Slide
Slide
Slide
previous arrow
next arrow

‘ದ ರಿಯಲ್ ಕೇರಳ ಸ್ಟೋರಿ’: ನಿಜವಾದ ಶಾಲಿನಿ ಉನ್ನಿಕೃಷ್ಣನ್ ಯಾರು!!??

300x250 AD

ಶಾಲಿನಿ ಉನ್ನಿ ಕೃಷ್ಣನ್ ನಿಜ ಹೆಸರು ನಿಮಿಷಾ. ಅವಳನ್ನು ಟ್ರಾಪ್ ಮಾಡಿದವನ ಹೆಸರು ಸಝ್ಜಾದ್ ರೆಹಮಾನ್ ಸಲೀಲ್. ಇವನ ಬೀಫ್ ಹೊಟೆಲ್ ಕೂಡ ನಡೆಯುತ್ತಿದೆ. ಇದಕ್ಕೆ ಮಾಧ್ಯಮದ ಕವರೇಜ್ ಕೂಡ ದೊರೆತಿದೆ. ಮದುವೆ ಆಗಿ ಅಪಘಾನಿಸ್ತಾನ ತೆರಳಿದ ನಿಮಿಷಾ ಅಲ್ಲಿ ಬಂಧಿತಳಾಗಿದ್ದಾಳೆ. ನಿಮಿಷಾಳ ಅಮ್ಮ ಬಿಂದು ಸಂಪತ್ ಹೋರಾಟ ನಡೆಸುತ್ತಿದ್ದಾರೆ. ಅವರು ಮಾಧ್ಯಮಕ್ಕೆ ನೀಡಿದ ಹೇಳಿಕೆ ಪ್ರಕಾರ ನಿಮಿಷಾ 2017 ರಿಂದಲೇ ಕಾಣೆಯಾಗಿದ್ದಾಳೆ.

ತಾಲಿಬಾನ್ ಅಪಘಾನಿಸ್ತಾನ್ ಟೇಕ್ ಓವರ್ ಬಳಿಕ ಎಲ್ಲಾ ಖೈದಿಗಳ ಬಿಡುಗಡೆ ಮಾಡಿದ್ದರು ಆದರೆ ಐಸಿಸ್ ಉಗ್ರರನ್ನು ವಾಪಸ್ ಜೈಲಿಗೆ ಹಾಕಿದರು. ಅವರಲ್ಲಿ ನಿಮಿಷಾ ಫಾತಿಮಾ ಕೂಡ ಸೇರಿದ್ದಳು. ಮತಾಂತರಗೊಂಡ ನಂತರ ಅವಳ ಹೆಸರು ಫಾತಿಮಾ. ಎನ್ಐಎ ಬಳಿ ಇಂದೂ ಸಹ ಈ ಪ್ರಕರಣ ಇದೆ. ಇಂಟೆಲಿಜೆನ್ಸ್ ಗೆ ಫಾತಿಮಾ ಭಾರತಕ್ಕೆ ತರಬೇಕೋ ಬೇಡವೋ ಎಂಬ ಸಂದಿಗ್ಧತೆ ಇದೆ. ಸ್ವತಃ ನಿಮಿಷಾ ಅಮ್ಮ ಹೇಳುವ ಹಾಗೆ ನಿಮಿಷಾಳ ಬ್ರೇನ್ವಾಷ್ ಮಾಡಿ ಅವಳು ಒಪ್ಪುವಂತೆ ಮಾಡಿ ಕರೆದೊಯ್ಯಲಾಗಿದೆ. ಒಂದು ವೇಳೆ ನಿಮಿಷಾ ಭಾರತ ವಿರೋಧ ಕೃತ್ಯ ಮಾಡಿದ್ದರೆ ಕಠಿಣ ಕ್ರಮವೂ ಆಗಲಿ ಎಂದಿದ್ದಾರೆ. ಇಂದಿಗೂ ನಿಮಿಷಾ ಕಾಬೂಲ್ ಜೈಲಲ್ಲಿ ಒದ್ದಾಡುತ್ತಿದ್ದರೆ, ರಮೀಜ್ ಮಿಯಾ ಆರಾಮಾಗಿ ಬೀಫ್ ಮಾರುತ್ತಿದ್ದಾನೆ. ಸಾಕ್ಷಿಗಳಿರದೆ ಆರಾಮಾಗಿದ್ದಾನೆ. ಯಾರೋ ಮಾಡುವವರು. ಯಾರೋ ಸಿಕ್ಕಿಹಾಕಿಕೊಳ್ಳುವವರು.

ಕೇಸ್ ಒಂದು.
ಇದು ತಾಜಾ ಸಮಾಚಾರ. ಮಾರ್ಚ್ 30 ಅಂದರೆ ಕೇರಳ ಸ್ಟೋರಿ ಬಿಡುಗಡೆಗೆ ಸರಿಯಾಗಿ ಮೂರು ದಿನ ಮೊದಲು ಇನ್ಫ್ಲುಯೆನ್ಸರ್ ಆಗಿರುವ ಅತುಲ್ಯ ತನ್ನ ಹೆಸರು ಬದಲಾಯಿಸುತ್ತಾಳೆ ಆಲಿಯಾ ಎಂದು. ರಿಸಾಲ್ ಮನ್ಸೂರ್ ನನ್ನು ಮದುವೆ ಆಗಿರುತ್ತಾಳೆ. ಈ ಇನ್ಟಾ ಸ್ಟೋರಿ ಹೇಳುತ್ತದೆ. ನನ್ನ ಅಬ್ದುಲ್ಲಾ ಹಾಗಲ್ಲ… ಇದಾಗುವುದೇ ಹಾಗೇ ಮೊದಲು ಹಿಂದು ಹುಡುಗಿ ಕಂಡುಹಿಡಿಯುತ್ತಾರೆ. ಎರಡನೇಯದಾಗಿ ಟ್ರಾಪ್ ಮಾಡುವುದು ಮೂರನೇಯದಾಗಿ ಬ್ರೇನ್ವಾಶ್. ನಾಲ್ಕನೆಯದಾಗಿ ಮದುವೆ ಮತ್ತು ಮತಾಂತರ.

ಕೇಸ್ ಎರಡು
ಗುರುವಾಯೂರಿನ ಗ್ಯಾಲಕ್ಸಿ ಇನ್ ಲಾಡ್ಜ್ ನಲ್ಲಿ ಎರಡು ಹೆಣ ದೊರೆಯುತ್ತದೆ. 19/1/2023 ರಂದು ಆದ ಈ ಪ್ರಕರಣ ಗೊತ್ತಾಗಿದ್ದು 23/01/2023ರಂದು. ಸಿಂಧು ಮತ್ತು ಮುಹಮ್ಮದ್ ಶರೀಫ್ ಹೆಣವಾಗಿರುತ್ತದೆ. ಗುರುವಾಯೂರಿನ ದೇವಾಲಯದ ಬಳಿಯೇ ಈ ಲಾಡ್ಜ್ ಇದ್ದದ್ದು. ಸಿಂಧು ಮದುವೆ ಆಗಿ ಎರಡು ಮಕ್ಕಳುಳ್ಳವಳು. ಶರೀಫ್ ಸಾಹೇಬರಿಗೂ ಮೂರು ಮಕ್ಕಳು ಕೆಲ ತಿಂಗಳ ಹಿಂದಿನಿಂದ ಸಿಂಧು ಶರೀಫ್ ಆಟೋರಿಕ್ಷಾದಲ್ಲಿ ನಿರಂತರ ಸುತ್ತುತ್ತಿದ್ದಳು..ಆತ ಕೂಡ ಅವಳ ಮನೆಗೆ ಬರುವುದು ಹೋಗುವುದು ನಡೆದಿತ್ತು.19 ಜನವರಿಗೆ ಎರಡು ವಾರ ಮೊದಲು ಅವರು ಮಾಯವಾದರು. ರಾಜ್ಯವನ್ನು ದಾಟಿದ್ದರು. ಆದರೆ ಗುರುವಾಯೂರಿನ ಲಾಡ್ಜ್ನಲ್ಲಕೆ ಏಕೆ ಸತ್ತರು ಎಂಬುದಕ್ಕೆ ಕಾರಣ ದೊರೆತಿಲ್ಲ. ಹೇಳಿ ಕೇಳಿ ಸೆಕ್ಯುಲರ್ ರಾಜ್ಯ ನೋಡಿ.

