• Slide
  Slide
  Slide
  previous arrow
  next arrow
 • ಗೋಹತ್ಯೆ ಪ್ರಕರಣ: ನಿರ್ದಾಕ್ಷಿಣ್ಯ ಕ್ರಮಕ್ಕೆ ಶಾಸಕ ಭೀಮಣ್ಣ ಸೂಚನೆ

  300x250 AD

  ಶಿರಸಿ: ತಾಲೂಕಿನ ಹೆಗಡೆಕಟ್ಟಾ ವ್ಯಾಪ್ತಿಯಲ್ಲಿ ಸಿಕ್ಕಿದ ಗೋವಿನ ತಲೆಗೆ ಸಂಬಂಧಿಸಿ ಯಾರೇ ತಪ್ಪಿತಸ್ಥರಾದರೂ ಕ್ರಮ ಕೈಗೊಳ್ಳುವಂತೆ ಶಾಸಕ ಭೀಮಣ್ಣ‌ ನಾಯ್ಕ ಪೊಲೀಸರಿಗೆ ಸೂಚಿಸಿದ್ದಾರೆ.

   ಈ ದುಷ್ಕೃತ್ಯವನ್ನು ನಡೆಸಿದ ದುಷ್ಕರ್ಮಿಗಳು ಯಾರೇ ಇರಲಿ ಅವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾಗಿ ಶಾಸಕ ಭೀಮಣ್ಣ‌ ತಿಳಿಸಿದ್ದಾರೆ.

  300x250 AD

  ಈ‌ ಮಧ್ಯೆ‌ ಆನ್ ಲೈನ್ ಗೇಮ್‌ ಮೂಲಕ ಹಣ‌ ಕಳೆದುಕೊಂಡು ಸಾವಿಗೆ ಶರಣಾದ ಯುವಕನ ಕುರಿತು ಸಾಂತ್ವನ ನುಡಿದ ಅವರು, ಯಾರೂ ಇಂತಹ ಮೋಸದ ಕೃತ್ಯಕ್ಕೆ ಬಲಿ ಆಗಬಾರದು. ಹಣ ಹಾಕಿ ಆಡುವ ಆಟ ಕೂಡ ಆಡಬಾರದು. ಗೌರವಯುತ ಬದುಕಿಗೆ ಸಾಕಷ್ಟು ಮಾರ್ಗಗಳು ಇವೆ. ಸರಕಾರದ ಮಟ್ಟದಲ್ಲೂ ಆನ್ ಲೈನ್‌ ಮೋಸದಾಟದ‌ ಬಗ್ಗೆ, ಯುವಕರಲ್ಲಿ‌ ಹೆಚ್ಚುತ್ತಿರುವ ಗೀಳಿನ ಬಗ್ಗೆ ಮಾತನಾಡುವದಾಗಿ ಪ್ರತಿಕ್ರಿಯೆ‌ ನೀಡಿದರು.

  Share This
  300x250 AD
  300x250 AD
  300x250 AD
  Leaderboard Ad
  Back to top