• Slide
    Slide
    Slide
    previous arrow
    next arrow
  • ವಂಶವೃಕ್ಷಕ್ಕೆ ಮರಣ ದಾಖಲೆ: ನಿಯಮ ಸರಳೀಕರಣಕ್ಕೆ ಒತ್ತಾಯ

    300x250 AD

    ಹೊನ್ನಾವರ: ಜನಸಾಮಾನ್ಯರಿಗೆ ಇತ್ತೀಚಿನ ಹಲವು ವರ್ಷಗಳಿಂದ ತಮ್ಮ ಜಮೀನಿನ ವಾರಿಸ ದಾಖಲೆಗಾಗಿ ವಂಶವೃಕ್ಷ ಪಡೆಯಲು ಮರಣ ದಾಖಲೆ ಪೂರೈಸಲಾಗದೇ ಪರದಾಡುವಂತಾಗಿದ್ದು, ಈ ನಿಯಮಾವಳಿಯನ್ನು ಸರಳೀಕರಣಗೊಳಿಸಿ ಬಡ ಜನರಿಗೆ ಅನುಕೂಲ ಕಲ್ಪಿಸಿಕೊಡುವಂತೆ ಜಿಲ್ಲಾ ದಿ.ಡಿ.ದೇವರಾಜ ಅರಸು ವಿಚಾರ ವೇದಿಕೆ ಅಧ್ಯಕ್ಷ ಅನಂತ ನಾಯ್ಕ ಹೆಗ್ಗಾರ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.

    ಇತ್ತೀಚಿನ ಗಣಕೀಕೃತ ಯುಗದಲ್ಲಿ ಹಲವು ವರ್ಷಗಳಿಂದ ಜನಸಾಮಾನ್ಯರು ತಮ್ಮ ಕುಟುಂಬದ ವಂಶವೃಕ್ಷವನ್ನು ಪಡೆಯಬೇಕಾದರೆ ಜೀವಂತ ಸದಸ್ಯರ ಆಧಾರ್ ಕಾರ್ಡ್ ಪ್ರತಿ ಮತ್ತು ಮರಣ ಹೊಂದಿದ ಸದಸ್ಯರ ಮರಣ ದಾಖಲೆ ಪ್ರತಿಯೊಂದಿಗೆ ಅಫಿಡವೇಟ್ ಇಟ್ಟು ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಬೇಕಾದ ನಿಯಮಾವಳಿ ತಂದಿದ್ದಾರೆ. ಈ ಹಿಂದೆ ಗಣಕೀಕರಣಗೊಳ್ಳುವ ಮುನ್ನ ಅನಾದಿಕಾಲದಿಂದ ಸ್ಥಳೀಯ ಕಂದಾಯ, ಗ್ರಾಮ ಅಧಿಕಾರಿಗಳ ನಾಲ್ಕು ಜನ ಪಂಚರ ಸಹಿಪಡೆದು ಅರ್ಜಿದಾರರಿಗೆ ವಂಶವೃಕ್ಷ ಸರ್ಟಿಫಿಕೇಟ್ ನೀಡುತ್ತಿದ್ದರು. ಆದರೆ ಉತ್ತರ ಕನ್ನಡ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಸಾವಿರಾರು ಕುಟುಂಬಗಳು ಕುಟುಂಬದ ಹಿರಿಯರ, ಕೆಲವರ ಮರಣದಾಖಲೆ ಪಡೆಯಲಾಗದೇ ಪರದಾಡುತ್ತಿರುವುದು ವಿಷಾದಕರ ಸಂಗತಿ.