ಕೇಸ್ 3
ಕೇರಳ ರಾಜಕೀಯದಲ್ಲಿ ಧೂಳೆಬ್ಬಿಸಿದ ಪ್ರಕರಣ ಇದು. ಕೇರಳದಲ್ಲಿ ಕಮ್ಯುನಿಷ್ಟ್ ಮುದ್ರೆ ಇದ್ದರು ಅಸಲಿ ಆಟ ಇಸ್ಲಾಮಿನದೇ.ಇದು ಎಡಪಂಥೀಯ ಮುಸ್ಲಿಂ ಮುಖಂಡ ಮತ್ತು ಕ್ರಿಶ್ಚಿಯನ್ ಹುಡುಗಿ ಮದುವೆದ್ದು. ವರದಿ ಪ್ರಕಾರ ಕೇರಳದ ಸಿಪಿಐಮ್ ಮುಖಂಡ ಡಿ ವಯ್ ಎಫೈ ಕನೋತಿಯ ಸಚಿವ ಶೇಜಿನ್ ನ ಮೇಲೆ ಲವ್ ಜಿಹಾದ್ ಆರೋಪ ಬಂತು. ಸಿ ಪಿ ಐಮ್ ಪಾರ್ಟಿಯೇ ಹೇಳಿದ ಹಾಗೆ ಪ್ರೀತಿಸುವವರಾಗಿದ್ದರೆ ಮೊದಲೇ ಏಕೆ ಗೊತ್ತಾಗುತ್ತಿತ್ತು. ಏಕೆಂದರೆ ಸೌದಿಯಿಂದ ನರ್ಸ್ ಆಗಿ ಬಂದ ಹುಡುಗಿ ಮದುವೆಯ ಕೆಲ ದಿನ ಮೊದಲು ಕಾಣೆಯಾಗುತ್ತಾಳೆ. ನಂತರ ಸಿಕ್ಕಿದ್ದು ಶಾದಿ ಆಗಿ ಮತಾಂತರವಾದ ಬಳಿಕವೇ. ಅವಳ ಹೆಸರು ಜ್ಯೋತ್ಸ್ನಾ. ಏಳು ತಿಂಗಳಿನಿಂದ ಅವನ ಜೊತೆ ಸಂಪರ್ಕದಲ್ಲಿ ಇದ್ದಳು.ಸ್ಥಳಿಯವಾಗಿ ಇದು ದೊಡ್ಡ ಗಲಾಟೆ ಆದ ಕಾರಣ ಸಿಪಿಐಮ್ ಪಾರ್ಟಿಯೇ ಹೇಳಿಕೆ ನೀಡುತ್ತದೆ. ಸತ್ಯ ಏನು ಎಂದು ತನಿಖೆಯೇ ಹೇಳಬೇಕು. ಜ್ಯೋತ್ಸ್ನಾ ಮನೆಯವರು ನ್ಯಾಯಕ್ಕಾಗಿ ಕಾದಿದ್ಧಾರೆ. ಮಗಳು ಬರುವಳೆಂದು ಪಾರ್ಟಿಯ ಜಿಲ್ಲಾಧ್ಯಕ್ಷ ಎಮ್ ಜಿ ಥಾಮಸ್ ಇದನ್ನು ವಿಚಾರಿಸುವ ತಯಾರಿಯಲಿದ್ದಾರಂತೆ.

ಕೇಸ್ 4
ಡ್ರಗ್ ಎಂಟ್ರೆಪ್ರಿನ್ಯುರ್
ಇದು ಆಗಸ್ಟ್‌ 2022ರ ಪ್ರಕರಣ . ಕೇರಳದ ತೋಡುಕುಝ್ವಾ ಎನ್ನುವ ಐಫೆಲ್ ಟವರ್ ಪ್ರದೇಶದಲ್ಲಿ ಡ್ರಗ್ ಪ್ರಕರಣದಲ್ಲಿ ಇಬ್ಬರನ್ನು ರೆಡ್ ಹ್ಯಾಂಡ್ ಆಗಿ ಹಿಡಿಯುತ್ತಾರೆ.ಒಬ್ಬ ಮುಸ್ಲಿಂ ಹುಡುಗ ಇನ್ನೋರ್ವಳು ಹಿಂದು ಹುಡುಗಿ. ವಿಚಾರಿಸಿದಾಗ ಅಕ್ಷಯಾ ಹಿಂದಿನ ನಾಲ್ಕು ವರ್ಷದಿಂದ ಡ್ರಗ್ ಎಡಿಕ್ಟ್ ಆಗಿದ್ದಳು. ಯುನುಸ್ ಜೊತೆ ಸೇರಿ ಅದೇ ಡಿಪಾರ್ಟ್‌ಮೆಂಟ್ ವಿದ್ಯಾರ್ಥಿಗಳಿಗೆ ಡ್ರಗ್ ಸರಬರಾಜು ಮಾಡುತ್ತಿದ್ದಳು.ಅಕ್ಷಯಾ ಷಾಜಿಯನ್ನು ಯುನುಸ್ ಮೊದಲು ಪ್ರೀತಿಯ ಬಲೆಯಲ್ಲಿ ಕೆಡವಿದ. ಮಾದಕ ದ್ರವ್ಯದ ದಾಸಳಾಗಿಸಿಬಿಟ್ಟ. ಅವಳಿಂದಲೇ ಡ್ರಗ್ ದಂಧೆಯನ್ನೂ ಮಾಡಿಸಿದ. ಇದನ್ನು ಪೋಲೀಸ್ ತನಿಖೆಯೇ ಹೇಳುತ್ತದೆ.

ಕೇಸ್ ಐದು: ದಿ ರಿಯಲ್ ಮೈನಾರಿಟಿ
ಇದು ಸೆಪ್ಟೆಂಬರ್ 2022ರ ಪ್ರಕರಣ. ಇದರಿಂದ ಯಾರು ನಿಜಕ್ಕೂ ಅಲ್ಪಸಂಖ್ಯಾತರು ಮತ್ತೂ ಇನ್ನೂ ಬಹಿರಂಗವಾಗಿಲ್ಲ ಎಂದು ತಿಳಿಯಬಹುದು. ಕ್ರಿಶ್ಚಿಯನ್ ಮಹಿಳೆಯರು ಕೇರಳದ ಹೈಕೋರ್ಟನಲ್ಲಿ ತನ್ನ ಗಂಡ ಮುಸ್ಲಿಂಗೆ ಮತಾಂತರವಾಗಲು ಒತ್ತಾಯ ಮಾಡುತ್ತಿದ್ದಾನೆಂದು ಕೇಸು ಹಾಕಿದಳು. ಮತ್ತು ತನ್ನ ಗಂಡನ ಜೊತೆ ಇರುವುದಿಲ್ಲವೆಂದೂ ಹೇಳಿದಳು. ಈ ಪ್ರಕರಣ ಹೈಕೋರ್ಟಿನಲ್ಲಿ ಬಂತು ಮುಸ್ಲಿಂ ಮನುಷ್ಯನೂ ಹೇಬಿಯಸ್ ಕಾರ್ಪಸ್ ಅಡಿ ಅರ್ಜಿ ಹಾಕಿದ. ಅವರ ಮದುವೆ ಸ್ಪೆಶಲ್ ಮ್ಯಾರಿಯೇಜ್ ಆ್ಯಕ್ಟ್ ಅಡಿ ಆಗಿತ್ತು ಎಂದು ವಾದಿಸಿದ. ಮದುವೆಯ ನಂತರವೂ ತಮ್ಮ ತಮ್ಮ ಧರ್ಮ ಪಾಲಿಸಲು ಸ್ವಾತಂತ್ರ್ಯ ಸಂವಿಧಾನವೇ ಕೊಟ್ಟಿದೆ. ಆದರೆ ಇಲ್ಲಿ ಆದದ್ದು ಬೇರೆಯೇ. (ಸಂವಿಧಾನವಾದಿಗಳು ಈ ವಿಷಯದಲ್ಲಿ ಬಾಯಿ ಹೊಲಿದುಕೊಳ್ಳುತ್ತಾರೆ.) ಗಂಡನ ಅರ್ಜಿ ತಿರಸ್ಕರಿಸಿ ಈ ಪ್ರಕರಣವನ್ನು ಹೈಕೋರ್ಟ್ ವಜಾಗೊಳಿಸಿತು.ಪ್ರಕರಣ ತನಿಖೆ ಮಾಡಲು ಪೋಲೀಸರಿಗೆ ಆದೇಶಿಸಿತು. ತನಿಖೆ ಎಲ್ಲಿವರೆಗೆ ಬಂತೋ ಗೊತ್ತಿಲ್ಲ. ಆ ಮನುಷ್ಯನ ಹೆಸರೂ ಮಿಡಿಯದಲ್ಲೂ ಕಾಣಿಸಲಿಲ್ಲ.

