Slide
Slide
Slide
previous arrow
next arrow

ಬಸ್‌ನ ಟಯರ್ ಸ್ಫೋಟ: ಮೂವರು ಪ್ರಯಾಣಿಕರಿಗೆ ಗಾಯ

300x250 AD

ಗೋಕರ್ಣ: ಇಲ್ಲಿಯ ರಾಜ್ಯ ಹೆದ್ದಾರಿ 143 ರ ಮೂಲೆಕೇರಿ ಬಳಿ ಚಲಿಸುತ್ತಿದ್ದ ಸಾರಿಗೆ ಸಂಸ್ಥೆ ಬಸ್ ಟಯರ್ ಸ್ಫೋಟಗೊಂಡ ಘಟನೆ ನಡೆದಿದ್ದು, ಮೂವರು ಪ್ರಯಾಣಿಕರು ಗಾಯಗೊಂಡಿದ್ದಾರೆ. ತಕ್ಷಣ ಗಾಯಾಳುಗಳನ್ನು 108 ವಾಹನದ ಮೂಲಕ ಕುಮಟಾ ಆಸ್ಪತ್ರೆಗೆ ಚಿಕಿತ್ಸೆಗೆ ಸಾಗಿಸಲಾಯಿತು.
ಈ ಬಸ್ ಗೋಕರ್ಣದಿಂದ ಕುಮಟಾಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಅವಘಡ ನಡೆದಿದೆ. ಒಂದುವೇಳೆ ಇದು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ ವೇಗವಾಗಿ ಚಲಿಸುತ್ತಿದ್ದ ಸಂದರ್ಭದಲ್ಲಿ ಈ ಅವಘಡ ನಡೆದಿದ್ದರೆ ದೊಡ್ಡ ಅನಾಹುತವೇ ನಡೆದುಹೋಗುತ್ತಿತ್ತು. ಅದೃಷ್ಟವಶಾತ್ ಕೇವಲ 3 ಪ್ರಯಾಣಿಕರಿಗೆ ಮಾತ್ರ ಗಾಯಗಳಾಗಿದ್ದು, ಇವರು ಕುಮಟಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ಕುರಿತು ಪೊಲೀಸರು ಪರಿಶೀಲಿಸುತ್ತಿದ್ದಾರೆ.

300x250 AD
Share This
300x250 AD
300x250 AD
300x250 AD
Back to top