• Slide
    Slide
    Slide
    previous arrow
    next arrow
  • ವಡ್ಡಿನಕೊಪ್ಪದಲ್ಲಿ ಆಲ್ಟ್ ಕಂಪನಿಯಿಂದ ವನಮಹೋತ್ಸವ ಕಾರ್ಯಕ್ರಮ

    300x250 AD

    ಶಿರಸಿ: ತಾಲೂಕಿನ ವಡ್ಡಿನಕೊಪ್ಪದಲ್ಲಿ ಜು.4 ಮಂಗಳವಾರದಂದು, ಆಲ್ಟ್ ಡಿಜಿಟಲ್ ಕಂಪನಿ ಹಾಗೂ ಬನವಾಸಿ ವಲಯ ಅರಣ್ಯಾಧಿಕಾರಿಗಳ ಸಹಭಾಗಿತ್ವದಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಸಲಾಯಿತು. ಈ ಬಾರಿಯ ತೀವ್ರ ಬಿಸಿಲಿನ‌ ಕಾರಣದಿಂದ ಎಲ್ಲೆಂದರಲ್ಲಿ ಬೆಂಕಿ ಬಂದು ಅಪಾರ ಪ್ರಮಾಣದ ಅರಣ್ಯದ ನಾಶವಾಗಿದೆ. ಇದೇ ರೀತಿ ವಡ್ಡಿನಕೊಪ್ಪ ಅರಣ್ಯ ಪ್ರದೇಶದಲ್ಲಿ ಕೂಡ ಬೆಂಕಿಯ ಹಾವಳಿಯಾಗಿತ್ತು.

    ಆಲ್ಟ್ ಡಿಜಿಟಲ್ ಸಂಸ್ಥೆಯು ಬೆಂಕಿಯಿಂದ ಹಾನಿಗೊಳಗಾದ ಜಾಗವನ್ನು ಗುರುತಿಸಿ ಗಿಡ ನೆಡಬೇಕು ಸಂಕಲ್ಪಿಸಿ, ಅರಣ್ಯಾಧಿಕಾರಿ ವರದರಂಗನಾಥ ಅವರಲ್ಲಿ ಕೇಳಿಕೊಂಡಾಗ ಅವರು ಬಹಳ ಖುಷಿಯಿಂದ ವನ ಮಹೋತ್ಸವ ಕಾರ್ಯಕ್ರಮವನ್ನೇ ಮಾಡೋಣ ಎಂದು ಬೆಂಬಲಿಸಿ ಬೇರೆ ಬೇರೆ ರೀತಿಯ ಸಸಿಗಳನ್ನು ಕೂಡ ಒದಗಿಸಿ, ತಾವು ಕೂಡ ಕಾರ್ಯಕ್ರಮಕ್ಕೆ ಬಂದು ಉತ್ಸಾಹದಿಂದ ಗಿಡ ನೆಟ್ಟರು ಎಂದು ಕಂಪನಿಯ ಮುಖ್ಯಸ್ಥರು ಹೇಳಿದರು.

    ಹಾಗೆಯೇ ಅರಣ್ಯಾಧಿಕಾರಿ ವರದರಂಗನಾಥ, ಆಲ್ಟ್ ಡಿಜಿಟಲ್ ಕಂಪನಿಗೂ ಭೇಟಿ ಕೊಟ್ಟು ಹಳ್ಳಿಯಲ್ಲಿ ಇಂತಹ ಕಂಪನಿಗಳು ತಲೆ ಎತ್ತುತ್ತಿರುವುದು ನಿಜಕ್ಕೂ ಒಳ್ಳೆಯ ಸಂಗತಿ. ಹಾಗೆಯೇ ಸುತ್ತಲಿನ ಪರಿಸರದ ಮೇಲೆ ಕಂಪನಿ ಇಟ್ಟಿರುವಂತಹ ಕಾಳಜಿ ಕೂಡ ಅಷ್ಟೇ ಪ್ರಶಂಸನೀಯ ಸಂಗತಿ ಎಂದು ತಮ್ಮ ಮೆಚ್ಚುಗೆ ವ್ಯಕ್ತ ಪಡಿಸಿದರು.

    300x250 AD

    ಅರಣ್ಯಗಳು ನಾಶವಾಗುತ್ತಿರುವ ಈ ಹೊತ್ತಿನಲ್ಲಿ ಎಲ್ಲರೂ ವನ ಮಹೋತ್ಸವ ಮಾಡಿ ನೆಟ್ಟಂತ ಗಿಡಗಳನ್ನು ರಕ್ಷಿಸಬೇಕೆಂದು ಕಂಪನಿಯ ಸಹ ಸಂಸ್ಥಾಪಕರಾದ ಗೌತಮ್ ಬೆಂಗಳೆ ಕೇಳಿಕೊಂಡರು. ಕಂಪನಿಯ ಎಲ್ಲಾ ಉದ್ಯೋಗಿಗಳೂ‌ ಖುಷಿಯಿಂದ ಗುದ್ದಲಿ ಹಿಡಿದು ನೂರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟರು.

    ಇನ್ನುಳಿದಂತೆ ಫಾರೆಸ್ಟ್ ಅಧಿಕಾರಿಗಳಾದ ಮಹೇಶ್ ಅಜ್ಜೆರ್, ಸುಗಾವಿ ಪಂಚಾಯತ ಅಧ್ಯಕ್ಷರಾದ ಪ್ರಸನ್ನ ಹೆಗಡೆ ಬೆಂಗಳೆ, ಸುಗಾವಿ ಪಂಚಾಯತ ಮಾಜಿ ಅಧ್ಯಕ್ಷರಾದ ಗಣೇಶ್ ಜೋಶಿ, ಕಾರ್ಯಕ್ರಮದ ಉಸ್ತುವಾರಿ ನೋಡಿಕೊಂಡ ವೆಂಕಟೇಶ್ ಬೆಂಗಳೆ, ರವೀಶ್ ಓಣಿಕೇರಿ, ಜಯರಾಜ್ ವಡ್ಡಿನಕೊಪ್ಪ, ಲಕ್ಷ್ಮೀಶ್ ಕಲ್ಗುಂಡಿಕೊಪ್ಪ ಹಾಗೂ ಊರಿನ ನಾಗರಿಕರು ಭಾಗವಹಿಸಿ ಅರಣ್ಯದಲ್ಲಿ ಮರ- ಗಿಡಗಳು ನಾಶವಾದ ಜಾಗದಲ್ಲಿ ಮತ್ತೆ ಹೊಸ ಗಿಡ ನೆಟ್ಟು ಸಂತಸ ವ್ಯಕ್ತಪಡಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top