ಕೇಸ್ ಆರು: ದಿ ಹೋಸ್ಟ್
ಇದು ಅಕ್ಟೋಬರ್ 2022ರ ಪ್ರಕರಣ.
ಕೇರಳದ ಧ್ವನಿ ಕರ್ನಾಟಕವರೆಗೂ ಹಬ್ಬಿತ್ತು. ಆದದ್ದು ಇಷ್ಟು. ಇಪ್ಪತ್ತೆರಡು ವರ್ಷದ ಯುವತಿ ಮಂಗಳೂರಿನ ಪಿಜಿ ಯಲ್ಲಿಸುಸೈಡ್ ಮಾಡಿಕೊಂಡಳು. ಅವಳ ಹೆಸರು ಭುವನಾ ಬಾಬು, ಕೇರಳದ ತ್ರಿಶೂರಿನಾಕೆ. ದೇರಳಕಟ್ಟೆಯ ಯೆನೆಪೋಯ ಕಾಲೇಜಿನಲ್ಲಿ ಫೋರೆನ್ಸಿಕ್ ಅಂತಿಮ ವರ್ಷ ಓದುತ್ತಿದ್ದ ಹುಡುಗಿ.ಆತ್ಮಹತ್ಯೆ ಮೊದಲು ಮನೆಯವರಿಗೆ ಒಂದು ಸಂದೇಶ ಕಳುಹಿಸಿ ತನ್ನ ಸಾವಿಗೆ ಅಲ್ತಾಫ್ ಕಾರಣ ಎಂದು ಹೇಳಿದ್ದಳು. ಅಲ್ತಾಫ್ ನ್ನು ಕಸ್ಟಡಿಗೆ ತೆಗೆದುಕೊಂಡರು. ತನಿಖೆ ಹಂತದಲ್ಲೇ ಪ್ರಕರಣ ಉಳಿದಿದೆ. ಇದರ ಕುರಿತು ವಿಶ್ವ ಹಿಂದೂ ಪರಿಷತ್ ಪ್ರತಿಭಟನೆ ನಡೆಸಿ ಈ ಪ್ರಕರಣದ ತನಿಖೆಯನ್ನು ಎನ್ಐಎ ಮಾಡಬೇಕು ಎಂದು ಒತ್ತಾಯಿಸಿದರು. ಏಕೆಂದರೆ ಇಂಥದೇ ಪ್ರಕರಣ ನಡೆಯುತ್ತಿದೆ. ಲವ್ ಜೆ ಹೆಚ್ಚುತ್ತಿದೆ ಎಂದು. ಇನ್ನೂ ತನಿಖೆಯಲ್ಲಿದೆ ಈ ಪ್ರಕರಣ, ಆದರೆ ಹಿಂದೂ ಹೆಣ್ಣುಗಳು ಹೋದಳಲ್ಲ ಅವಳು ಬರುತ್ತಾಳೆಯೇ?

ಕೇಸ್ 7 : ದಶಕದ ಕತೆ
ಸಿಮಿ ಕುಮಾರಿ ಹತ್ತು ವರ್ಷದ ಹಿಂದೆ ಕಾಣೆಯದವಳು ಮಲಪುರಂ ಪೋಲೀಸ್ ಸ್ಟೇಶನ್ ನಲ್ಲಿ ನವಂಬರ್ 2022ಕ್ಕೆ ಪತ್ತೆಯಾಗುತ್ತಾಳೆ. ಅವಳು ಮೇ 2012ರಲ್ಲೇ ನಾಪತ್ತೆ ಆಗಿದ್ದಳು. ಅವಳು ಒಬ್ಬಳೇ ಅಲ್ಲ ಮಗಳ ಸಹಿತ ನಾಪತ್ತೆ ಆಗಿದ್ದಳು ಹಂಜಿಲ್ ಎಂಬ ಸಾಬಣ್ಣನ ಜೊತೆ. ಹಂಜಿಲ್ ಜೊತೆ ಸಂಬಂಧ ಬೆಳೆಸಿದ್ದವಳು ಮಗುವನ್ನು ಗಂಡನ ಜೊತೆ ಬಿಟ್ಟು ಸಣ್ಣ ಮಗಳ ಜೊತೆ ಮಲಪ್ಪುರಂಗೆ ಬಂದದ್ದು ಸಾನಿಯಾ ಆಗಿ. ಒಂಬತ್ತು ವರ್ಷ ಹಂಜಿಲ್ ಜೊತೆ ಸಂಪರ್ಕದಲ್ಲಿ ಇದ್ದಳು ಕಾರಣಾಂತರದಿಂದ ಬೇರೆಯಾದಳು. ಪೋಲೀಸರ್ ಹಂಜಿಲ್ನನ್ನು ಬಂಧಿಸಿದರು. ಅವನ್ನು ವಿಚಾರಿಸಿದಾಗ ಸಿಮಿ ಕುಮಾರಿ ಸಿಕ್ಕಳು. ಸಿಮಿ ಕುಮಾರಿಯ ಸಣ್ಣ ಮಗಳೇನಾದಳು ಇನ್ನೂ ಗೊತ್ತಿಲ್ಲ. ಎಲ್ಲಿರುವಳೋ? ಹೇಗಿರುವಳೋ ? ಬದುಕಿರುವಳೋ ಗೊತ್ತಿಲ್ಲ..

