• Slide
  Slide
  Slide
  previous arrow
  next arrow
 • ಮಳೆ ಹಾನಿ ಪ್ರದೇಶಗಳಲ್ಲಿ ಶಾಸಕ ಸೈಲ್ ಪರಿಶೀಲನೆ

  300x250 AD

  ಕಾರವಾರ: ಎಡೆಬಿಡದೆ ಸುರಿಯುತ್ತಿದ್ದ ಮಳೆಯಿಂದ ಗುಡ್ಡ ಕುಸಿತ ಹಾಗೂ ಜಲ ದಿಗ್ಬಂಧನದಿಂದ ಕಷ್ಟಪಡುತ್ತಿದ್ದ ಕ್ಷೇತ್ರದ ಜನರ ಸಮಸ್ಯೆಗಳನ್ನು ಶಾಸಕ ಸತೀಶ್ ಸೈಲ್ ಆಲಿಸಿದರು.

  ವಿಧಾನಸಭೆ ಅಧಿವೇಶನ ನಡೆಯುತಿದ್ದರೂ ಸಭಾಧ್ಯಕ್ಷರ ಅನುಮತಿ ಪಡೆದು ಕ್ಷೇತ್ರಕ್ಕೆ ಆಗಮಿಸಿದ ಅವರು, ತಹಸೀಲ್ದಾರ್ ಹಾಗೂ ಇನ್ನಿತರ ಅಧಿಕಾರಿಗಳೊಂದಿಗೆ ಮಳೆ ಹಾನಿಗೊಳಗಾಗಿದ್ದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಬೈತಖೋಲ್ ಗುಡ್ಡದಲ್ಲಿ ಸೀಬರ್ಡ್ ವತಿಯಿಂದ ರಸ್ತೆ ನಿರ್ಮಾಣದ ಕಾರಣದಿಂದ ಬಂಡೆಕಲ್ಲು ಮತ್ತು ಗುಡ್ಡ ಕುಸಿತದ ದೂರಿನ ಅನ್ವಯ ಸ್ಥಳಕ್ಕಾಗಮಿಸಿದ ಶಾಸಕ ಮತ್ತು ಅಧಿಕಾರಿ ವೃಂದಕ್ಕೆ ಸೀಬರ್ಡ್ ನವರ ನಿಷೇಧಿತ ಪ್ರದೇಶಕ್ಕೆ ಪ್ರವೇಶಿಸಲು ಪ್ರಾರಂಭದಲ್ಲಿ ಕಸಿವಿಸಿ ಉಂಟಾದರೂ ನಂತರ ಸ್ವತಃ ಸೀಬರ್ಡ್ ಉನ್ನತ ಅಧಿಕಾರಿಗಳೇ ಶಾಸಕರ ಜೊತೆಗೆ ಬೈತ್ಕೊಲ್ ಗುಡ್ಡ ಹತ್ತಿ ಗುಡ್ಡ ಕುಸಿತದ ಸಂಭವ ಇರುವ ಪ್ರದೇಶದ ವೀಕ್ಷಣೆ ಮಾಡಿದರು.

  ಸರಕಾರಿ ಉನ್ನತ ಪರಿಣಿತ ಅಧಿಕಾರಿಗಳ ಮತ್ತು ಶಾಸಕರ ಸಲಹೆ ಸೂಚನೆಗೆ ಸೀಬರ್ಡ್ ಅಧಿಕಾರಿಗಳು ಗೌರವಿತ ಮನ್ನಣೆ ನೀಡಿ ಶಾಸಕರ ತಂಡದ ಎಲ್ಲಾ ಸಲಹೆ ಸೂಚನೆಗಳನ್ನು ಪಾಲಿಸಿ ಸ್ಥಳೀಯ ಜನರಿಗೆ ಪ್ರಾಣಹಾನಿ ಹಾಗೂ ಆಸ್ತಿ- ಪಾಸ್ತಿಗಳಿಗೆ ನಷ್ಟ ಉಂಟಾಗದಂತೆ ನೋಡಿಕೊಳ್ಳುವ ಭರವಸೆ ನೀಡಿದರು. ತದನಂತರ ಶಾಸಕರ ನೇತೃತ್ವದ ಅಧಿಕಾರಿಗಳ ತಂಡ ನೌಕಾನೆಲೆಯ ಬಿಣಗಾ, ಅರಗಾ, ಅಲಿಗದ್ದಾ, ಇಡೂರು ಮುಂತಾದೆಡೆ ಸಂಚರಿಸಿ ಸಮಸ್ಯೆಯ ಮೂಲಕಾರಣ ಹುಡುಕಾಡಿದರು. ಪ್ರತಿ ಪ್ರದೇಶದ ಮಳೆನೀರು ನೌಕಾನೆಲೆ ಪ್ರದೇಶಕ್ಕೆ ಸರಾಗವಾಗಿ ಹರಿಯದಿರುವುದೇ ನೌಕಾನೆಲೆಗೆ ಅಂಟಿಕೊಂಡಿರುವ ಗ್ರಾಮದಲ್ಲಿ ನೀರು ಸಮುದ್ರದಂತಾಗಳು ಕಾರಣ ಎಂದು ಗೊತ್ತಾಯಿತು. ಶಾಸಕರು ಕೂಡಲೇ ಸ್ಥಳದಲ್ಲಿದ್ದ ನೌಕಾನೆಲೆ ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸಲು ತಾಕೀತು ಮಾಡಿದರು.

  300x250 AD

  ಶಾಸಕರೊಂದಿಗೆ ಕಾಂಗ್ರೆಸ್ ಮುಖಂಡರಾದ ಕೆ.ಶಂಭು ಶೆಟ್ಟಿ, ಸಮೀರ್ ನಾಯ್ಕ್, ಸಂತೋಷ್ ನಾಯ್ಕ್, ರೋಹಿದಾಸ್ ನಾಯ್ಕ್, ರಾಜೇಶ್ ನಾಯ್ಕ್, ಗಣಪತಿ ಮಾಂಗ್ರೆ ಮುಂತಾದವರು ಹಾಜರಿದ್ದರು.

  Share This
  300x250 AD
  300x250 AD
  300x250 AD
  Leaderboard Ad
  Back to top