Slide
Slide
Slide
previous arrow
next arrow

ಅರಣ್ಯ ಸಂರಕ್ಷಣೆ ಪ್ರತಿಯೊಬ್ಬರ ಪ್ರಮುಖ ಜವಾಬ್ದಾರಿ: ಅಪ್ಪರಾವ್ ಕಲಶೆಟ್ಟಿ

300x250 AD

ದಾಂಡೇಲಿ: ಅರಣ್ಯ ಇದ್ದರೆ ನಾವು, ಅರಣ್ಯ ಇಲ್ಲದೇ ಇದ್ದರೆ ನಾವು ಇರಲು ಸಾಧ್ಯವೇ ಇಲ್ಲ. ನಮ್ಮ ಬದುಕಿಗೆ ಎಲ್ಲವನ್ನೂ ದಯಪಾಲಿಸುವ ಈ ಅರಣ್ಯ ಸಂಪತ್ತನ್ನು ಸಂರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನದ್ದಾಗಿದೆ ಎಂದು ದಾಂಡೇಲಿಯ ವಲಯಾರಣ್ಯಾಧಿಕಾರಿ ಅಪ್ಪಾರಾವ್ ಕಲಶೆಟ್ಟಿಯವರು ಹೇಳಿದರು.

ಅವರು ನಗರದ ಜನತಾ ವಿದ್ಯಾಲಯ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅರಣ್ಯ ಇಲಾಖೆಯ ಆಶ್ರಯದಡಿ ವನಮಹೋತ್ಸವ ಮತ್ತು ಪರಿಸರ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಮಾತನಾಡುತ್ತಿದ್ದರು.
ಉಪ ವಲಯ ಅಧಿಕಾರಿ ಸಂದೀಪ್ ನಾಯ್ಕ, ಸಂದೀಪ್ ರಾಚೋಡ್ಕರ್, ಮಾರ ನಾಯಕ, ಶಾಲಾ ಮುಖ್ಯೋಪಾಧ್ಯಾಯನಿ ನಂದಿನಿ.ಎಂ.ನಾಯ್ಕ, ಶಾಲಾ ಶಿಕ್ಷಕ ವೃಂದ, ಬೋಧಕೇತರ ಸಿಬ್ಬಂದಿಗಳು, ಅರಣ್ಯ ಇಲಾಖೆಯ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವನಮಹೋತ್ಸವದ ನಿಮಿತ್ತ ಶಾಲೆಯ ಆವರಣದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡಲಾಯಿತು. ಇದೇ ಸಂದರ್ಭದಲ್ಲಿ ಅರಣ್ಯ ಅಧಿಕಾರಿಗಳು ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

300x250 AD
Share This
300x250 AD
300x250 AD
300x250 AD
Back to top