ಕೇಸ್ 8: ಒಂದು ಫೋನ್ ಕಾಲ್
ಇದು ಕಾಸರಗೋಡಿನ ಕಥೆಯೇ. ಕನ್ಹಗಡ್ ನಲ್ಲಿ ಬಾಯ್ಫ್ರೆಂಡ್ನ ಬಂಧನ ಎನ್ನಜುವ ಸುದ್ದಿ ಪ್ರಕಟವಾಗುತ್ತದೆ. ಎಂಕೆ ಅಬ್ದುಲ್ ಎಂಬ ಕೇವಲ ಇಪ್ಪತ್ತು ವರ್ಷದ ಯುವಕನನ್ನು ಆತ್ಮಹತ್ಯೆಗೆ ಸಂಬಂಧಿತ ಪ್ರಕರಣದಲ್ಲಿ ಹಿಡಿಯುತ್ತಾರೆ. ಸಂತ್ರಸ್ತ ಯುವತಿ ಸುನಂದಾ ವಿನೋದ್, ಈ ಹಿಂದು ಹುಡುಗಿ ಆಟೋ ರಿಕ್ಷಾ ಚಾಲಕನ ಒಬ್ಬಳೇ ಮಗಳು. ನಂದಾ ಮತ್ತು ಅಬ್ದುಲ್ ಒಂದೇ ತರಗತಿಯಲ್ಲಿ ಓದುತ್ತಿದ್ದರು. ಹನ್ನೇರಡನೇ ಕ್ಲಾಸಿನಿಂದ ಅವರು ರಿಲೇಶನ್ಶಿಪ್ನಲ್ಲಿದ್ದರು ಎರಡು ವರ್ಷದ ರಿಲೇಶನ್ಶಿಪ್ ಬಳಿಕ ಕೈಯೆತ್ತಿ ಬಿಟ್ಟ. ಬ್ರೇಕ್ ಬಯಸಿದ್ದ. ಆದರೆ ನಂದಾ ಇದಕ್ಕೆ ಒಪ್ಪಲಿಲ್ಲ. ಆಗ ಅಬ್ದುಲ್ ಧಮಕಿ ಹಾಕಿದ. ಅವಳ ಖಾಸಗಿ ಚಿತ್ರ ಹರಿಬಿಡುವುದಾಗಿ ಬೆದರಿಸಿದ. ನಂದಾ ಅಕ್ಷರಶಃ ಬೆಚ್ಚಿದಳು. ಅಬ್ದುಲ್ಗೆ ಸಂಪರ್ಕ ಮಾಡಿದರೆ ಕರೆ ಹೋಗುತ್ತಿರಲಿಲ್ಲ. ಅವನ ಉದ್ದೇಶ ಅವಳು ಬಿಟ್ಟು ಹೋಗಲಿ, ಅಥವಾ ಸಾಯಲಿ ಇಲ್ಲವಾದರೆ ಹಿಂದೆ ಬರಲಿ ಎಂಬುದಾಗಿತ್ತು.ಅ.2022ರಲ್ಲಿ ನಂದಾ ಅಬ್ದುಲ್ನನ್ನು ವಿಡಿಯೋ ಕಾಲ್ನಲ್ಲಿ ಕನೆಕ್ಟ್ ಮಾಡಿದಳು. ಆತ ಮಧ್ಯೆ ಕರೆ ಕತ್ತರಿಸಿ ಓಡಿದ. ಅವಳು ಮತ್ತೆ ಅಕ್ಟೋಬರ್ ೩೧ರಂದು ಕರೆ ಮಾಡುತ್ತಾಳೆ. ಮಾತನಾಡುತ್ತಾಳೆ ತನ್ನ ಚಿತ್ರ ಲೀಕ್ ಆದರೆ ಜೀವ ಬಿಡುವೆನೆಂದು ಅವನಿಗೆ ಹೇಳುತ್ತಾಳೆ.ಕರೆ ಡಿಸ್ ಕನೆಕ್ಟ್ ಆಗುತ್ತದೆ. ಅವಳ ಖಾಸಗಿ ವಿಡಿಯೋವನ್ನು ಹರಿಬಿಡುವ ಒಂದು ಬೆದರಿಕೆ ಅವಳು ಆತ್ಮಹತ್ಯೆ ಮಾಡಿಕೊಳ್ಳಲು ವಿಧಿ ಇಲ್ಲದೆ ಕಾರಣವಾಗುತ್ತದೆ. ಇದುಪೋಲೀಸ್ ತನಿಖೆ ಸಾರಾಂಶ. ಅಬ್ದುಲ್ ಬಂಧನವಾದರೂ , ಪ್ರಕರಣ ಬಾಕಿ ಇದೆ.. ಯಾವಾಗ ಇತ್ಯರ್ಥವಾಗುತ್ತದೋ? ಹೆಣ್ಣುಮಗಳ ಬಲಿ ಅಂತು ಆಗಿ ಹೋಯಿತು. ಇಂಥ ಪ್ರಕರಣ ಗಳಿಗೆ ಸಮಯವಿರಬೇಕಲ್ಲ ಏಕೆಂದರೆ ಸಲಿಂಗ ವಿವಾಹಾದಿ ಮುಖ್ಯ ವಿಷಯದಲ್ಲಿ ನ್ಯಾಯಾಲಯ ಬ್ಯುಸಿ ಆಗಿದೆ…!!

ಕೇಸ್ 10: ಕಮ್ಯುನಿಸ್ಟ್ ಲವ್
ಪ್ರತಿ ಕಮ್ಯುನಿಸ್ಟರು ನೋಡಬೇಕಾದ ಪ್ರಕಜರಣ ಇದು, ಕಾಸರಗೋಡಿನದ್ದೇ ಪ್ರಕರಣ.
ವರ್ಷಾ ಎನ್ನುವ ಹುಡುಗಿ ಯುಸುಫ್ ಎಂಬ ಮುಸ್ಲಿಂ ಯುವಕನ ಜೊತೆ ಕಾಣೆಯಾದಳು. ಹಿಂದೂ ಸಂಘಟನೆಯ ಈ ಕುರಿತು ವರ್ಷಾಳ ಕಮ್ಯುನಿಸ್ಟ್ ತಂದೆಗೆ ಈ ವಿಷಯದ ಕುರಿತು ಮೊದಲಕೆ ಸೂಚನೆ ನೀಡಿತ್ತು. ಆದರೆ ಅವಳ ತಂದೆ ಇದನ್ನು ಅಲ್ಲಗಳೆದು ಹಿಂದು ಸಂಘಟನೆಗೇ ಬೈದ. ಪ್ಕರಣ ತಿರುವು ಪಡೆದದ್ದು ಕೆಲ ದಿನಗಳ ನಂತರ. ವರ್ಷಾ ಕಾಲೇಜಿನ ಕೆಲಸಕ್ಕಾಗಿ ಗೆಳೆಯರ ಜೊತೆ ಹೊರಗಡೆ ಹೋಗುತ್ತೇನೆಂದು ಮನೆಗೆ ಸಂದೇಶ ಕಳಿಸುತ್ತಾಳೆ. ಅದರ ನಂತರ ಅವಳ ಫೋನ್ ಬಂದ್. ಅವಳ ಗೆಳತಿಯರ ಫೋನ್ಗಳೂ ಬಂದಾಗುತ್ತವೆ. ಕಮ್ಯುನಿಸ್ಟ್ ತಂದೆ ಪೋಲೀಸರ ಬಳಿ ಹೋದಾಗಲೂ ಏನೂ ಪ್ರಯೋಜನವಾಗಲಿಲ್ಲ. ಕಮ್ಯುನಿಸ್ಟ್ ತಂದೆ ಮರಳಿ ಹಿಂದೂ ಸಂಘಟನೆಯ ಬಳಿ ಕೇಳಿಕೊಳ್ಳುತ್ತಾನೆ ಸಾಕಷ್ಟು ಹುಡುಕಾಟದ ನಂತರ ಯುನುಸ್ ಮತ್ತು ವರ್ಷಾಳ ನಿಕಾಹ್ ಆಗಿದ್ದನ್ನು ಕಂಡುಹಿಡಿಯುತ್ತಾರೆ.ಒಂದು ಪೋಸ್ಟ್ನಲ್ಲಿ ಈ ಮಾಹಿತಿ ದೊರೆಯುತ್ತದೆ. ಕಮ್ಯುನಿಸ್ಟ್ ತಂದೆ ತಮ್ಮಲ್ಲಿ ಏನು ಕೊರತೆ ಆಯಿತೆಂಬ ಚಿಂತೆಯಲ್ಲಿ ದಿನ ಕಳೆಯುತ್ತಾರೆ.

