• Slide
  Slide
  Slide
  previous arrow
  next arrow
 • ವರ್ಗಾವಣೆಗೊಂಡ ಶಿಕ್ಷಕರಿಗೆ ಬೀಳ್ಕೊಟ್ಟ ಕ್ಷೇತ್ರ ಶಿಕ್ಷಣಾಧಿಕಾರಿ

  300x250 AD

  ಅಂಕೋಲಾ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ (ಸಿಆರ್‌ಪಿ) ಸೇವೆ ಸಲ್ಲಿಸುತ್ತಿದ್ದ ಶಿಕ್ಷಕರಾದ ಕೆ.ಎಂ.ಗೌಡ ಭಟ್ಕಳದ ಕೋಗ್ತಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಹಾರವಾಡದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆಯಾದ ರೇಷ್ಮಾ ನಾಯ್ಕ ಅವರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಗೌರವಪೂರ್ವಕವಾಗಿ ಬೀಳ್ಕೊಡಲಾಯಿತು.

  ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಲಕ್ಷ್ಮೀ ಪಾಟೀಲ್ ಮಾತನಾಡಿ, ವರ್ಗಾವಣೆ ಎನ್ನುವುದು ನೌಕರರ ಬದುಕಿನಲ್ಲಿ ಸರ್ವೇಸಾಮಾನ್ಯ. ಕರ್ತವ್ಯದ ಅವಧಿಯಲ್ಲಿ ಯಾರು ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುತ್ತಾರೋ ಅಂತವರಿಗೆ ಗೌರವ ಅರಸಿ ಬರುತ್ತದೆ. ಅದೇ ರೀತಿಯಲ್ಲಿ ನಮ್ಮ ಕಛೇರಿಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದ ಕೆ.ಎಂ.ಗೌಡ ಹಾಗೂ ರೇಷ್ಮಾ ನಾಯ್ಕ ವರ್ಗಾವಣೆಯಾಗಿದ್ದು, ಅವರ ಮುಂದಿನ ವೃತ್ತಿ ಜೀವನ ಸುಖಕರವಾಗಲಿ ಎಂದು ಹಾರೈಸಿದರು.
  ಈ ಸಂದರ್ಭದಲ್ಲಿ ದೈಹಿಕ ಶಿಕ್ಷಣ ಪರಿವೀಕ್ಷಕ ಮಂಜುನಾಥ್ ನಾಯಕ್, ಪತ್ರಾಂಕಿತ ವ್ಯವಸ್ಥಾಪಕ ಮಾರುತಿ ಮುದ್ಗೇಕರ್, ಶಿಕ್ಷಣ ಸಂಯೋಜಕ ಬಾಲಕೃಷ್ಣ ನಾಯ್ಕ, ರಚನಾ ನಾಯಕ, ಅಧೀಕ್ಷಕರಾದ ಪ್ರಮೋದ ದೊಡ್ಡಮನಿ, ಗಿರೀಶ್ ಸೈಲ್, ಸಿಬ್ಬಂದಿಗಳಾದ ಜಯಂತ್ ನಾಯ್ಕ, ಆನಂದು ಗೌಡ, ಅದಿವೇಶ್ ನಾಯಕ, ಗಣಪತಿ ನಾಯ್ಕ, ಅರವಿಂದ್ ನಾಯ್ಕ, ಅಕ್ಷತಾ ನಾಯ್ಕ, ಸಂತೋಷ್ ನಾಯ್ಕ, ಸುಲೋಚನಾ ಹುಲಸ್ವಾರ್, ಪದ್ಮಾವತಿ ಆಗೇರ್ ಉಪಸ್ಥಿತರಿದ್ದರು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top