ಶಿರಸಿ: ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ಶ್ರೀನಿಕೇತನ ಶಾಲೆಯಲ್ಲಿ ಇತ್ತೀಚೆಗೆ ಸರಸ್ವತಿ ಹವನವನ್ನು ಶ್ರೀ ಸೋಂದಾ ಸ್ವರ್ಣವಲ್ಲಿ ಮಠದ ಶ್ರೀಗಳಾದ ಶ್ರೀ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ನೆರವೇರಿಸಲಾಯಿತು.
ಇದೇ ವೇಳೆ ಕಾರ್ಯಕ್ರಮದಲ್ಲಿ ಶಾಲೆಯ ನೂತನ ಮಂತ್ರಿಮಂಡಲದ ಸದಸ್ಯರಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು. ಶಿಕ್ಷಕಿ ಶ್ರೀಮತಿ ಅಶ್ವಿನಿ ಕಾರ್ಯಕ್ರಮವನ್ನು ನಿರೂಪಿಸಿದರು. ಹಾಗೆಯೇ ಜುಲೈ 3, ಸೋಮವಾರ ಆಷಾಢ ಹುಣ್ಣಿಮೆಯ ಶುಭದಿನನಂದು ಗುರುಪೂರ್ಣಿಮೆಯನ್ನು ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಆಡಳಿತ ಮಂಡಳಿಯ ಸದಸ್ಯರಾದ ಪ್ರಶಾಂತ ಭಟ್ ಹಾಗೂ ರಾಜರಾಜೇಶ್ವರಿ ಸಂಸ್ಥೆಯ ಕಾರ್ಯದರ್ಶಿ ಶಿವರಾಮ ಭಟ್ ಇವರು ಮಾತನಾಡಿ, ಗುರುಗಳ ಅನುಗ್ರಹದಿಂದ ಎಲ್ಲರ ಜೀವನವು ಯಶಸ್ಸಿನಿಂದ ಕೂಡಿರಲಿ ಎಂದು ಹಾರೈಸಿದರು. ಶಾಲೆಯ ಪ್ರಾಂಶುಪಾಲರು ವಸಂತ್ ಭಟ್ ಇವರು ಗುರುವಿನ ಮಹತ್ವವನ್ನು ಬಣ್ಣಿಸಿದರು.
ಶ್ರೀ ರಾಜರಾಜೇಶ್ವರಿ ಸಂಸ್ಥೆಯ ಕಾರ್ಯದರ್ಶಿ ಶಿವರಾಮ್ ಭಟ್, ಶಾಲೆಯ ಅಧ್ಯಕ್ಷರಾದ ಮೇಜರ್ ರಘುನಂದನ ಹೆಗಡೆ, ಕಾರ್ಯದರ್ಶಿಗಳಾದ ಕೆ.ಎನ್. ಹೊಸಮನಿ, ಎಮ್. ಜಿ. ಹೆಗಡೆ, ಆರ್.ಎಸ್. ಹೆಗಡೆ ಹಾಗೂ ಇತರ ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು.