ಕುಮಟಾ: ಜರ್ಮನಿಯ ಬರ್ಲಿನ್‌ನಲ್ಲಿ ನಡೆದ ಸ್ಪೆಷಲ್ ಒಲಂಪಿಕ್‌ನ ವಿಶ್ವ ಬೇಸಿಗೆ ಕ್ರೀಡಾಕೂಟದಲ್ಲಿ ಇಲ್ಲಿನ ದಯಾನಿಲಯದ ವಿದ್ಯಾರ್ಥಿ ಬಸ್ತಿಪೇಟೆಯ ವಿಘ್ನೇಶ ನಾಯ್ಕ ಟೇಬಲ್ ಟೆನ್ನಿಸ್‌ನಲ್ಲಿ ಎರಡು ಚಿನ್ನದ ಪದಕ ಗೆದ್ದಿದ್ದು, ಇವರನ್ನು ಆರ್ಯ ಈಡಿಗ ನಾಮಧಾರಿ ಸಂಘದ ವತಿಯಿಂದ ಗುರುವಾರ ಬೆಳಿಗ್ಗೆ ದಯಾನಿಲಯದಲ್ಲಿ ಸನ್ಮಾನಿಸಿ, ಅಭಿನಂದಿಸಲಾಯಿತು.
ಜರ್ಮನಿಯಿಂದ ಗುರುವಾರ ಬೆಳಿಗ್ಗೆ ಕುಮಟಾಕ್ಕೆ ಬಂದ ವಿಘ್ನೇಶನನ್ನು ದಯಾನಿಲಯದಲ್ಲಿ ಭೇಟಿಯಾದ ನಾಮಧಾರಿ ಸಮಾಜದ ಮುಖಂಡರು ಸನ್ಮಾನಿಸಿ, ಅಭಿನಂದಿಸಿದರು. ಈ ಸಂದರ್ಭ ಶಿಕ್ಷಕ ಮಂಜುನಾಥ ನಾಯ್ಕ ಮಾತನಾಡಿ, ವಿಘ್ನೇಶನ ಸಾಧನೆ ಮತ್ತು ಮನೆಯವರು ಹಾಗೂ ದಯಾನಿಲಯದ ಶಿಕ್ಷಕರ ಶ್ರಮವನ್ನು ಕೊಂಡಾಡಿದರು.
ಈ ಸಂದರ್ಭದಲ್ಲಿ ವಿಘ್ನೇಶನ ಸಾಧನೆಗೆ ಸಹಕರಿಸಿದ ದಯಾನಿಲಯದ ಮುಖ್ಯಸ್ಥ ಸಿರಿಲ್, ದೈಹಿಕ ವ್ಯಾಯಾಮದ ಹಿರಿಯ ತರಬೇತುದಾರರಾದ ಕೊರಗಾಂವ್ಕರ್ ಮಾಸ್ಟರ್ ಮತ್ತು ಅನಿಲ್ ನಾಯ್ಕ ಅವರನ್ನು ಸನ್ಮಾನಿಸಿ, ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ನಾಮಧಾರಿ ಸಂಘದ ಕುಮಟಾ ತಾಲೂಕಾಧ್ಯಕ್ಷ ಮಂಜುನಾಥ ನಾಯ್ಕ, ಕಾರ್ಯದರ್ಶಿ ರಾಘವೇಂದ್ರ ನಾಯ್ಕ, ನಿರ್ದೇಶಕರಾದ ಕಮಲಾಕರ ನಾಯ್ಕ, ಸಂತೋಷ್ ನಾಯ್ಕ, ನಿತ್ಯಾನಂದ ನಾಯ್ಕ, ನಾಗೇಂದ್ರ ನಾಯ್ಕ, ನಾಮಧಾರಿ ಸಮಾಜದ ಮುಖಂಡರಾದ ಆರ್. ಜಿ. ನಾಯ್ಕ, ಎಚ್. ಆರ್. ನಾಯ್ಕ, ಸೂರಜ್ ನಾಯ್ಕ ಸೋನಿ, ರತ್ನಾಕರ ನಾಯ್ಕ, ಲೋಕೇಶ್ ನಾಯ್ಕ, ಯುವ ಬ್ರಿಗೇಡ್ ಮುಖ್ಯಸ್ಥ ಅಣ್ಣಪ್ಪ ನಾಯ್ಕ ಮತ್ತಿತ್ತರರು ಇದ್ದರು.