ಕೇಸ್ 11: ಹಿಂದೂ ಜಿಹಾದ್?
11ಮೇ 2021ಕ್ಕೆ ಸಿರಿಯಾದ ಹಮಾಸ್ ಉಗ್ರರು ಉಡಾಯಿಸಿದ ರಾಕೆಟ್ನಿಂದ ಮನೆಯೊಂದು ಧ್ವಂಸವಾಗುತ್ತದೆ. ಮನೆಯಲ್ಲಿ ವಾಸ ಇದ್ದ ನರ್ಸ್ ಒಬ್ಬಳು ಮೃತಳಾಗುತ್ತಾಳೆ. ಕೇರಳದ ಕ್ಯಾಥೋಲಿಕ್ ಚರ್ಚಿನ ಪಾದ್ರಿ ವರ್ಚುವಲ್ ಮೀಟಿಂಗ್ ನಲ್ಲಿ ಇಸಾವಾ ಸಮುದಾಯದ ಹುಡುಗರು ಕ್ರಿಶ್ಚಿಯನ್ ಹುಡುಗಿಯರನ್ನು ಮದುವೆಯಾಗಲು ಪ್ರಯತ್ನಿಸುತ್ತಾರೆ ಎಂದು ಹೇಳುತ್ತಾರೆ. ಇಸಾವಾ ಸಮುದಾಯ ಹಿಂದೂ ಸಮುದಾಯ ಇದರ ಹುಟ್ಟು ಶ್ರೀಲಂಕಾ. ಹಿಂದೆ ಚೇರರು ಆಳುತ್ತಿದ್ದಾ ಗ ಕೇರಳದಲ್ಲಿ ಬಂದು ನೆಲೆಗೊಂಡರು. ಆದರೆ ಕ್ಯಾಥೊಲಿಕ್ ಪಾದ್ರಿಯ ಹೇಳಿಕೆ ಹಿಂದುಗಳನ್ನು ಕಟಕಟೆಯಲ್ಲಿ ನಿಲಿಸುತ್ತದೆ. ಆದಗ್ಯೂ ಹಮಾಸ್ನಲ್ಲಿ ಮೃತಳಾದವಳಬಹೆಸರು ಸೌಮ್ಯಾ ಸಂತೋಷ್ ಹಾಗೂ ಆಕೆ ಕ್ಯಾಥೋಲಿಕ್ ಕ್ರಿಶ್ಚಿಯನ್. ಅವಳ ಪತಿ ಸಂತೋಷ್ ಇಂಥದ್ದೇನೂ ಆಗಿಲ್ಲ ಎಂದು ಪೊಲೀಸರಿಗೆ ಹೇಳಿಕೆ ಕೂಡ ನೀಡಿದ್ದ. ಅವರು 15ವರ್ಷದಿಂದ ಪರಿಚಿತರಾಗಿದ್ದರು ಮತ್ತು ಅವಳು ಇಪ್ಪತ್ತು ವರ್ಷ ತುಂಬಿದ ನಂತರ ಮದುವೆ ಆದರು. ಯಾವುದೇ ಲವ್ ಜಿಹಾದ್ ಇಲ್ಲ ಎಂದು. ಎನ್ಡಿಪಿ ಲೀಡರ್ ವೆಲಪಲ್ಲಿ ನಟೇಸನ್ ಈ ಕೇಸ್ ಗೆ ಪ್ರತಿಯಾಗಿ ಆ ಕ್ಯಾಥೊಲಿಕ್ ಪಾದ್ರಿಗೆ ಕೇಳಿಸಿದರು. ಹುಡುಗ ಹಿಂದು ಹುಡುಗಿ ಕ್ರಶ್ಚಿಯನ್ ಎನ್ನುವುದು ಇಲ್ಲಿ ಸಮಸ್ಯೆ ಆಗಿರಲಿಲ್ಲ. ಇದನ್ನು ಒಂದು ನೆಪವಾಗಿ ನಿವಾದ ಲವ್ ಜಿಹಾದ್ ಬಚಾವಾಗಿಸುವ ಯತ್ನವಷ್ಟೇ.
ಮಾಧ್ಯಮದ ಮುಂದೆ ಅಸಲಿಯತ್ತು ಬಯಲಾಗುತ್ತದೆ. ಕ್ಯಾಥೋಲಿಕ್ ಪಾದ್ರಿ ಇಷ್ಟಕ್ಕೂ ಬಚಾವ್ ಮಾಡುತ್ತಿದ್ದುದು ಯಾರನ್ನು? ವೆಲಪಲ್ಲಿ ನಟೇಶನ್ ಗೆ ಧನ್ಯವಾದ ಸಲ್ಲಬೇಕು ಸೌಮ್ಯ ಸಂತೋಷ್ ಕೇಸ್ ಮೇಲೆ ಒತ್ತಡ ತಂದು ತನಿಖೆ ಮಾಡಿಸಿದ್ದಕ್ಕೆ. ಇದಾದ ನಂತರ ಪಾದ್ರಿ ರಾಯ್ ಕಿರಣ್ ತಮ್ಮ ಹೇಳಿಕೆ ಹಿಂಪಡೆದು ಕ್ಷಮೆ ಕೂಡಾ ಕೇಳಿದರು. ಈ ಪ್ರಕರಣ ಹೇಳಿದ ಕಾರಣವೆಂದರೆ ಹಿಂದೂಗಳು ಲವ್ ಜಿಹಾದ್ ಮಾಡುತ್ತಾರೆ ಎಂದು ಕೆಲವರು ಹೇಳಬಹುದು ಹಾಗೂ ಲವ್ ಜಿಹಾದ್ ಒಂದು ಕಟ್ಟುಕಥೆ ಎನ್ನಬಹುದು ಎನ್ನುವ ಕಾರಣಕ್ಕೆ.

ಕೇಸದ್ 12: ಕಾಸರಗೋಡ್ ಸ್ಟೋರಿ
ಇದು 2020ಜನವರಿಯ ಪ್ರಕರಣ. ಇನ್ಸ್ಟಾಗ್ರಾಮ್ನ ದೋಸ್ತಿಯೊಂದು ಎಲ್ಲಿಗೆ ಕೊಂಡೊಯ್ಯುತ್ತದೆ ಎಂದು ಈ ಪ್ರಕರಣ ಹೇಳುತ್ತದೆ.ಈ ಪ್ರಕರಣ ಕೂಡ ಕಾಸರಕೋಡ್ಗೆ ಸಂಬಂಧಿಸಿದ್ಧು.ಕಾಸರಗೋಡಿನ ರಂಜಿತಾ ಎಂಬ ಹದಿನೆಂಟು ವರ್ಷದ ಹುಡುಗಿ ವಿವಾದಾತ್ಮಕವಾಗಿ ಹಿಂಸೆಗೊಳಪಟ್ಟು, ಬಲವಂತವಾಗಿ ಇಸ್ಲಾಮಿಗೆ ಮತಾಂತರಗೊಳಿಸತುವ ಪ್ರಕರಣ. ಇದರಲ್ಲಿ ಸಂಸದೆ ಶೋಭಾ ಕರಂದ್ಲಾಜೆ ನೆರವಿನಿಂದ ಸಂತ್ರಸ್ತ ಹುಡುಗಿ ಸಿಎಂ ಯಡಿಯೂರಪ್ಪ ಸಹಾಯ ಕೇಳುತ್ತಾಳೆ. ರಂಜಿತಾ ಒಂದು ವರ್ಷದ ಹಿಂದೆ ಇನ್ಸ್ಟಾಗ್ರಾಮ್ ಮೂಲಕ ಒಬ್ಬನ ಗೆಳೆತನ ಬೆಳೆಸಿದಳು ಪ್ರಕರಣದ ಒಂದು ತಿಂಗಳು ಮುಂಚೆ ಕೇರಳದಿಂದ ಬೆಂಗಳೂರಿಗೆ ಬರುತ್ತಾರೆ. ಆದರೆ ಇಲ್ಲಿ ನಾಲ್ಕು ದಿನ ಅವಳನ್ನು ಬಂಧನದಲ್ಲಿ ಇಡಲಾಯಿತು. ಇಸ್ಲಾಂ ಒಪ್ಪಿಕೊಳ್ಳಲು ಒತ್ತಡ ಹಾಕಿದರು. “ಒಂದು ವೇಳೆ ಮತಾಂತರವಾಗದಿದ್ದರೆ ಕುತ್ತಿಗೆ ಮುರಿದು ಕೊಲ್ಲುತ್ತೇನೆ” “ಇನ್ನೊಮ್ಮೆ ದೇವಸ್ಥಾನಕ್ಕೆ ಹೋದರೆ ಸುಮ್ಮನೆ ಬಿಡುವುದಿಲ್ಲ” ಎಂದು ಬೆದರಿಕೆ ಹಾಕುತ್ತಾರೆ. ಕೈ ಮೇಲೆ ಹಾಕಿದ್ದ ಓಂ ಹಚ್ಚೆಯನ್ನು ತೆಗೆದು ಹಾಕುವ ಯತ್ನ ನಡೆಸುತ್ತಾರೆ.ಹಣೆಯ ಮೇಲೆ ಕುಂಕುಮ ಧರಿಸದಂತೆ ಪೀಡಿಸುತ್ತಾರೆ. ಇದು ದೂರಿನಲ್ಲಿಯೇ ಇರುವ ಸತ್ಯಾಂಶ. ಹುಡುಗ ಕಾಸರಗೋಡ್ ನಿವಾಸಿ ರಿಸಬ್ ಮತ್ತು ಇವನ ಜೊತೆ ಆಚೆ ಬಂದದ್ದು ಮುಸ್ಲಿಂ ದಂಪತಿಗಳದ್ದು. ಅವನ ಹೆಸರು ಅನ್ಸಾಫ್ ನಂತರ ಬೆಂಗಳೂರು ಪೋಲೀಸರು ಬಂಧಿಸುತ್ತಾರೆ. ಹುಡುಗಿಯ ಬ್ಲಾಕ್‌ ಮೇಲ್ ಮಾಡಲಾಗುತ್ತಿತ್ತು ರಿಸಬ್ ಬಳಿ ಹುಡುಗಿಯ ಖಾಸಗಿ ಫೋಟೊ ಹಾಗೂ ವಿಡಿಯೋ ಇತ್ತು. ಅದನ್ನು ಹರಿಬಿಡುವ ಧಮಕಿ ಕೊಡುತ್ತಿದ್ದರು. ಇದನ್ನು ಕಾಸರಗೋಡಿನ ಪೋಲಿಸರಿಗೆ ಹೇಳಿದಾಗ ಕೇಳಿಸಲೇ ಇಲ್ಲ. ಹಾಗಾಗಿ ಹುಡುಗಿ ಉಡುಪಿಯ ಸಂಸದೆ ಶೋಭಾ ಕರಂದ್ಲಾಜೆ ನೆರವು ಪಡೆದಳು. ಸೀದಾ ಕರ್ನಾಟಕ ಮುಖ್ಯಮಂತ್ರಿ ಕಡೆ ತಲುಪಿದಳು. ಈ ಪ್ರಕರಣ ಪೋಸ್ಕೊ ಅಡಿ ಬಂತು. ಕರ್ನಾಟಕ ಹೋಗಿದ್ದಕ್ಕೆ.

