ಕಾರವಾರ: ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ 2023ರ ಟ್ಯಾಗೋರ್ ಪ್ರಶಸ್ತಿಗೆ ಮೂವರನ್ನ ಆಯ್ಕೆ ಮಾಡಲಾಗಿದೆ.
ಪತ್ರಿಕಾ ವಿಭಾಗದಲ್ಲಿ ಕರಾವಳಿ ಮುಂಜಾವು ವರದಿಗಾರ ಪ್ರಶಾಂತ ಮಹಾಲೆ, ವಿದ್ಯುನ್ಮಾನ ವಿಭಾಗದಲ್ಲಿ ನ್ಯೂಸ್ 18 ವರದಿಗಾರ ದರ್ಶನ ನಾಯ್ಕ ಅವರ್ಸಾ ಮತ್ತು ಬೆಂಗಳೂರಿನಲ್ಲಿರುವ ಜೀ ನ್ಯೂಸ್ ರಾಜಕೀಯ ವಿಭಾಗದ ವರದಿಗಾರ ಜನಾರ್ಧನ ಹೆಬ್ಬಾರ್ ಆಯ್ಕೆಯಾಗಿದ್ದಾರೆ. ಗುರುವಾರ ಜಿಲ್ಲಾ ಪತ್ರಿಕಾಭವನದಲ್ಲಿ ನಡೆಸಿದ ಜಿಲ್ಲಾ ಕೇಂದ್ರ ಕಾರ್ಯನಿರತ ಪ್ರತ್ರಕರ್ತರ ಸಂಘದ ಅಧ್ಯಕ್ಷರಾದ ಟಿ ಬಿ ಹರಿಕಾಂತ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆಸಲಾಯಿತು.
ಸಭೆಯಲ್ಲಿ ಸಂಘದ ಕಾರ್ಯದರ್ಶಿ ಶೇಷಗಿರಿ ಮುಂಡಳ್ಳಿ, ಖಜಾಂಚಿ ಸುಭಾಷ್ ಧೂಪದಹೊಂಡ, ವಾಸುದೇವ ಗೌಡ, ಸಂದೀಪ ಸಾಗರ, ನವೀನ ಸಾಗರ ಸೇರಿದಂತೆ ಹಿರಿಕಿರಿಯ ಸದಸ್ಯರು ಹಾಜರಿದ್ದರು. ಪತ್ರಿಕಾ ದಿನಾಚರಣೆಯಂದು ಪ್ರಶಸ್ತಿ ಪ್ರದಾನ ನಡೆಯಲಿದೆ.
ಟ್ಯಾಗೋರ್ ಪ್ರಶಸ್ತಿಗೆ ಪ್ರಶಾಂತ ಮಹಾಲೆ, ದರ್ಶನ ನಾಯ್ಕ, ಜನಾರ್ಧನ ಹೆಬ್ಬಾರ್ ಆಯ್ಕೆ
