• Slide
    Slide
    Slide
    previous arrow
    next arrow
  • ಗುರಿ ಇಲ್ಲದ ವ್ಯಕ್ತಿ ಜೀವನದಲ್ಲಿ ಮುಂದೆ ಬರಲು ಸಾಧ್ಯವಿಲ್ಲ: ಭೀಮಣ್ಣ

    300x250 AD

    ಶಿರಸಿ: ನಿರ್ದಿಷ್ಟವಾದ ಗುರಿ ಹೊಂದಿರದ ಯಾವುದೇ ವ್ಯಕ್ತಿ ತನ್ನ ಜೀವನದಲ್ಲಿ ಮುಂದೆ ಬರಲು ಸಾಧ್ಯವಿಲ್ಲ. ಬದ್ಧತೆ ಮತ್ತು ಮೌಲ್ಯವನ್ನು ಹೊಂದಿದ್ದಾಗ ಮಾತ್ರ ಆ ವ್ಯಕ್ತಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.

    ಅವರು ಡಾ.ಆರ್.ವೈ.ಫೌಂಡೇಷನ್ ವತಿಯಿಂದ ಸೋಂದಾ ಕ್ರಾಸ್ ಸಮೀಪವಿರುವ ಡಾ.ಆರ್.ವೈ.ಖಾನ್ ತೋಟದಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕ್ಷೇತ್ರದ ಜನತೆ ಯಾವ ನಿರೀಕ್ಷೆಯೊಂದಿಗೆ ನನಗೆ ಮತ ನೀಡಿ ಆರಿಸಿ ತಂದಿದ್ದಾರೋ, ಅದನ್ನು ಉಳಿಸಿಕೊಂಡು ತಮ್ಮ ಸಹಕಾರದಿಂದ ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡುವ ಮೂಲಕ ತಮ್ಮ ಉದ್ದೇಶಗಳನ್ನು ಈಡೇರಿಸುತ್ತೇನೆ ಎಂದರು.

    ನಮ್ಮ ಸರ್ಕಾರ ಬಡವರಿಗಾಗಿ ಭಾಗ್ಯಗಳನ್ನು ನೀಡಿದೆ. ಆದರೆ ಇದನ್ನೇ ಕೆಲವರು ಟೀಕೆ ಮಾಡುತ್ತಿದ್ದಾರೆ. ಯಾರು ಟೀಕೆ ಮಾಡುತ್ತಿದ್ದಾರೋ ಅವರೇ ಎಲ್ಲಾ ಯೋಜನೆಗಳ ಲಾಭ ಪಡೆಯಲು ಮುಂದಿನ ಸರತಿ ಸಾಲಿನಲ್ಲಿ ನಿಂತಿದ್ದಾರೆ ಎಂದು ವ್ಯಂಗ್ಯ ಮಾಡಿದರು.

    300x250 AD

    ಈ ಸಂದರ್ಭದಲ್ಲಿ ಬೆಳಲೆ, ಅರಸಾಪುರ, ಮಳೆನಳ್ಳಿ, ಗುಂಡಿಗದ್ದೆ ಸೇರಿದಂತೆ ಹಲವು ಗ್ರಾಮಗಳ ಅಭಿವೃದ್ಧಿ ಕಾಮಗಾರಿಗಳ ಕುರಿತು ಅಲ್ಲಿನ ಜನರು ಶಾಸಕರಿಗೆ ಮನವಿ ನೀಡಿದರು. ಡಾ.ಆರ್.ವೈ.ಖಾನ್ ಪ್ರಾಸ್ತಾವಿಕವಾಗಿ ಮಾತನಾಡಿದಲ್ಲದೆ ಸ್ವಾಗತಿಸಿ, ನಿರೂಪಿಸಿ, ಕೊನೆಯಲ್ಲಿ ವಂದಿಸಿದರು. ವೇದಿಕೆಯಲ್ಲಿ ಮನು ವಿಕಾಸ ಸಂಸ್ಥೆಯ ಗಣಪತಿ ಭಟ್ಟ, ಉಪನ್ಯಾಸಕ ಕೆಂಪರಾಜು, ಜಿ.ಎನ್.ಹೆಗಡೆ ಮುರೇಗಾರ, ಹರಿ ಗೌಡ ಅರಸಾಪುರ, ಖಾದರ್ ಆನವಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top