Slide
Slide
Slide
previous arrow
next arrow

ಗುರು ಎಂದರೆ ಪೂರ್ಣತೆಯ ಸಂಕೇತ: ರಾಮಕೃಷ್ಣ ಗುಂದಿ

300x250 AD

ಅಂಕೋಲಾ: ಗುರು ಎಂದರೆ ಪೂರ್ಣತೆಯ ಸಂಕೇತ. ಬಾಲ್ಯದಲ್ಲಿ ತಂದೆ- ತಾಯಿ ಸಂಸ್ಕಾರಗಳನ್ನು ನೀಡಿ ಗುರುಗಳಾದರೆ, ಬೆಳೆಯುತ್ತಾ ಸುತ್ತಲಿನ ಪರಿಸರ ಹಾಗೂ ವಿದ್ಯ ಕಲಿಸಿದ ಶಿಕ್ಷಕರು ಗುರುಗಳಾಗುತ್ತಾರೆ. ಜೀವನದಲ್ಲಿ ಶಿಕ್ಷಕವೃತ್ತಿಯಲ್ಲಿ ಸಿಗುವಂತಹ ಸಂತೃಪ್ತಿ ಯಾವ ಕ್ಷೇತ್ರದಲ್ಲಿಯೂ ಸಿಗಲು ಸಾಧ್ಯವಿಲ್ಲ. ವೇದವ್ಯಾಸ ಜಯಂತಿಯನ್ನು ಗುರುಪೂರ್ಣಿಮೆ ಎಂದು ಆಚರಿಸುತ್ತಿರುವುದು ಗುರು ಪರಂಪರೆಗೆ ನಾವೆಲ್ಲ ನೀಡುತ್ತಿರುವ ಅತ್ಯಂತ ದೊಡ್ಡ ಗೌರವವಾಗಿದೆ ಎಂದು ನಿವೃತ್ತ ಪ್ರಾಚಾರ್ಯ, ಯಕ್ಷಗಾನ ಕಲಾವಿದ, ಸಾಹಿತಿಗಳೂ ಆದ ರಾಮಕೃಷ್ಣ ಗುಂದಿ ಹೇಳಿದರು.

ಅವರು ಪತಂಜಲಿ ಯೋಗ ಸಮೀತಿ ಹಾಗೂ ಭಾರತ್ ಸ್ವಾಭಿಮಾನ ಟ್ರಸ್ಟ್ ವತಿಯಿಂದ ನಗರದ ಗಣಪತಿ ದೇವಸ್ಥಾನದ ಮೊದಲನೇ ಮಹಡಿಯಲ್ಲಿ ಗುರು ಪೂರ್ಣಿಮೆ ಕಾರ್ಯಕೃಮವನ್ನು ಉದ್ಘಾಟಿಸಿ ಮಾತನಾಡಿದರು. ಅದ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪಂಡಿತ ಆಸ್ಪತ್ರೆಯ ವೈದ್ಯ ಡಾ.ವಿಜಯ ದೀಪ, ಗುರು ಹಾಗೂ ಗುರಿ ಇದ್ದರೆ ಜೀವನದಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು. ಇಂದಿನ ಒತ್ತಡದ ಜೀವನದಲ್ಲಿ ಪ್ರತಿಯೊಬ್ಬರೂ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ಯೋಗ ಹಾಗೂ ಪ್ರಾಣಯಾಮ ಮಾಡುವ ಮೂಲಕ ತಮ್ಮ ಆರೋಗ್ಯವನ್ನು ಉತ್ತಮಗೊಳಿಸಿಕೊಳ್ಳಬಹುದಾಗಿದೆ. ಪತಂಜಲಿ ಮಹರ್ಸಿಗಳು ಯೋಗದ ಮಹತ್ವವನ್ನು ಜಗತ್ತಿಗೆ ಪರಿಚಯಿಸಿದ್ದಾರೆ ಇದನ್ನು ಗುರುಗಳ ಮೂಲಕ ಪಡೆದುಕೊಂಡು ಸಂತ್ರಪ್ತ ಜೀವನ ಸಾಗಿಸಿ ಎಂದರು.

300x250 AD

ನಿವೃತ್ತ ಶಿಕ್ಷಕರಾದ ಎಂ.ಎಂ.ಕರ್ಕಿಕರ, ಕಿಸಾನ್ ಸಮಿತಿಯ ಅಧ್ಯಕ್ಷ ಅಭಯ ಮರವಳ್ಳಿ, ಯುವ ಪ್ರಭಾರಿ ಸತೀಶ ನಾಯ್ಕ, ಸಂವಾದ ಪ್ರಭಾರಿ ರಾಧಿಕಾ ಆಚಾರಿ ಮಾತನಾಡಿದರು. ಇದೇ ಸಂದರ್ಭದಲ್ಲಿ ರಾಮಕೃಷ್ಣ ಗುಂದಿ ಹಾಗೂ ಪತಂಜಲಿ ಸಮಿತಿಯ ತಾಲೂಕಾ ಪ್ರಭಾರಿ ಯೋಗಗುರು ವಿನಾಯಕ ಗುಡಿಗಾರ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮವನ್ನು ಪ್ರಚಾರ ಸಮಿತಿಯ ಸದಸ್ಯ ಪ್ರಶಾಂತ ಶೆಟ್ಟಿ ನಿರ್ವಹಿಸಿದರು. ನಿರುಪಮಾ ಶ್ಯಾಮಸುಂದರ ಪ್ರಾರ್ಥಿಸಿದರು. ಶಿಕ್ಷಕರಾದ ವಿ.ಕೆ.ನಾಯರ ಸ್ವಾಗತಿಸಿದರು. ರಾಜು ಹರಿಕಂತ್ರ ಕಣಗೀಲ್ ವಂದಿಸಿದರು. ಕಾರ್ಯಕ್ರಮದಲ್ಲಿ ರಾಮಾ ನಾಯ್ಕ, ಶ್ರಿನಿವಾಸ ಶೇಟ್ಟಿ, ರವಿ ನಾಯ್ಕ, ದೀಪಕ ನಾಯ್ಕ, ಸ್ಮಿತಾ ರಾಯಚೂರು, ಯೋಗಿತಾ ಶೆಟ್ಟಿ, ವಿಜಯಲಕ್ಷ್ಮಿ ಕಾಮತ, ರಾಜೇಶ ಶೇಟ್ಟಿ, ಲತಾ ನಾಯ್ಕ, ಅದ್ವಿತ್ ನಾಯಕ, ನಾಗರಾಜ ಶೆಟ್ಟಿ ಇತರರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top