುಂಬಿಸಿದ ರೀತಿ ಅನನ್ಯವಾದದ್ದು. ನಾವೆಲ್ಲರೂ ಅವರ ವ್ಯಕ್ತಿತ್ವವನ್ನು ಅಳವಡಿಸಿಕೊಳ್ಳಬೇಕು ಎಂದರು.

    300x250 AD

    ಕರ್ನಾಟಕ ಕೇಸರಿ ಶ್ರೀ ಜಗನ್ನಾಥ ರಾವ್ ಜೋಷಿ ಕೃತಿಯ ಲೇಖಕ ತಿಮ್ಮಣ್ಣ ಭಟ್ಟ ಕೃತಿಯ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ನರಸಿಂಹ ಕೋಣೆಮನೆ, ವ್ಯವಸ್ಥಾಪಕ ಅಜೇಯ ಭಾರತೀಯ ಮುಂತಾದವರು ಇದ್ದರು. ಸಿಂಚನಾ,ಹರ್ಷಿತಾ, ಪ್ರಣತಿ ಪ್ರಾರ್ಥಿಸಿದರು. ಮುಖ್ಯಾಧ್ಯಾಪಕ ಪ್ರಸನ್ನ ಹೆಗಡೆ ಸ್ವಾಗತಿಸಿದರು. ಅ.ಭಾ.ಸಾ.ಪ. ತಾಲೂಕು ಸಮಿತಿಯ ಅಧ್ಯಕ್ಷ ಗಣಪತಿ ಕಂಚೀಪಾಲ್ ವಂದಿಸಿದರು. ವಿದ್ಯಾ ಭಟ್ಟ ನಿರ್ವಹಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top