ಶಿರಸಿ: ಕರ್ನಾಟಕ ಸರಕಾರದ 2023 ರ ಬಜೆಟ್ ಸಾಮಾಜಿಕ ನ್ಯಾಯದ ಪ್ರತಿಪಾದನೆಯೊಂದಿಗೆ ಆರ್ಥಿಕ ದುರ್ಬಲ, ರೈತ, ಗ್ರಾಮೀಣ ಜನತೆಯ ಅಭಿವೃದ್ಧಿಯ ಪೂರಕವಾಗಿದೆ ಎಂದು ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ಹೇಳಿದ್ದಾರೆ.
ರೈತರ ಶೂನ್ಯ ಬಡ್ಡಿದರ ಸಾಲದ ಮಿತಿಯನ್ನು ಮೂರು ಲಕ್ಷದಿಂದ ಐದು ಲಕ್ಷಕ್ಕೆ ಏರಿಕೆ, ಐದು ಗ್ಯಾರಂಟಿ ಯೋಜನೆಗಾಗಿ 52 ಕೋಟಿ ನಿಗದಿ, ಇಂದಿರಾ ಕ್ಯಾಂಟೀನ್‌ಗೆ 100 ಕೋಟಿ, ಮೀನುಗಾರ ಮಹಿಳೆಯರ ಆರ್ಥಿಕ ಸ್ವಾಲಂಬನೆಯ ಸಹಾಯ ನಿಧಿ 3 ಲಕ್ಷಕ್ಕೆ ಏರಿಕೆ, ಮಿನುಗಾರಿಕೆ ಮತ್ತು ಕರಾವಳಿ ಪ್ರವಾಸೋದ್ಯಮಕ್ಕೆ ಆದ್ಯತೆ, ಮೂಲಭೂತ ಸೌಕರ್ಯಕ್ಕಾಗಿ ಪ್ರಾಮುಖ್ಯತೆ, ಸಾಮಾಜಿಕ ದುರ್ಬಲ ವರ್ಗಗಳ ಕಲ್ಯಾಣಕ್ಕೆ ವಿಶೇಷ ಅನುದಾನ, ಪ್ರತಿಭಾವಂತ ಯುವ ಜನಾಂಗ ಅಭಿವೃದ್ಧಿಗೆ ಯೋಜನೆ, ಭೂ ರಹಿತ ಕೃಷಿ ಕಾರ್ಮಿಕರು ಮಹಿಳೆಯರಿಗೆ ಸ್ವಾವಲಂಬನೆಗೆ ಕ್ರಿಯಾ ಯೋಜನೆ ಮುಂತಾದ ಅಭಿವೃದ್ಧಿಪರ ಕಾರ್ಯ ಯೋಜನೆಯ 2023 ರ ಬಜೆಟ್ ಆಗಿದೆ ಎಂದು ಅವರು ವಾಖ್ಯಾನಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆ ಪೂರಕವಾಗಿ 14ನೇ ಬಾರಿ ರಾಜ್ಯ ಬಜೆಟ್ ಮಂಡಿಸಿದ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.