Slide
Slide
Slide
previous arrow
next arrow

ಟಿ.ಎಸ್.ಎಸ್. ಆಸ್ಪತ್ರೆಯಲ್ಲಿ ನೂತನ ನಂದಿನಿ ಮಾರಾಟ ಮಳಿಗೆ ಉದ್ಘಾಟನೆ

300x250 AD

ಶಿರಸಿ: ಧಾರವಾಡ, ಗದಗ ಮತ್ತು ಉತ್ತರ ಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ನಂದಿನಿಯ ನೂತನ ಮಾರಾಟ ಮಳಿಗೆಯನ್ನು ಇಲ್ಲಿನ ಟಿ.ಎಸ್.ಎಸ್. ಆಸ್ಪತ್ರೆಯ ಆವರಣದಲ್ಲಿ ಧಾರವಾಡ, ಗದಗ ಮತ್ತು ಉತ್ತರ ಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ಅಧ್ಯಕ್ಷರಾದ ಶಂಕರ ವೀರಪ್ಪ ಮುಗದ ಜು.6,ಗುರುವಾರದಂದು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಈಡೀ ರಾಜ್ಯದಲ್ಲಿ ನಂದಿನಿಯು ಗುಣಮಟ್ಟ ಹಾಗೂ ಪ್ರಮಾಣದಲ್ಲಿ ಲಕ್ಷಾಂತರ ಗ್ರಾಹಕರ ವಿಶ್ವಾಸಾರ್ಹ ಮೆಚ್ಚುಗೆಯ ಬ್ರ್ಯಾಂಡ್ ಆಗಿದ್ದು, ಕೆ.ಎಂ.ಎಫ್. ಒಂದು ಸಹಕಾರ ಸಂಸ್ಥೆಯಾಗಿದ್ದು, ರೈತರ ಹಿತ ಕಾಪಾಡುವಲ್ಲಿ ಶ್ರಮವಹಿಸುತ್ತಿದೆ. ರೈತರಿಂದ ನೇರವಾಗಿ ಹಾಲು ಸಂಘಗಳ ಮೂಲಕ ಹಾಲನ್ನು ಖರೀದಿಸಿ ಒಕ್ಕೂಟದಿಂದ ಹಾಲನ್ನು ಮಾರಾಟ ಮಾಡಿ ರೈತರ ಖಾತೆಗಳಿಗೆ ನೇರವಾಗಿ ಹಣ ಸಂದಾಯ ಮಾಡಲಾಗುವ ಪಾರದರ್ಶಕ ವ್ಯವಸ್ಥೆ ನಮ್ಮದಾಗಿದ್ದು, ಸರಕಾರದಿಂದ ಸಿಗುವ ಅನೇಕ ಸೌಲಭ್ಯ ಮತ್ತು ಅನುದಾನಗಳನ್ನು ನಮ್ಮ ಒಕ್ಕೂಟದಿಂದ ಪ್ರತೀ ಹಾಲು ಉತ್ಪಾದಕನಿಗೆ ತಲುಪುವಂತೆ ಮಾಡಲಾಗುತ್ತಿದೆ ಎಂದರು. ರೈತರಿಂದ ನೇರವಾಗಿ ಗ್ರಾಹಕರಿಗೆ ನಮ್ಮಿಂದ ಉತ್ತಮ ಗುಣಮಟ್ಟದ ನಂದಿನಿಯ 75ಕ್ಕೂ ಹೆಚ್ಚಿನ ರೀತಿಯ ಹಾಲಿನ ಉತ್ಪನ್ನಗಳನ್ನು ಒದಗಿಸಲಾಗುತ್ತಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಅನೇಕ ರೀತಿ ಹಾಲಿನ ಬ್ರ್ಯಾಂಡ್ಗಳಿದ್ದು ಅವೆಲ್ಲಕ್ಕಿಂತ ದರ, ಗುಣಮಟ್ಟ ಹಾಗೂ ಪ್ರಮಾಣದಲ್ಲಿ ನಂದಿನಿಯು ಉತ್ತಮ ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ. ಮುಂದಿನ ದಿನಗಳಲ್ಲಿ ಆಸ್ಪತ್ರೆಗೆ ಆಗಮಿಸುವ ರೋಗಿಗಳು ಹಾಗೂ ಸಾರ್ವಜನಿಕರಿಗೆ ಉತ್ತಮ ರೀತಿಯಲ್ಲಿ ಸೇವೆ ಒದಗಿಸುವುದೇ ನಮ್ಮ ಮುಖ್ಯ ಉದ್ದೇಶವಾಗಿದೆ ಎಂದರು. ತಾವೆಲ್ಲರೂ ನಂದಿನಿ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಬಳಸಬೇಕು ಹಾಗೂ ತಮ್ಮ ಮನೆಗಳಲ್ಲಿ ನಂದಿನಿ ಉತ್ಪನ್ನಗಳನ್ನು ಉಪಯೋಗಿಸುವಂತೆ ಆಗಬೇಕೆಂದು ಈ ಮೂಲಕ ಅವರು ಕರೆ ನೀಡಿದರು.

