ಕಾರವಾರ: ಇರುವ ಅವಕಾಶಗಳನ್ನ ಬಳಸಿಕೊಂಡು ಯುವಜನತೆ ಸಾಧನೆಗಳನ್ನ ಮಾಡಿ ಎಂದು ಸಚಿವ ಮಂಕಾಳ ವೈದ್ಯ ಕಿವಿಮಾತು ಹೇಳಿದರು.
ನೆಹರು ಯುವ ಕೇಂದ್ರ, ಕಡಲಸಿರಿ ಯೂಥ್ ಕ್ಲಬ್, ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗಳ ಆಶ್ರಯದಲ್ಲಿ ಕಾರವಾರದ ಕ್ರಿಮ್ಸ್ನಲ್ಲಿ ಜಿಲ್ಲಾ ಮಟ್ಟದ ಯುವ ಉತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯ ಯುವಜನರಿಗೆ ಆಸಕ್ತಿ ಇದೆ, ಸಾಧಿಸಬೇಕೆಂಬ ಛಲವಿದೆ. ಈಗ ಅವಕಾಶಗಳಿಗೆ ಕೊರತೆ ಇಲ್ಲ. ಪಾಲಕರು, ಸರ್ಕಾರಗಳು, ಸಂಘ- ಸಂಸ್ಥೆಗಳು, ದಾನಿಗಳು, ರಾಜಕಾರಣಿಗಳು ಕೂಡ ಸಹಾಯ- ಸಹಕಾರ ನೀಡುತ್ತಿದ್ದಾರೆ ಎಂದರು.
ಕ್ರಿಮ್ಸ್ ನಿರ್ದೇಶಕ ಡಾ.ಗಜಾನನ ನಾಯಕ ಮಾತನಾಡಿ, ಯುವ ಉತ್ಸವದಿಂದ ನಮ್ಮ ಕಾಲೇಜಿನಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ವೈದ್ಯಕೀಯ ಕಾಲೇಜಿನಿಂದ ಯಾವುದೇ ಸಾಮಾಜಿಕ ಕಾರ್ಯಕ್ಕೂ ತಯಾರಿದ್ದೇವೆ. ಕರಾವಳಿಯ ಏಕೈಕ ಮೆಡಿಕಲ್ ಕಾಲೇಜನ್ನು ಅಭಿವೃದ್ಧಿಪಡಿಸಿ ರಾಜ್ಯದ ನಂಬರ್ 1 ಕಾಲೇಜು ಮಾಡಲು ಎಲ್ಲರೂ ಸಹಕಾರ ನೀಡಬೇಕಿದೆ ಎಂದರು.
ಜಿಲ್ಲಾ ಸರ್ಜನ್ ಡಾ.ಶಿವಾನಂದ ಕುಡ್ತರಕರ್, ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ಎಲ್ಲರಿಗೂ ಅವಕಾಶ ಸಿಗಲ್ಲ. ಸಿಕ್ಕ ಅವಕಾಶವನ್ನ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಯುವಜನರಿಗೆ ಕಿವಿಮಾತು ಹೇಳಿದರು. ಜಿಲ್ಲಾ ಯುವ ಅಧಿಕಾರಿ ಯಶ್ವಂತ ಯಾದವ್ ಪ್ರಾಸ್ತಾವಿಕ ಮಾತನಾಡಿದರು. ಉಪಾಧ್ಯಕ್ಷ ಅಭಿಶೇಕ ಕಳಸ ಸ್ವಾಗತ. ಶಿವಂ ನಾಯ್ಕ ವಂದನಾರ್ಪಣೆ ಮಾಡಿದರು. ತನುನಾ ದೇವಣಿ ನಿರೂಪಣೆ ಮಾಡಿದರು.