ಗೋಕರ್ಣ: ಇಲ್ಲಿಯ ಶ್ರೀಮಹಾಬಲೇಶ್ವರ ಕೋ- ಆಪರೇಟಿವ್ ಬ್ಯಾಂಕ್ 2022-23ನೇ ಸಾಲಿನ ತನ್ನ ವಹಿವಾಟಿನಲ್ಲಿ 1.17 ಕೋಟಿ ನಿವ್ವಳ ಲಾಭವನ್ನು ದಾಖಲಿಸಿ ಶೇರುದಾರರಿಗೆ ಹೆಚ್ಚಿನ ಲಾಭಾಂಶವನ್ನು ಒದಗಿಸಿದೆ. ಗ್ರಾಹಕರಿಗೆ ವಿವಿಧ ಠೇವಣಿಗಳ ಮೂಲಕ ಹೆಚ್ಚೆಚ್ಚು ಬಡ್ಡಿದರವನ್ನು ನೀಡುತ್ತಿದ್ದು, ಸರಳೀಕೃತ ವ್ಯವಸ್ಥೆಯೊಂದಿಗೆ ಸಾಲಗಳನ್ನು ನೀಡುತ್ತಿದೆ.
ವಿಶೇಷ ಯೋಜನೆಗಳಾದ ಗೋ ಸಾಕಣೆ ಪ್ರೋತ್ಸಾಹಿಸಲು 2 ಲಕ್ಷದವರೆಗಿನ ಸಾಲ ಗ್ರಾಹಕರ ಠೇವಣಿಗಳ ಮೇಲೆ 5 ಲಕ್ಷದವರೆಗಿನ ವಿಮಾ ಭದ್ರತೆ, ಹಿರಿಯ ನಾಗರಿಕರಿಗೆ ವಿಶೇಷ ಸೌಲಭ್ಯ, ಚಿನ್ನದ ಅಡವಿನಲ್ಲಿ ಅತಿಹೆಚ್ಚು ಪ್ರಮಾಣದ ಸಾಲ ನೀಡುವಿಕೆ, ಬ್ಯಾಂಕ್‌ನ ಸದಸ್ಯರುಗಳಿಗೆ ವೈದ್ಯಕೀಯ ಪರಿಹಾರದ ನೆರವು ಇಂತಹ ಅನೇಕ ಯೋಜನೆಗಳ ಮೂಲಕ ಗ್ರಾಹಕರು ಸ್ನೇಹಪರ ಬ್ಯಾಂಕಾಗಿ ಅಭಿವೃದ್ಧಿಗೊಳ್ಳುತ್ತಿದೆ ಎಂದು ಪ್ರಧಾನ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.