300x250 AD

ಕೇಸದ್ 13: ದಿ ಕೋರ್ಟ್ ಜಡ್ಜ್ಮೆಂಟ್
2019 ಸರ್ವೋರಮ್ ರೇಪ್ ಪ್ರಕರಣ. ಮೊಹಮ್ಮದ್ ಜಾಸ್ಮಿನ್ ಎಂಬ ಮುಸ್ಲಿಂ ಯುವಕ ಹದಿನೆಂಟು ವರ್ಷದ ತನ್ನದೇ ಕ್ಲಾಸ್ ಮೇಟ್ಗೆ ನಶೆ ಏರಿಸಿ ಕೊಡಿಸಿ ಸರ್ವೋರಮ್ ಪಾರ್ಕ್ನಲ್ಲಿ ಅತ್ಯಾಚಾರ ಮಾಡುತ್ತಾನೆ. ಅದರ ವಿಡಿಯೋ ಕೂಡ ಮಾಡುತ್ತಾನೆ. ಅದರ ಆಧಾರದ ಮೇಲೆ ಹಣವನ್ನು ಕೀಳುತ್ತಿದ್ದ. ಇಸ್ಲಾಂ ಸೇರಲು ಒತ್ತಾಯ ಮಾಡುತ್ತಿದ್ದ. ಹುಡುಗಿ ಕ್ರಿಶ್ಚಿಯನ್ ಹಾಗೂ ಅಪ್ರಾಪ್ತೆ ಆದ ಕಾರಣ ಪ್ರಕರಣ ವೇಗ ಪಡೆಯಿತು. ವಿಪರ್ಯಾಸ ಏನೆಂದರೆ ಮೊಹಮದ್ ಜಾಸ್ಮಿನ್ ಸಾಕ್ಷಿ ಅಭಾವದಿಂದ ಪಾರಾಗಿ ಬಿಟ್ಟ. ವಿಡಿಯೋ, ಫೋಟೋಗಳ ಹೊರತಾಗಿ ಕೋರ್ಟ್ಗೆ ಬಲವಾದ ಸಾಕ್ಷಿ ಬೇಕಿತ್ತು.! ಇಪ್ಪತ್ನಾಲ್ಕು ಸಾಕ್ಷಿಗಳ ವಿಚಾರಣೆ ನಡೆದಿತ್ತು.

ಕೇಸ್ 14 : ಪ್ರೊಫೆಸರ್ಸ್ ಬುಕ್

ಇದು 2019ರದ್ದು. ಈ ಪ್ರಕರಣದಿಂದ ಶಿಕ್ಷಣಕ್ಕಿಂತ ಪುಸ್ತಕ ಮುಖ್ಯ ಎಂದು ತಿಳಿಯುತ್ತದೆ. ಮಲಪುರಂ ಜಿಲ್ಕೆಯ ಕುಟಿಪುರಂ ಪ್ರದೇಶದ ಕಾಲೇಜಿನಲ್ಲಿ 24 ವರ್ಷದ ಅಸಿಸ್ಟೆಂಟ್ ಪ್ರೊಫೆಸರ್, 25 ವರ್ಷದ ಮೊಹಮ್ಮದ್ ಹಫೀಜ್ ಪೆರಂಬುಲವು ತ್ರಿಸೂರ್ನ ಕಾಲೇಜ್ ಪ್ರೊಫೆಸರ್ ಮೇಲೆ ಲೈಂಗಿಕ ಶೋಷಣೆ, ಖಾಸಗಿ ಫೋಟೋ ಲೀಕಿಂಗ್ ಆರೋಪ ಮಾಡಲಾಗುತ್ತದೆ. ಆ ಹುಡುಗಿ ಮತ್ತು ಹಫೀಜ್ ಮಿಯಾ ನಾಲ್ಕು ವರ್ಷದಿಂದ ರಿಲೇಶನ್ಶಿಪ್ ನಲ್ಲಿದ್ದರು.ಈ ನಾಲ್ಕು ವರ್ಷಗಳಲ್ಲಿ ಹುಡಗಿಯಲ್ಲಿ ಆತ ಬಹುತೇಕ ಮೊಮಿನಾ ( ಸಾಬಿ) ಆಗಿಸಿಬಿಟ್ಟಿದ್ದ. ಹುಡುಗಿಯೇ ಸ್ವತಃ ನೀಡಿದ ದೂರಿನ ಅನ್ವಯ , ಹಫೀಸ್ ಅವಳಿಗೆ ಆಕೆ ಇಸ್ಲಾಂ ರಿವಾಜನ್ನು ಒಪ್ಪಿಕೊಳದಿದ್ದರೆ ತನ್ನ ಕುಟುಂಬ ನಿನ್ನನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿದ್ದ. ಹಫೀಜ್ ಮಿಯಾ ಎನ್ಆರ್ಐ ಆಹಿ ದುಬೈಗೆ ಪರಾರಿ ಆಗಿದ್ದಾನೆ. ಇತ್ತ ಹುಡುಗಿಯ ಖಾಸಗಿ ಪೋಟೋ ವಿಡಿಯೋ ವೈರಲ್ ಆಗಿವೆ. ತನ್ನ ಬಳಿ ಇಸ್ಲಾಂ ಒಪ್ಪಿಕೊಳ್ಳದೆ ಇರುವ ಹಾಗಿಲ್ಲ ಎನ್ನುವ ಪರಿಸ್ಥಿತಿಗೆ ಆಕೆ ತಲುಪಿದ್ದಾಳೆ.

ಯಾವ ರೀತಿ ಭಾವನಾತ್ಮಕವಾಗಿ ಕುಗ್ಗಿಸಿ ‘ ಕುಬುಲ್ ಹೇ ಕುಬುಲ್ ಹೇ..’ ಎನ್ನುವಂತೆ ಮಾಡಿಸುತ್ತಾರೆ ಎಂದು ಕೇರಳ ಸ್ಟೋರಿ ನೋಡಿದರೆ ತಿಳಿಯುತ್ತದೆ.

