Slide
Slide
Slide
previous arrow
next arrow

ಲೋಕ ಕಲ್ಯಾಣಾರ್ಥವಾಗಿ ಧಾರೇಶ್ವರನಿಗೆ ಸಹಸ್ರ ಕುಂಬಾಭಿಷೇಕ

300x250 AD

ಕುಮಟಾ: ಲೋಕ ಕಲ್ಯಾಣಾರ್ಥವಾಗಿ ಶ್ರೀಕ್ಷೇತ್ರ ಧಾರೇಶ್ವರ ಶ್ರೀ ಧಾರಾನಾಥ ಸ್ವಾಮಿಯ ಸನ್ನಿಧಿಯಲ್ಲಿ ವಾರ್ಷಿಕವಾಗಿ ನಡೆಯುವ ಕುಂಭಾಭೀಷೇಕ ಪೂಜೆಯು ಗುರುವಾರ ಏಕಾದಶಿ ತಿಥಿಯಂದು ಶದ್ದಾಭಕ್ತಿಯಿಂದ ನೂರಾರು ವಿಪ್ರ ಭಕ್ತರು ಸೇರಿ ನಡೆಸಿದರು.
25 ವರ್ಷಕ್ಕೂ ಅಧಿಕ ಕಾಲದಿಂದ ಪ್ರತಿ ವರ್ಷದಂದು ಈ ಪುಣ್ಯ ದೇವತಾ ಕಾರ್ಯ ನಡೆಸಿಕೊಂಡು ಬಂದ ವಿಪ್ರ ಭಕ್ತ ವ್ರಂದವು ನಡೆಸಿಕೊಂಡು ಬಂದಿದೆ. ಗುರುವಾರದಂದು ಕುಂಭಾಭಿಷೇಕವು ದೇವಸ್ಥಾನದ ಅರ್ಚಕ ವೃಂದದಿಂದ ಬೆಳಗ್ಗೆ 8.30ಕ್ಕೆ ಸಂಕಲ್ಪಿತ ಪೂಜೆಯಿಂದ ಆರಂಭಗೊoಡಿದ್ದು, 10 ಗಂಟೆಯಿಂದ ನೂರಾರು ವಿಪ್ರ ಭಕ್ತರು ಧೋರೇಶ್ವರನಿಗೆ ಕುಂಬಾಭಿಷೇಕಕ್ಕಾಗಿ ನೀರನ್ನು ಕೊಡದಲ್ಲಿ ತುಂಬಿಸಿ ಒಬ್ಬರಿಂದ ಒಬ್ಬರಿಗೆ ನೀಡುತ್ತಾ ಸಹಸ್ರ ಕುಂಭದಿಂದ ಅಭಿಷೇಕ ನಡೆಸಿದರು.

ಕುಂಬಾಭಿಷೇಕದುದ್ದಕ್ಕೂ ವಿಪ್ರ ಭಕ್ತ ವ್ರಂದ ರುದ್ರಾಧಿ ಉಪನಿಷತ್, ಓಂ ನಮಃ ಶಿವಾಯ ಸ್ತೋತ್ರ, ಮಂತ್ರ ಪಟಿಸುತ್ತಾ ಧೋರೇಶ್ವರನ ಪಾದಾರವಿಂದ್ಯಕ್ಕೆ ಕೊಡದಲ್ಲಿ ಕುಂಬಾಭಿಷೇಕ ಸಮರ್ಪಿಸಲಾಯಿತು. ಮಧ್ಯಾಹ್ನ 1 ಗಂಟೆಗೆ ಮಹಾಮಂಗಲಾರತಿ ನಡೆಸಲಾಯಿತು. ನಂತರ ಧೋರೇಶ್ವರನ ಪ್ರಸಾದ ಭೋಜನವನ್ನು ಸ್ವೀಕರಿಸಿ ದೇವರ ಕ್ರಪೆಗೆ ಪಾತ್ರರಾದರು. ಆಡಳಿತ ಮಂಡಳಿಯ ಸಹಕಾರದೊಂದಿಗೆ ದೇವಸ್ಥಾನದ ಪ್ರಧಾನ ಅರ್ಚಕ ವೃಂದ ಮತ್ತು ಊರಿನ ಹಾಗೂ ಪರ ಊರಿನ ವಿಪ್ತರ ಭಕ್ತರು, ಯುವಕರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.

300x250 AD
Share This
300x250 AD
300x250 AD
300x250 AD
Back to top