• Slide
  Slide
  Slide
  previous arrow
  next arrow
 • ಸಮಾಜಮುಖಿ ಕಾರ್ಯದಲ್ಲಿ ರೋಟರಿಯ ಪಾತ್ರ ಪ್ರಮುಖವಾದುದು: ಶರದ್ ಪೈ

  300x250 AD

  ಕುಮಟಾ: ಇಲ್ಲಿಯ ರೋಟರಿಯ ಸಮಾಜಮುಖಿ ಕಾರ್ಯ ಅಭೂತಪೂರ್ವವಾದುದಾಗಿದೆ. ನಾನು ಮೂಲತಃ ಕುಮಟಾದವನಾಗಿ, ರೋಟರಿಯ ಸಮಾಜ ಸೇವಾ ಹೆಜ್ಜೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಹೆಮ್ಮೆ ಪಡುತ್ತಿದ್ದೇನೆ. ಗ್ಲೋಬಲ್ ಗ್ರ್ಯಾಂಟ್ ಯೋಜನೆಯಡಿ ಉತ್ತಮ ಜನಸ್ನೇಹಿ ಕಾರ್ಯಗಳ ಜಾರಿಗಾಗಿ ಮತ್ತೆ ಮತ್ತೆ ಪ್ರಯತ್ನಿಸಿ. ನಮ್ಮ ಹಾಗೂ ಹೊರ ರಾಜ್ಯ ಮತ್ತು ದೇಶದಲ್ಲಿರುವ ಕುಮಟಿಗರನ್ನು ಸಂಪರ್ಕಿಸಿ ಅವರುಗಳಿಂದ ನೆರವನ್ನು ಪಡೆದು ನಿಮ್ಮ ಯೋಚಿತ ಕಾರ್ಯವನ್ನು ಸಾಕಾರಗೊಳಿಸಿಕೊಳ್ಳಲು ತಾನೂ ಬೆಂಗಾವಲಾಗಿ ನಿಂತು ಸಹಕರಿಸುತ್ತೇನೆ ಎಂದು 2024-25 ರ ಸಾಲಿಗೆ ರೋಟರಿ ಜಿಲ್ಲಾ ಪ್ರಾಂತಪಾಲರಾಗಿ ಆಯ್ಕೆಯಾದ ಬೆಳಗಾವಿಯ ಶರದ್ ಪೈ ಅಭಿಪ್ರಾಯಪಟ್ಟರು.

  ಅವರು ಕುಮಟಾ ರೋಟರಿ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ, ಪ್ರಮಾಣ ವಚನ ಬೋಧಿಸಿ ಮಾತನಾಡಿದರು. ಎನ್.ಆರ್. ಗಜು, ರಾಮದಾಸ ಗುನಗಿ ಹಾಗೂ ಸಂದೀಪ ನಾಯಕ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಕೋಶಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ವಿಜಯಲಕ್ಷ್ಮಿ ನಾಯ್ಕ, ಶೈಲಾ ಗುನಗಿ ಹಾಗೂ ಶ್ರದ್ಧಾ ನಾಯಕ ಅವರು ರೋಟರಿ ಏನ್ಸ್ ಪರವಾಗಿ ಕಾರ್ಯನಿರ್ವಹಿಸಲು ಪಣತೊಟ್ಟರು. ಉಪಪ್ರಾಂತಪಾಲ ವಸಂತ ರಾವ್ ಜಿಲ್ಲಾ ಪ್ರಾಂತಪಾಲರ ಸಂದೇಶದೊಂದಿಗೆ ಕುಮಟಾ ರೋಟರಿಯಿಂದ ಹೆಚ್ಚೆಚ್ಚು ಜನಪರ ಕಾರ್ಯಗಳು ರೂಪುಗೊಳ್ಳುವಲ್ಲಿ ಶ್ರಮಿಸುವುದಾಗಿ ತಿಳಿಸಿದರು. ನೂತನವಾಗಿ ಪದಗ್ರಹಣ ಪಡೆದ ಅಧ್ಯಕ್ಷ ಎನ್.ಆರ್.ಗಜು ಜವಾಬ್ದಾರಿ ಸ್ವೀಕೃತ ಭಾಷಣ ಮಾಡಿದರು.

