ಮುಂಡಗೋಡ: ರಾಜ್ಯ ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸಿರುವುದರ ವಿರುದ್ಧ ಖಾಸಗಿ ಟೆಂಪೊ ಹಾಗೂ ಟ್ರ‍್ಯಾಕ್ಸ್ ಮಾಲಿಕರು ಹಾಗೂ ಚಾಲಕರು ರಾಜ್ಯ ಸರ್ಕಾರ ವಿರುದ್ಧ ಪ್ರತಿಭಟನೆ ನಡೆಸಿದರು.
ಪಟ್ಟಣದ ಪ್ರವಾಸ ಮಂದಿರದಿoದ ಟೆಂಪೊ ಹಾಗೂ ಟ್ರ‍್ಯಾಕ್ಸ್ ಮಾಲಕ- ಚಾಲಕರು ಸೇರಿ ಟೆಂಪೊ ಸಮೇತವಾಗಿ ಪಾದಯಾತ್ರೆ ಮೂಲಕವಾಗಿ ತಹಶೀಲ್ದಾರ ಕಛೇರಿಗೆ ತೆರಳಿ, ತಹಶೀಲ್ದಾರ ನೇತೃತ್ವದಲ್ಲಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ರಾಜ್ಯ ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸಿರುವುದರಿಂದ ಮಹಿಳೆಯರು ಟೆಂಪೊ ಹಾಗೂ ಟ್ರ‍್ಯಾಕ್ಸ್ ಕಡೆ ಮುಖ ಮಾಡುತ್ತಿಲ್ಲ. ಟೆಂಪೊ ಹಾಗೂ ಟ್ರ‍್ಯಾಕ್ಸ್ ಮಾಲಕ- ಚಾಲಕರು ಇದೇ ