ಗೋಕರ್ಣ: ಹವ್ಯಕ ಮಹಾಮಂಡಲದ ನೂತನ ಅಧ್ಯಕ್ಷರಾಗಿ ಮೋಹನ ಭಾಸ್ಕರ್ ಹೆಗಡೆ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಪತ್ರಕರ್ತ ಉದಯಶಂಕರ ಭಟ್ ಮಿತ್ತೂರು ನೇಮಕಗೊಂಡಿದ್ದಾರೆ.
ಶ್ರೀರಾಮಚOದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿಯವರು ಚಾತುರ್ಮಾಸ್ಯ ವ್ರತಾರಂಭದ ಸಂದರ್ಭದಲ್ಲಿ ಪುನರ್ರಚಿತ ಹವ್ಯಕ ಮಹಾಮಂಡಲವನ್ನು ಉದ್ಘೋಷಿಸಿದರು. ಗೌರವ ಕಾರ್ಯದರ್ಶಿಯಾಗಿ ನಾಗರಾಜ ಭಟ್ ಪೆದಮಲೆ ಮತ್ತು ಕೋಶಾಧ್ಯಕ್ಷರಾಗಿ ಅಂಬಿಕಾ ಎಚ್.ಎನ್.ನಿಯುಕ್ತರಾಗಿದ್ದಾರೆ. ಮೂಲತಃ ಕುಮಟಾದವರಾದ ಮೋಹನ್ ಹೆಗಡೆ ಪ್ರಸ್ತುತ ಸಿಸ್ಕೊ ಸೋಲಾರ್ಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಉದಯಶಂಕರ ಭಟ್ ಮೂರು ದಶಕಗಳಿಂದ ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಉಪಾಧ್ಯಕ್ಷರಾಗಿ ಜಿ.ಜಿ.ಹೆಗಡೆ (ಬೆಂಗಳೂರು ಮಂಡಲ), ವೆಂಕಟೇಶ ಹಾರೆಬೈಲ್ (ಸಾಗರ), ಜಿ.ಎಸ್.ಹೆಗಡೆ (ಉತ್ತರ ಕನ್ನಡ), ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ (ಮಂಗಳೂರು) ವಿ.ವಿ.ರಮಣ (ಮುಂಬೈ), ಕಾರ್ಯದರ್ಶಿಗಳಾಗಿ ಗೀತ ಮಂಜಪ್ಪ (ಬೆಂಗಳೂರು), ರುಕ್ಮಾವತಿ (ಸಾಗರ), ಸತೀಶ ಭಟ್ ಕರ್ಕಿ (ಉತ್ತರ ಕನ್ನಡ), ವೇಣುಗೋಪಾಲ ಕೆದ್ಲ (ಮಂಗಳೂರು), ಸೌಮ್ಯ ಚೆನ್ನೈ (ಭಾರತ ಮಂಡಲ) ನೇಮಕಗೊಂಡಿದ್ದಾರೆ.
ವೇದಮೂರ್ತಿ ಮಹೇಶ ಭಟ್ ಚೂಂತಾರು (ವೈದಿಕ ಪ್ರಧಾನರು), ವೀಣಾ ಗೋಪಾಲಕೃಷ್ಣ (ಮಾತೃಪ್ರಧಾನರು), ಪ್ರಸನ್ನ ಉಡುಚೆ (ಸೇವಾ ಮತ್ತು ಸಹಾಯ ಪ್ರಧಾನರು), ಹೇರಂಭ ಶಾಸ್ತ್ರಿ (ಮುಷ್ಟಿಭಿಕ್ಷೆ ಮತ್ತು ಬಿಂದು ಸಿಂಧು ಪ್ರಧಾನರು), ಈಶ್ವರ ಪ್ರಸಾದ್ (ವಿದ್ಯಾರ್ಥಿ ವಾಹಿನಿ ಪ್ರಧಾನರು), ಕೇಶವ ಪ್ರಸಾದ್ ಮುಣ್ಚಿಕಾನ (ಯುವಪ್ರಧಾನರು), ಗಣೇಶ್ ಜೋಶಿ ಸಂಕೊಳ್ಳಿ (ಶಿಷ್ಯಮಾಧ್ಯಮ ಪ್ರಧಾನರು) ಆಯ್ಕೆಯಾಗಿದ್ದಾರೆ. ಕಾಯಂ ಆಹ್ವಾನಿತರಾಗಿ ಡಾ.ವೈ.ವಿ.ಕೃಷ್ಣಮೂರ್ತಿ, ಪ್ರಮೋದ್ ಪಂಡಿತ್, ಹಾರಕರೆ ನಾರಾಯಣ ಭಟ್ ಮತ್ತು ರಮಾನಂದ ಸುಬ್ರಾಯ ಹೆಗಡೆ ಅವರನ್ನು ನಿಯೋಜಿಸಲಾಗಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಪ್ರಕಟಣೆ ಹೇಳಿದೆ.