• Slide
    Slide
    Slide
    previous arrow
    next arrow
  • ಔಷಧೀಯ ಸಸ್ಯಗಳ ಉದ್ಯಾನವನ ಉದ್ಘಾಟನೆ

    300x250 AD

    ಜೊಯಿಡಾ: ತಾಲ್ಲೂಕು ಕೇಂದ್ರದಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಅರಣ್ಯ ಇಲಾಖೆಯ ಸಹಯೋಗದೊಂದಿಗೆ 24 ಅಪರೂಪದ ಔಷಧೀಯ ಸಸ್ಯಗಳಿರುವ ಔಷಧೀಯ ಸಸ್ಯಗಳ ಉದ್ಯಾನವನವನ್ನು ಉದ್ಘಾಟಿಸಿ ವಿಶಿಷ್ಟ ರೀತಿಯಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.

    ಹಳಿಯಾಳ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿ.ಎಚ್. ಬಾಲಚಂದ್ರ ಸಸಿ ನೆಡುವ ಮೂಲಕ ಔಷಧೀಯ ಸಸ್ಯಗಳ ಉದ್ಯಾನವನವನ್ನು ಉದ್ಘಾಟಿಸಿ ಮಾತನಾಡುತ್ತಾ, ಎಲ್ಲವನ್ನು ದಯಪಾಲಿಸುವ ಪ್ರಕೃತಿ ಮಾತೆಯನ್ನು ಗೌರವಿಸುವ ಆರಾಧಿಸುವ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಮೈಗೂಡಿಸಿಕೊಂಡು ನಡೆದಾಗ ಸಮೃದ್ಧ ಪರಿಸರವನ್ನು ಉಳಿಸಿ ಬೆಳೆಸಲು ಸಾಧ್ಯ. ಈ ಭಾಗದಲ್ಲಿ ಹೇರಳವಾಗಿ ಔಷಧೀಯ ಸಸ್ಯಗಳು ಇದ್ದು, ಇದರ ಮಹತ್ವ ಮತ್ತು ಪ್ರಯೋಜನವನ್ನು ಅರಿಯಲು ಈ ನೂತನ ಉದ್ಯಾನವನ ಸ್ಫೂರ್ತಿಯಾಗಲಿದೆ ಎಂದರು.
    ಕಾರ್ಯಕ್ರಮದಲ್ಲಿ ವಲಯಾರಣ್ಯಾಧಿಕಾರಿ ಮೊಹಮ್ಮದ್ ಶಫಿ, ಕಾಲೇಜಿನ ಪ್ರಾಚಾರ್ಯ ಡಾ.ಅಂಜಲಿ ಅಶೋಕ್ ರಾಣೆ, ಉಪ ವಲಯ ಅರಣ್ಯಾಧಿಕಾರಿಗಳಾದ ಉಮೇಶ್, ಸದಾಶಿವ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಕಾಲೇಜಿನ ಬೋಧಕ ವೃಂದ ಹಾಗೂ ಬೋಧಕೇತರ ಸಿಬ್ಬಂದಿಗಳು ಮತ್ತು ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

    300x250 AD

    ವಿದ್ಯಾರ್ಥಿಗಳು ಪರಿಸರ ಮಾಲಿನ್ಯ ಮುಕ್ತ ಹಾಗೂ ಅರಣ್ಯ ಸಂರಕ್ಷಿಸುವ ಪ್ರತಿಜ್ಞೆ ಮಾಡಿದರು. ಎನ್‌ಎಸ್‌ಎಸ್ ಸಂಯೋಜಕರಾದ ಮೊಹಮ್ಮದ್ ವಾಯೆಜ್, ಪ್ರೊ.ರಾಘವೇಂದ್ರ, ಸಾಯಿನಾಥ್, ಸಂಗೀತಾ ಹಾಗೂ ಇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದ ಯಶಸ್ವಿಗಾಗಿ ಶ್ರಮಿಸಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top