ಕೇಸ್ 15 : ಸುಪ್ರೀಂ ಜಡ್ಜ್ಮೆಂಟ್
ಇದು ಬಹುಚರ್ಚಿತ ಪ್ರಕರಣ. ಹಲವಾರು ಸಂದರ್ಭ ಸಮಯದಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಕೊನೆಗೂ ನ್ಯಾಯ ದೊರಕಿತೇ?
ಇದು ಹಾದಿಯಾ ಪ್ರಕರಣ. ಅವಳು ಅಖಿಲಾ ಅಗಿದ್ದಳು. ಶಫೀನ್ ಜಹಾನ್ ವರ್ಸಸ್ ಅಶೋಕನ್ ಕೆ ಎಮ್ ಪ್ರಕರಣ ಎಂದು ಕರೆಯಲಾಗುತ್ತದೆ. ಈ ಪ್ರಕರಣ ಕೇರಳ ಹೈಕೋರ್ಟಿನಿಂದ ಸುಪ್ರೀಂ ಕೋರ್ಟ್ವರೆಗೂ ಹೋಯಿತು. 2010ರಲ್ಲಿ ಅಖಿಲಾ ಎಂಬ ಹುಡುಗಿ ಜಸಿಲಾ ಎಂಬುವಳ ಸಂಪರ್ಕಕ್ಕೆ ಬರುತ್ತಾಳೆ.ಅವಳು ಮೆಡಿಕಲ್ ಕಾಲೇಜು ಒದುತ್ತಿದ್ದವಳು ತಮಿಳುನಾಡಿನ ಸಾಲೆಂ ನವಳು. ಜಸೀಲಾಳ ಸೋದರಿ ಫಸೀನಾ ಕೂಡ ಅದೇ ಕಾಲೇಜಿನಲ್ಲಿ ಓದುತ್ತಿದ್ದಳು. ಇದೇ ಸಮಯದಲ್ಲಿ ಜಸೀಲಾ ಫಸೀನಾ ಜೋಡಿ ಅಖಿಲಾ ರೂಮ್ ಮೇಟ್ಗಳಾಗುತ್ತಾರೆ. ಆಖಿಲಾಳನ್ನು ನಿಧಾನವಾಗಿ ಇಸ್ಲಾಂ ಬಗ್ಗೆ ಹೇಳುತ್ತಾರೆ. ಸೆಳೆಯುತ್ತಾರೆ. ಕೊನೆಗೆ ಡಿಸೆಂಬರ್ 2016ರಲ್ಲಿ ಅಖಿಲಾ ಶಫೀನ್ ಜಹಾನ್ ಎಂಬ ಮೊಮಿನ್ ಜೊತೆ ನಿಕಾಹ್ ಮಾಡಿಕೊಳ್ಳುತ್ತಾಳೆ. ಇಸ್ಲಾಂ ಸ್ವೀಕರಸಿದ ಹಾದಿಯಾ ಆಗುತ್ತಾಳೆ. ಅವಳ ತಂದೆ ಆಶೋಕನ್ ಕೆ ಎಮ್ ಕೇರಳ ಹೈಕೋರ್ಟ್ ಬಾಗಿಲು ತಟ್ಟುತ್ತಾರೆ. ಕೋರ್ಟ್ ಸಹ ಈ ಪ್ರಕರಣದಲ್ಲಿ ಇವರ ಮದುವೆ ಅಸಿಂಧು ಎಂದು ತೀರ್ಪು ನೀಡುತ್ತದೆ. ಅವಳನ್ನು ಮರಳಿ ಹಾಸ್ಟೆಲ್ ಗೆ ಮರಳಲು ಆದೇಶ ಮಾಡುತ್ತದೆ. ಕತೆಯಲ್ಲಿ ತಿರುವು ಬರುವುದು , ಸುಪ್ರೀಂ ಕೋರ್ಟ್ ಈ ಪ್ರಕರಣ ಬಗೆದ ಬಳಿಕ. ಶಫೀನ್ ಮಿಯಾ ಸುಪ್ರೀಮ್ ಕೋರ್ಟ್ ಗೆ ತೆರಳಿ ಆದೇಶ ಬದಲಿಸಿದ ಬಳಿಕ. ಆಶೋಕನ್ ಹೇಳುವ ಪ್ರಕಾರ ಫಸೀನ ಎಂಬ ಹುಡುಗಿ ಅಕಿಲಾ ಜೊತೆ ಸದಾ ಇರುತ್ತಿದ್ದಳು. ಈ ಫಸೀನಾ ಪಿಎಫ್ಐ ಸಂಘಟನೆಯ ಸಕ್ರಿಯ ಸದಸ್ಯೆ. ಅಶೋಕನ್ ಕೋರ್ಟ್ ಆದೇಶದ ಮೇರೆಗೆ ಮಗಳನ್ನು ಭೇಟಿ ಆಗಲು ಬಂದಾಗೆಲ್ಲ ಅಖಿಲಾ ಜೊತೆಯೇ ಇರುತ್ತಿದ್ದಳು. ಯಾವಾಗ ಮೋದಿ ಸರಕಾರ ಪಿಎಫ್ಐ ಬ್ಯಾನ್ ಮಾಡಿತೋ ಅಶೋಕನ್ಗೆ ಮಗಳನ್ನು ಒಬ್ಬಳೇ ಭೇಟಿ ಆಗುವ ಅವಕಾಶ ದೊರೆಯಿತು. ಇಂದಿಗೂ ಅವರ ಮಗಳು ಮರಳಿ ಬರಲಾಗದಷ್ಟು ಒಗ್ಗಿಕೊಂಡು ಬಿಟ್ಟಿದ್ದಾಳೆ. ಇನ್ನು ಸುಪ್ರೀಂ ಕೋರ್ಟ್ ಪರವಾಗಿ ತೀರ್ಪಿನಿಂದ ಶಫೀನ್ ಮಿಯಾ ತಲೆಮರೆಸಿಕೊಂಡು ಓಡಾಡುತ್ತಿದ್ದಾನೆ. ಹೊರತು ಹಾದಿಯಾ ಜೊತೆ ಇಲ್ಲ.
ಇದರ ಅರ್ಥ ಯಾವ ಕಾರಣಕ್ಕೆ ಆತ ಹಾಗೆ ಮಾಡಿದ್ದು? ಸಮಾಜಕ್ಕೆ ಏನಾದರೂ ಸಂದೇಶ ಕೊಡಲಿಕ್ಕಾ?

ಹುಡುಕುತ್ತ ಹೋದರೆ ಸಾಕಷ್ಟು ಅಂಕಿ ಅಂಶ ಸಿಗುತ್ತದೆ.
ಯೂಟ್ಯೂಬ್ ನಲ್ಲಿ ಖೊರಾಸಾನ್ ಫೈಲ್ಸ್ ವಿಡಿಯೋ ನೋಡಿ. ಹೇಗೆ ಲವ್ ಜಿಹಾದಿನ ಅಂತಿಮ ಪಯಣ ಎಲ್ಲಿ ಆಗುತ್ತದೆ ಎಂದು ಹೇಳಬೇಕೆಂದರೆ ಐಸ್ಐಎಸ್ ಖೊರಾಸಾನ್ ಯುನಿಟ್ ಆಗಿದೆ. ಖೊರಾಸಾನ್ ಪದಕ್ಕೆ ಐತಿಹಾಸಿಕ ಭೌಗೋಳಿಕ ಇತಿಹಾಸವಿದೆ. ಇಸ್ಲಾಮಿಕ್ ದಾಳಿಯ ಮುನ್ನ ಅಫ್ಘಾನಿಸ್ತಾನ ಮತ್ತ ಮಧ್ಯ ಏಷ್ಯಾ ಭಾಗವನ್ನು ಖೊರಾಸಾನ್ ಎನ್ನುತ್ತಿದ್ದರು. ಪರ್ಷಿಯನ್ ಸಾಮ್ರಾಜ್ಯ ಆಗ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಪರ್ಷಿಯನ್ ಸಾಮ್ರಾಜ್ಯ , ಇರಾನಿಯನ್ ಸಾಮ್ರಾಜ್ಯ ಅಲ್ಲ. ಇದನ್ನು ವೇದಕಾಲ, ಚಂದ್ರಗುಪ್ತ ಮೌರ್ಯರ ಕಾಲದಿಂದ ಗುರುತಿಸಬಹುದು. ಆಗ ಅದು ಗಾಂಧಾರವಾಗಿತ್ತು.