    ಈ ಅಸಾಹಯಕ ಬಡ ಕುಟುಂಬಗಳು ವಂಶ ವೃಕ್ಷ ಪಡೆಯಲಾಗದೇ ಕುಟುಂಬದ ಜಮೀನು ಆಸ್ತಿಗಳ ವಾರಿಸ ದಾಖಲೆ ಮಾಡಿಕೊಳ್ಳಲಾಗದೇ ಬೆಳೆಸಾಲ ಹಾಗೂ ಇನ್ನಿತರ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಕಳೆದ 20-30 ವರ್ಷಗಳ ಹಿಂದೆ ಜನಸಾಮಾನ್ಯರು ಕುಟುಂಬದಲ್ಲಿ ಮರಣ ಹೊಂದಿದವರ ಬಗ್ಗೆ ದಾಖಲೆ ಮಾಡಿಸುವ ಬಗ್ಗೆ ಪರಿಜ್ಞಾನ ಹೊಂದಿರಲಿಲ್ಲ. ಅದರಲ್ಲಿಯೂ ಹೆಂಗಸರ ಮರಣವನ್ನು ದಾಖಲಿಸುವ ಗೋಜಿಗೆ ಹೋಗುತ್ತಿರಲಿಲ್ಲ. ಯಾಕೆಂದರೆ ಹೆಚ್ಚಿನದಾಗಿ ಹೆಂಗಸರ ಹೆಸರಿನಲ್ಲಿ ಯಾವುದೇ ಜಮೀನು, ಆಸ್ತಿಗಳು ಇಲ್ಲದಿರುವುದೇ ಕಾರಣವಾಗಿರಬಹುದು. ಆದರೆ ಅಂದು ಜನನ, ಮರಣ ದಾಖಲೆಗಳನ್ನು ಸಂಬ0ಧಪಟ್ಟ ಇಲಾಖೆ ಗುರುತಿಸಿ ದಾಖಲಿಸಬೇಕಿತ್ತೋ? ಇಲ್ಲವೆ ಸಂಬoಧಪಟ್ಟ ಕುಟುಂಬದ ಸದಸ್ಯರು ದಾಖಲಿಸಿಕೊಳ್ಳಬೇಕಿತ್ತೋ? ಎನ್ನುವುದು ಇಂದು ಪ್ರಶ್ನಾರ್ಥಕವಾಗಿ ಉಳಿದಿದೆ. ಆದರೆ ಇಂದು ಸಾವಿರಾರು ಕುಟುಂಬಗಳು ಕೌಟುಂಬಿಕ ಸಮಸ್ಯೆಗಳಿಂದ ಹೊರಬರಬೇಕಾದರೆ ಮರಣ ಹೊಂದಿದವರ ಅಲಭ್ಯ ಪ್ರಮಾಣಪತ್ರ ಪಡೆಯುವುದರಿಂದ ಹಿಡಿದು ಕೋರ್ಟಿಗೆ ಅಲೆಯುವುದೂ ಸಹ ಕಷ್ಟದಾಯಕವಾಗಿದೆ. ಇದರಿಂದ ಜನಸಾಮಾನ್ಯರಿಗೆ ಕಾಲ, ಧನ ಮತ್ತು ಮಾನಸಿಕ ಹರಣವಾಗುತ್ತಿದೆ.

    300x250 AD

    ಆದ್ದರಿಂದ ಸಂಬoಧಪಟ್ಟ ಹಳೆಯ ಮರಣ ದಾಖಲೆಗಾಗಿ ಸ್ಥಳೀಯ ಕಂದಾಯ ಅಧಿಕಾರಿಗಳಿಗೆ ಅಧಿಕಾರ ನೀಡಿ, ಗ್ರಾಮದ ಪಂಚರಿoದ ಪಂಚನಾಮೆ ಪಡೆದು ಕುಟುಂಬಕ್ಕೆ ವಂಶವೃಕ್ಷ ಪಡೆಯಲು ಅನುಕೂಲಮಾಡಿಕೊಡಬೇಕೆಂದು ಸರ್ಕಾರರವನ್ನು ಆಗ್ರಹಿಸಿದ್ದಾರೆ. ಈ ಕುರಿತು ಕಂದಾಯ ಸಚಿವ ಕೃಷ್ಣ ಬೈರೇ ಗೌಡ ಅವರಿಗೆ, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಲಾಗುವುದು ಎಂದು ಉತ್ತರ ಕನ್ನಡ ಜಿಲ್ಲಾ ದಿ.ಡಿ.ದೇವರಾಜ ಅರಸು ವಿಚಾರ ವೇದಿಕೆ ಅಧ್ಯಕ್ಷ ಅನಂತ ನಾಯ್ಕ ಹೆಗ್ಗಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top