  ಇದೇ ಸಂದರ್ಭದಲ್ಲಿ ರೋಟರಿಯ ಪಾಲ್ ಹ್ಯಾರಿಸ್ ಫೆಲೋ ಗೌರವ ಪಡೆದ ಯೋಗೀಶ ಕಾಮತ್ ಅವರಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಶ್ರೇಯಾಂಕಿತೆ ಅದಿತಿ ವೈದ್ಯ ಹಾಗೂ ವಿಶೇಷ ಒಲಿಂಪಿಕ್ಸ್ನ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಎರಡು ಚಿನ್ನದ ಪದಕ ಪಡೆದ ವಿಘ್ನೇಶ್ವರ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ಬಂದರು ಇಲಾಖೆಯ ಅಧಿಕಾರಿ ವಿ.ಆರ್.ನಾಯ್ಕ, ಗುತ್ತಿಗೆದಾರ ಅಕ್ಷಯ ನಾಯ್ಕ ಹಾಗೂ ಎಚ್‌ಸಿಎಲ್ ಕಂಪನಿಯ ಪ್ರೊಜೆಕ್ಟ್ ಮ್ಯಾನೇಜರ್ ಪ್ರಣವ್ ಮಣಕೀಕರ ಅವರು ಹೊಸ ಸದಸ್ಯತ್ವ ಪಡೆದರು.

  300x250 AD

  ಪ್ರಾರಂಭದಲ್ಲಿ ಡಾ.ನಮೃತಾ ಶಾನಭಾಗ ಮತ್ತು ಶ್ರೇಯಾ ನಾಯಕ ನೃತ್ಯ ಪ್ರದರ್ಶಿಸಿದರೆ ಸಂಧ್ಯಾ ಹೆಗಡೆ ಪ್ರಾರ್ಥನಾ ಗೀತೆ ಹಾಡಿದರು. ರೋಟರಿಯ ನಿರ್ಗಮಿತ ಅಧ್ಯಕ್ಷ ಚೇತನ್ ಶೇಟ್ ಸ್ವಾಗತಿಸಿದರು. ನಿರ್ಗಮಿತ ಕಾರ್ಯದರ್ಶಿ ಪವನ ಶೆಟ್ಟಿ ವಾರ್ಷಿಕ ವರದಿ ವಾಚಿಸಿದರು. ವೇದಿಕೆಯಲ್ಲಿ ಯೋಗೀಶ್ ಕೋಡ್ಕಣಿ, ಸಂದೀಪ ನಾಯಕ ಉಪಸ್ಥಿತರಿದ್ದರು. ಶ್ರೀಕಾಂತ ಭಟ್, ಎಂ.ಬಿ.ಪೈ, ಕಿರಣ ನಾಯಕ, ಶಿಲ್ಪಾ ಜಿನರಾಜ್ ಪರಿಚಯಿಸಿದರೆ, ಡಾ.ಶ್ರೀದೇವಿ ಭಟ್, ಸುಜಾತಾ ಕಾಮತ ನಿರೂಪಿಸಿದರು. ನೂತನ ಕಾರ್ಯದರ್ಶಿ ರಾಮದಾಸ ಗುನಗಿ ವಂದಿಸಿದರು. ವಿಶೇಷ ಔತಣ ಕೂಟದೊಂದಿಗೆ ಸಮಾರಂಭ ಸಂಪನ್ನಗೊಂಡಿತು.

  Share This
  300x250 AD
  300x250 AD
  300x250 AD
  Leaderboard Ad
  Back to top