ನಂತರ ಮಾತನಾಡಿದ ಧಾರವಾಡ, ಗದಗ ಮತ್ತು ಉತ್ತರ ಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ನೌಕರರ ಕಲ್ಯಾಣ ಸಂಘದ ಅಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ,ಕೆಲ ತಿಂಗಳಿಂದ ಟಿ.ಎಸ್.ಎಸ್. ಆಸ್ಪತ್ರೆಯ ಆಸುಪಾಸಿನಲ್ಲಿ ಗ್ರಾಹಕರಿಗೆ ಅನುಕೂಲವಾಗುವಂತೆ ಒಂದು ನಂದಿನಿ ಮಾರಾಟ ಮಳಿಗೆ ಸ್ಥಾಪಿಸಿ ಉತ್ತಮ ಸೇವೆ ಒದಗಿಸಬೇಕೆಂದು ನಾವು ಪ್ರಯತ್ನ ಪಡುತ್ತಿದ್ದೆವು, ಅನೇಕ ಕಾರಣಗಳಿಂದ ಅದು ಸಾಧ್ಯವಾಗಿರಲಿಲ್ಲ. ಆದರೆ ಈಗ ಟಿ.ಎಸ್.ಎಸ್. ಆಸ್ಪತ್ರೆಯ ಅಧ್ಯಕ್ಷರು, ಆಡಳಿತ ಮಂಡಳಿಯ ಸದಸ್ಯರು ಹಾಗೂ ಪ್ರಧಾನ ವ್ಯವಸ್ಥಾಪಕರ ಸಹಕಾರದಿಂದ ಸುವರ್ಣಾವಕಾಶ ಒದಗಿ ಬಂದಿದ್ದು ಅದು ಸಾಧ್ಯವಾಗಿದೆ ಎಂದರು.
ರಾಜ್ಯದಾದ್ಯಂತ ಕಾರ್ಯ ನಿರ್ವಹಿಸುತ್ತಿರುವ 15 ಒಕ್ಕೂಟಗಳ ಪೈಕಿ ಗ್ರಾಹಕರಿಗೆ ನೀಡಲಾಗುತ್ತಿರುವ ನಂದಿನಿಯ ಉತ್ಪನ್ನಗಳ ಗುಣಮಟ್ಟ ಹಾಗೂ ಪ್ರಮಾಣದ ವಿಷಯದಲ್ಲಿ ನಮ್ಮ ಧಾರವಾಡ ಸಹಕಾರ ಹಾಲು ಒಕ್ಕೂಟವು ಎರಡನೇ ಸಾಲಿನಲ್ಲಿರುವುದು ಹೆಮ್ಮೆಯ ವಿಷಯವಾಗಿದೆ. ನಂದಿನಿ ಎಂದರೆ ಕೇವಲ ಹಾಲು ಮತ್ತು ಪೇಡೆ ಎಂಬ ಭಾವನೆ ಈ ಮೊದಲು ಜನರಲ್ಲಿತ್ತು. ಆದರೆ ಈಗ ನಮ್ಮ ಅಧ್ಯಕ್ಷರು ಹೇಳಿದಂತೆ ನಂದಿನಿಯ 75ಕ್ಕೂ ಹೆಚ್ಚಿನ ರೀತಿಯ ಹಾಲಿನ ಉತ್ಪನ್ನಗಳನ್ನು ನಾವು ತಯಾರು ಮಾಡಿ ಗ್ರಾಹಕರಿಗೆ ನೀಡುತ್ತಿದ್ದೇವೆ. ರೈತರಿಂದ ನೇರವಾಗಿ ಎಷ್ಟು ಪ್ರಮಾಣದ ಹಾಲನ್ನು ಖರೀದಿಸುತ್ತೇವೆಯೋ ಅಷ್ಟೇ ಪ್ರಮಾಣದ ಹಾಲಿನಲ್ಲಿ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ತಯಾರಿಸುತ್ತೇವೆ. ಕೆಲ ಖಾಸಗಿ ಕಂಪನಿಗಳು 100 ಲೀಟರ್ ಹಾಲಿನಿಂದ 500 ಲೀಟರ್ ಅಥವಾ ಅದಕ್ಕೂ ಹೆಚ್ಚಿನ ಸಾಮರ್ಥ್ಯದ ಉತ್ಪನ್ನಗಳನ್ನು ಕಲಬೆರಕೆ ಮೂಲಕ ತಯಾರಿಸುತ್ತಿದ್ದು, ಕಲಬೆರಕೆಯ ಮೂಲಕ ಗ್ರಾಹಕರಿಗೆ ಸೇವೆಯನ್ನು ನಾವು ಎಂದಿಗೂ ನೀಡಿಲ್ಲ ಎಂದರು. ಅಂತೆಯೇ ನಾವು ಮಾಡಿದ ಲಾಭಾಂಶದ ಬಹುತೇಕ ಪಾಲು ನೇರವಾಗಿ ರೈತನಿಗೆ ತಲುಪುವಂತೆ ಮಾಡುತ್ತಿರುವ ಸಹಕಾರ ವ್ಯವಸ್ಥೆ ನಮ್ಮದಾಗಿದ್ದು, ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡ ಒಬ್ಬ ರೈತನ ಸರ್ವತೋಮುಖ ಬೆಳವಣಿಗೆಗೆ ಸಹಕಾರವಾಗುವಂತೆ ತಾವೆಲ್ಲರೂ ಅತೀ ಹೆಚ್ಚು ನಂದಿನಿಯ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಬಳಸಿ ಎಂದು ಈ ಮೂಲಕ ತಿಳಿಸಿದರು.