ಕೇರಳ ಕೋರ್ಟ್ ಕೂಡ ವಾರ್ನ್ ಮಾಡುತ್ತ ಬಂದಿತ್ತು.
ಕೇರಳದ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಒಮನ್ ಚಾಂಡಿ ಜೂನ್ 2017ರಲ್ಲೆ ಹೇಳಿದ್ದರು. 2006ರಿಂದ 2012ರ ನಡುವೆ 7800 ಜನ ಇಸ್ಲಾಮಿಗೆ ಮತಾಂತರ ಆಗಿದ್ದಾರೆ ಎಂದು.
2009ರಿಂದ 2012ರ ಮಧ್ಯೆ 2667 ಜನ ಯುವತಿಯರು ಮತಾಂತರವಾಗಿದ್ದು ಅದರಲ್ಲಿ 2195 ಜನ ಹಿಂದುಗಳಾದರೆ 492ಜನ ಕ್ರಿಶ್ಚಿಯನ್ನರು. ಕೇರಳ ಮುಖ್ಯಮಂತ್ರಿಯ ಈ ಹೇಳಿಕೆ ತುಣುಕನ್ನು ಚಿತ್ರದಲ್ಲಿ ಸೇರಿಸಲು ಸೆನ್ಸಾರ್ ಮಂಡಳಿ ಕತ್ತರಿ ಹಾಕಿದೆ. ಆದರೂ ಈ ಹೇಳಿಕೆ ಜನರನ್ನು ತಲುಪಿದೆ. ಕೇರಳ ಮುಖ್ಯಮಂತ್ರಿ ಅಚ್ಯುತಾನಂದನ್ 2010ರಲ್ಲೇ ಈ ಕುರಿತು ಹೇಳಿದ್ದರು.

ಇಂದಿನ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಲವ್ ಜಿಹಾದ್ ಕುರಿತು ಯೂ ಟರನ್ ಹೊಡೆದಿದ್ದಾರೆ ಇವರ ರಹಸ್ಯವೂ ಬಯಲಾಗುತ್ತದೆ. ಕೇರಳದ ಲೋಕೋಪಯೋಗಿ ಸಚಿವ ಮೊಹಮ್ಮದ್ ರಿಯಾಜ್ ಪಿಣರಾಯಿ ವಿಜಯನ್ ಅಳಿಯ. ಪಿಣರಾಯಿ ವಿಜಯನ್ ಮಗಳು ವೀಣಾ ವಿಜಯನ್ ಅವಳ ಮೊದಲನೇ ಪತಿ. ಆದರೆ ವೀಣಾ ವಿಜಯನ್ ಮೊಹಮದ್ ರಿಯಾಜ್ನ ಎರಡನೇ ಹೆಂಡತಿ. ಅಂದಹಾಗೆ ರಿಯಾಜ್ನ ಮೊದಲ ಪತ್ನಿ ಡಾ.ಸಮೀಹಾ ಕೂಡ ಮೊದಲು ಹಿಂದೂ ಆಗಿದ್ದವಳು. ಮದುವೆಯ ನಂತರ ಸಮೀಹಾಳಿಗೆ ಕೆಲಸ ಮಾಡಲು ಅನುಮತಿ ನೀಡಲಿಲ್ಲ. ಹಾಗೂ ಮೊಹಮದ್ ರುಯಾಜ್ ಮೇಲೆ ಅವಳು ಕೌಟುಂಬಿಕ ದೌರ್ಜನ್ಯದ ಪ್ರಕರಣ, ಎರಡು ಮಕ್ಕಳ ಅಪರಣದ ಕೇಸ್ ದಾಖಲಿಸಿದ್ದಾರೆ. ಈ ಎಲ್ಲ ಪ್ರಕರಣಗಳು ವೀಣಾ ವಿಜಯನ್ ಮದುವೆ ನೊಂದಣಿ ಆಗುವ ಸ್ವಲ್ಪ ಸಮಯ ಮುನ್ನ ಖುಲಾಸೆ ಆಗಿಹೋದವು.
ಕೇರಳದ ಮುಖ್ಯಂಮತ್ರಿ ಮನೆಯಲ್ಲಿಯೇ ಹೀಗಾದಾಗ ರಾಜ್ಯದಲ್ಲಿ ಏನಾಗಿರುತ್ತದೆ.?

ಕೇರಳದ ಶ್ರುತಿ ಎಂಬುವವರು ಎಂಟು ವರ್ಷಗಳ ಹಿಂದೆ ರೆಹಮತ್ ಆಗಿ ಮತಾಂತರವಾದರು. ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿ ಬೆಳೆದವಳು. ಖಾಸಗಿ ಕಾಲೇಜಿನಲ್ಲಿ ಪದವಿ ಓದುವಾಗ ದುರದೃಷ್ಟವಶಾತ್ ಸಿಕ್ಕ ಗೆಳತಿಯರು ಮುಸ್ಲಿಮರಾಗಿದ್ದರು.ಮುಸ್ಲಿಂ ಮೆಜಾರಿಟಿ ಇದ್ದ ಕ್ಲಾಸ್‌. ಅವಳು ಬರಿ ಓದಿನ ಕುರಿತು ಗಮನ ಹರಿಸುತ್ತಿದ್ದರೂ ಸ್ನೇಹಿತೆಯರು ತೊಂದರೆ ಕೊಡುತ್ತಿದ್ದರು. ಚೆನ್ನಾಗಿ ನಟನೆ ಮಾಡಲು ಅರಿತಿದ್ದ ಅವರು ನಿಧಾನಕ್ಕೆ ಶ್ರುತಿಯ ಕುರಿತು, ನಡವಳಿಕೆ ಕುರಿತು ತಿಳಿದುಕೊಂಡರು. ನಂತರ ಅವರ ಧಾರ್ಮಿಕತೆಯನ್ನು ತಲೆಗೆ ತುಂಬಿದರು. ನಿಜವಾಗಿ ತೊಂದರೆ ಗೊಳಗಾದ ಇಂಥಹವರ ಮಾತು ಕೇಳಿಯೂ ನಂಬುದಿಲ್ಲವೆಂದರೆ ಅದು ನಾಚಿಕೆಗೇಡೇ..

ಇಂದು ಕೇರಳ ರಿಯಲ್ ಸ್ಟೋರಿಯ ನಿರ್ಮಾಪಕ ನಿರ್ದೇಶಕರು ನಿಜವಾದ ಸಂತ್ರಸ್ತರನ್ನು ಎದುರು ತಂದು ತೋರಿಸಿದ್ದಾರೆ. ಕೇರಳ ಸ್ಟೋರಿ ಸುಳ್ಳು ಎನ್ನುವುದಕ್ಕೆ ಉತ್ತರ ನೀಡಿದ್ದಾರೆ. ಆದರೆ ಸಂತ್ರಸ್ತರಿಗೆ ಇನ್ನೂ ನ್ಯಾಯ ದೊರೆತಿಲ್ಲ. ಹೀಗೇ ಆದರೆ ಕೇರಳ ಸದ್ಯವೇ ಇನ್ನೊಂದು ಕಾಶ್ಮೀರ ಆಗಲಿದೆ. ನಾರಾ-ಎ-ತಕ್ದೀರ್ ಕೂಗೇಳುತ್ತದೆ. 1991ರ ಕತೆಗೆ ಬರೀ ಮೂವತ್ತು ವರ್ಷದ ಹಿಂದೆ ಆಗಿದೆ. ಅದು ಮತ್ತೆ ಮರುಕಳಿಸದೆ ಇರಲಿ. ತಮ್ಮನ್ನು ತಾವು ತಟಸ್ಥ ಎಂದು ತೋರಿಕೊಳ್ಳುವ ಭರದಲ್ಲಿ ಸತ್ಯ ಏನೆಂದು ಎಲ್ಲರಿಗೂ ಗೊತ್ತಿದೆ. ಆದರೆ ನಂಬುವವರಿಲ್ಲ. ಒಪ್ಪಿಕೊಳ್ಳುವುದಿಲ್ಲ.

link: https://youtu.be/kogE5uo91co

ಕೃಪೆ: https://www.youtube.com/@BharatVerseAnalysis

Share This
300x250 AD
300x250 AD
300x250 AD
Back to top