• Slide
    Slide
    Slide
    previous arrow
    next arrow
  • ಜು.6ಕ್ಕೆ ಹುಳಗೋಳ ದೇವಸ್ಥಾನದಲ್ಲಿ ‘ನಾದಪೂಜೆ’ ಕಾರ್ಯಕ್ರಮ

    300x250 AD

    ಶಿರಸಿ: ಸ್ವರ ಸಂವೇದನಾ ಪ್ರತಿಷ್ಠಾನ (ರಿ) ಗಿಳಿಗುಂಡಿ ಹಾಗೂ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಹುಳಗೋಳ ಇವರ ಸಂಯುಕ್ತಾಶ್ರಯದಲ್ಲಿ ಸಂಕಷ್ಠಿ ಪ್ರಯುಕ್ತ “ನಾದಪೂಜೆ” ಸಂಗೀತ ಕಾರ್ಯಕ್ರಮವು ಜು.06 ರಂದು ಮಧ್ಯಾಹ್ನ 3.30 ರಿಂದ ರಾತ್ರಿ 7.30 ರವರೆಗೆ ತಾಲೂಕಿನ ಹುಳಗೋಳದ ಶ್ರೀಸಿದ್ಧಿವಿನಾಯಕ ದೇವಸ್ಥಾನದ ಸಭಾಭವನದಲ್ಲಿ ನಡೆಯಲಿದೆ.

    ವಿಶಾಲ್ ಹೆಗಡೆ, ಬೆಂಗಳೂರು, ಕುಮಾರಿ ಸಂಗೀತಾ ಹೆಗಡೆ, ಗಿಳಿಗುಂಡಿ, ನಂದನ ಹೆಗಡೆ, ಭೈರುಂಬೆ ಇವರಿಂದ ಗಾಯನ ಹಾಗೂ ಗೋಪಾಲ ಕೃಷ್ಣ ಹೆಗಡೆ, ತಾರಗೋಡು ಇವರಿಂದ ಸಿತಾರ್ ವಾದನ ಕಾರ್ಯಕ್ರಮಗಳು ನಡೆಯಲಿದೆ. ಸಹಕಲಾವಿದರಾದ ಅನಂತ ಹೆಗಡೆ, ಶಿರಸಿ, ಗಣೇಶ ಹೆಗಡೆ, ಗುಂಟ್ಕಲ್, ವಿಜಯೇಂದ್ರ ಹೆಗಡೆ, ಅಜ್ಜಿಬಳ್ಳ ತಬಲಾದಲ್ಲಿ ಸಾಥ್ ನೀಡಲಿದ್ದಾರೆ. ಗುರುಪ್ರಸಾದ ಹೆಗಡೆ, ಗಿಳಿಗುಂಡಿ ಸಾರಂಗಿಯಲ್ಲಿ ಸಾಥ ನೀಡಲಿದ್ದಾರೆ. ಸತೀಶ ಭಟ್, ಹೆಗ್ಗಾರ, ದಿನೇಶ ಹೆಗಡೆ, ಗಿಳಿಗುಂಡಿ ಇವರು ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ. ಗೆಳೆಯರ ಬಳಗ ಭೈರುಂಬೆ (ರಿ) ಕಾರ್ಯಕ್ರಮಕ್ಕೆ ಸಹಕಾರವನ್ನು ನೀಡಲಿದ್ದಾರೆ. ಕಾರಣ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಪ್ರಕಟಣೆಯಲ್ಲಿ ಕೋರಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top