300x250 AD

ಈ ಸಂದರ್ಭದಲ್ಲಿ ಟಿ.ಎಸ್.ಎಸ್. ಆಸ್ಪತ್ರೆಯ ಕಾರ್ಯಕಾರಿ ಅಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ, ಆಸ್ಪತ್ರೆಯ ಖಜಾಂಚಿ ಮಹಾಬಲೇಶ್ವರ ಪಿ. ಹೆಗಡೆ ಬಪ್ಪನಳ್ಳಿ, ಟ್ರಸ್ಟಿಗಳಾದಂತಹ ವೇದಾವತಿ ಸೀತಾರಾಮ ಹೆಗಡೆ, ಮಹಾಬಲೇಶ್ವರ ವಿ. ಜೋಶಿ ಕಾಗೇರಿ, ಟಿ.ಎಸ್.ಎಸ್. ಪ್ರಧಾನ ವ್ಯವಸ್ಥಾಪಕರಾದ ರವೀಶ ಹೆಗಡೆ, ಡಾ. ರಘುನಂದನ ಹೆಗಡೆ, ಧಾರವಾಡ ಸಹಕಾರ ಹಾಲು ಒಕ್ಕೂಟದ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕರಾದ ಎಂ ಎನ್ ಶಿರೋಳ್, ಜಿಲ್ಲಾ ಮುಖ್ಯಸ್ಥರಾದ ಎಸ್.ಎಸ್.ಬಿಜೂರ್, ಶೀತಲ ಕೇಂದ್ರದ ವ್ಯವಸ್ಥಾಪಕರಾದ ಕೃಷ್ಣ ಕೆ ಎನ್, ಮಾರುಕಟ್ಟೆ ಅಧಿಕಾರಿಯಾದ ಶರಣು ಮೆಣಿಸಿನಕಾಯಿ, ಮಾರುಕಟ್ಟೆ ವಿಭಾಗದ ಬಸವರಾಜ ಸಲೋನಿ, ಶಿರಸಿ ಉಪವಿಭಾಗದ ಗುರುದರ್ಶನ ಭಟ್, ಟಿ.ಎಸ್.ಎಸ್. ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top