Slide
Slide
Slide
previous arrow
next arrow

ಸೇಂಟ್ ಮೈಖೆಲ್ ಪ್ರೌಢಶಾಲೆಯ ವಿದ್ಯಾರ್ಥಿನಿಯರಿಗೆ ಆರೋಗ್ಯ ತಪಾಸಣೆ

300x250 AD

ಕಾರವಾರ: ರೋಟರಿ ಕ್ಲಬ್ ವತಿಯಿಂದ ರೋಟರಿ ಅಸ್ಮಿತಾ ಕಾರ್ಯಕ್ರಮದ ಅಡಿಯಲ್ಲಿ ನಗರದ ಸೆಂಟ್ ಮೈಖೆಲ್ ಪ್ರೌಢ ಶಾಲೆಯ ವಿದ್ಯಾರ್ಥಿನಿಯರಿಗೆ ಎಂ.ಹೆಚ್.ಎಂ. ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸಭಾ ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷ ರಾಘವೇಂದ್ರ ಜಿ.ಪ್ರಭುರವರು ಎಲ್ಲರನ್ನು ಸ್ವಾಗತಿಸುತ್ತ ಅಸ್ಮಿತಾ ಕಾರ್ಯಕ್ರಮದಡಿಯಲ್ಲಿ ವಿದ್ಯಾರ್ಥಿನಿಯರಿಗೆ ಹಿಮೊಗ್ಲೋಬಿನ್ ತಪಾಸಣೆ ಮಾಡಿ ಯೋಗ್ಯ ಸಲಹೆಯೊಂದಿಗೆ ಔಷಧಿಗಳನ್ನು ನೀಡಲಾಗುತ್ತದೆ ಹಾಗೂ ಪ್ರಾಜೆಕ್ಟರ್ ಮೂಲಕ ವಿವರಣೆಯನ್ನು ನೀಡಲಾಗುತ್ತದೆ ಎಂದರು.

ಶಾಲೆಯ ಮುಖ್ಯಧ್ಯಾಪಕಿ ಸಿಸ್ಟರ್ ಕ್ರಿಸ್ಟಿನಾ ರೋಟರಿ ಸಂಸ್ಥೆಯ ಕಾರ್ಯಗಳನ್ನು ಶ್ಲಾಘಿಸಿದರು. ಮತ್ತು ವಿದ್ಯಾರ್ಥಿನಿಯರು ಆರೋಗ್ಯದತ್ತ ಲಕ್ಷ ವಹಿಸಬೇಕು ಎಂದರು. ಸ್ತ್ರೀರೋಗ ತಜ್ಞರಾದ ಡಾ.ಪೂಜಾರವರು ವಿಧ್ಯಾರ್ಥಿನಿಯರಿಗೆ ಪ್ರಾರಂಭದಲ್ಲಾಗುವ ಆರೋಗ್ಯದ ಬದಲಾವಣೆಗಳನ್ನು ವಿವರಿಸುತ್ತ ಅವುಗಳನ್ನು ಹೇಗೆ ನಿವಾರಿಸಿಕೊಳ್ಳಬೇಕು ಎನ್ನುವುದರ ಹಾಗು ಶುಚಿತ್ವದ ಕುರಿತು ಯೋಗ್ಯ ಸಲಹೆ ಸೂಚನೆಗಳನ್ನು ನೀಡಿದರು.
ರೋಟರಿ ಕಮ್ಯುನಿಟಿ ನಿರ್ದೇಶಕ ಎಲ್.ಎಸ್.ಫರ್ನಾಂಡಿಸ್ ಮಾತನಾಡಿದರು. ಸುಮಾರು 395 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ವೈದ್ಯರಾದ ಡಾ.ಸಭಾ, ಡಾ.ಸಾನ್ಯ, ಶುಶ್ರೂಷಕರಾಗಿ ಕೃಪಾಲಿ, ಪ್ರಿಯಾಂಕಾ ಮರಾಠೆ, ಪ್ರಯೋಗಶಾಲಾ ತಜ್ಞರಾಗಿ ಸುಪ್ರಿಯಾ ನಾಯ್ಕ ಉಪಸ್ತಿತರಿದ್ದರು. ಶಾಲೆಯ ಶಿಕ್ಷಕರಾದ ತೇಜಲ್ ರೇಗೆ ಉಪಸ್ಥಿತರಿದ್ದರು ಮತ್ತು ರೋಟರಿ ಸಂಸ್ಥೆಯಿ0ದ ಕೆ.ಡಿ.ಪೆಡ್ನೇಕರ, ಗುರು ಹೆಗಡೆ, ವಿನೋದ ಕೊಠಾರಕರ, ಸಾತಪ್ಪಾ ತಾಂಡೇಲ, ಡಾ. ಸಮೀರಕುಮಾರ ನಾಯಕ, ಮುರಳಿ ಗೊವೇಕರ, ಮೋಹನ ನಾಯ್ಕ, ಅನಮೋಲ ರೇವಣಕರ ಉಪಸ್ಥಿತರಿದ್ದರು. ಕಾರ್ಯದರ್ಶಿ ಗುರುದತ್ತ ಬಂಟರವರು ವಂದಿಸಿದರು. ಕಾರ್ಯಕ್ರಮವನ್ನು ಶೈಲೇಶ ಹಳದಿಪೂರ ನಿರೂಪಿಸಿದ್ದರು.

300x250 AD
Share This
300x250 AD
300x250 AD
300x250 AD
Back to top