Slide
Slide
Slide
previous arrow
next arrow

ಯರಮುಖ ಪ್ರಾಥಮಿಕ ಶಾಲೆಯಲ್ಲಿ ವನಮಹೋತ್ಸವ

300x250 AD

ಜೊಯಿಡಾ: ತಾಲೂಕಿನ ನಂದಿಗದ್ದಾ ಗ್ರಾಮ ಪಂಚಾಯತ ವ್ಯಾಪ್ತಿಯ ಯರಮುಖ ಪ್ರಾಥಮಿಕ ಶಾಲೆಯಲ್ಲಿ ಗುಂದ ಅರಣ್ಯ ವಲಯದಿಂದ ವನಮಹೋತ್ಸವ ಮತ್ತು ಬೀಜ ಬಿತ್ತೋತ್ಸವ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಗುಂದ ವಲಯ ಅರಣ್ಯಾಧಿಕಾರಿ ರವಿಕಿರಣ್ ಸಂಪಗಾವಿ, ಮಳೆಗಾಲದ ಪ್ರಾರಂಭದಲ್ಲಿ ನಮ್ಮ ಇಲಾಕೆ ವತಿಯಿಂದ ಬೀಜ ಬಿತೋತ್ಸವ ಮತ್ತು ವನಮಹೋತ್ಸವವನ್ನು ನಡೆಸುತ್ತೇವೆ. ಶಾಲಾ ಮಕ್ಕಳಿಗೆ ಅರಣ್ಯ ಬೆಳೆಸುವ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡುವುದರಿಂದ ಅರಣ್ಯ ರಕ್ಷಣೆ ಮಾಡಿದಂತಾಗುತ್ತದೆ. ಕಾಡು ಬೆಳೆಸುವುದು ಮತ್ತು ರಕ್ಷಿಸುವುದು ತುಂಬಾ ಮುಖ್ಯ. ಪ್ರತಿಯೊಬ್ಬರು ಗಿಡ ನೆಡುವುದರ ಮೂಲಕ ಪರಿಸರವನ್ನು ಬೆಳೆಸೋಣ ಎಂದರು.

300x250 AD

ಶಾಲೆಯ ಎಸ್‌ಡಿಎಮ್‌ಸಿ ಅಧ್ಯಕ್ಷೆ ಸುಕನ್ಯಾ ದೇಸಾಯಿ ಮಾತನಾಡಿ, ಅರಣ್ಯ ಇಲಾಖೆ ಅಡಿಯಲ್ಲಿ ಇಂಥ ಕಾರ್ಯಕ್ರಮಗಳು ನಡೆಯುವುದರಿಂದ ಶಾಲೆಯ ಮಕ್ಕಳಲ್ಲಿಯು ಪರಿಸರ ರಕ್ಷಣೆ, ಪರಿಸರದ ಬಗ್ಗೆ ಕಾಳಜಿ ಬರುತ್ತದೆ. ಜೊಯಿಡಾ ತಾಲೂಕಿನಲ್ಲಿ ಹೆಚ್ಚಿನ ಪ್ರದೇಶ ಕಾಡಿನಿಂದಲೇ ಕೂಡಿದೆ ಅರಣ್ಯ ಇಲಾಖೆ ಮತ್ತು ಜನರ ನಡುವೆ ಉತ್ತಮ ಬಾಂಧವ್ಯ ಇರಬೇಕು. ಕಾಡಿನಲ್ಲಿ ವಾಸಿಸುವ ನಾವು ಎಂದು ಕಾಡನ್ನು ಹಾಳು ಮಾಡುವುದಿಲ್ಲ ಎಂದರು.
ಯರಮುಖ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹಣ್ಣಿನ ಹಾಗೂ ವಿವಿಧ ರೀತಿಯ ಗಿಡಗಳನ್ನು ನಡೆಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಪ್ರಭಾ ಆಳ್ಕೆ, ಅರಣ್ಯ ಇಲಾಕೆಯ ಡಿಎರ್‌ಎಫ್‌ಓಗಳಾದ ರಾಜಶೇಕರ ಕಟಗೇರಿ, ಮಧು ಜಿ., ಅಶೋಕ ಕಾಂಬಳೆ, ಶರತ ಐಹೊಳೆ, ಕೃಷ್ಣ ಎಡಗೆ, ಬಸವರಾಜ ಹಾವೇರಿ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿಗಳು, ಶಿಕ್ಷಕರು, ಮಕ್ಕಳು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top