ಜೋಯಿಡಾ: ಅಕ್ರಮವಾಗಿ ಸಾಗಿಸುತ್ತಿದ್ದ ಗೋವಾ ಮದ್ಯವನ್ನು ತಾಲೂಕಿನ ಅನಮೋಡ ಚೆಕ್‌ಪೋಸ್ಟ್ ಬಳಿ ಖಚಿತ ಮಾಹಿತಿ ಆಧಾರದ ಮೇರೆಗೆ ಅಬಕಾರಿ ಅಧಿಕಾರಿಗಳು ಜಪ್ತಿಪಡಿಸಿಕೊಂಡಿದ್ದಾರೆ.
ಆ0ಧ್ರಪ್ರದೇಶದ ವೆಂಕಟರಮಣ ಗೌಡ, ರವಿ ಮದ್ದಿಲೇಟಿ ಆಂದ್ರಪ್ರದೇಶ ಎನ್ನುವವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ವಾಹನದ ಮಾಲಿಕನ್ನು ಪತ್ತೆ ಹಚ್ಚಲಾಗುತ್ತಿದೆ. 264 ಲೀ. ಗೋವಾ ಮದ್ಯ ಹಾಗೂ 161.280 ಬಿಯರನ್ನು ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.
ಅಬಕಾರಿ ಉಪ ಆಯುಕ್ತ ಜಗದೀಶ್ ಎನ್.ಕೆ. ಹಾಗೂ ಉಪ ಅಧೀಕ್ಷಕ ಶಂಕರಗೌಡ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಅನಮೋಡ ಅಬಕಾರಿ ಸಬ್ ಇನ್ಸ್ಪೆಕ್ಟರ್ ಟಿ.ಬಿ.ಮಲ್ಲಣ್ಣನವರ, ಸಿಬ್ಬಂದಿ ರಾಜು ಭಟ್ಕಳ್, ವೈ.ಎಫ್.ಕಣ್ಣೂರ, ಯು.ಎನ್.ತುಳಜಿ, ಎನ್.ಜಿ.ಜೊಗಳೇಕರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.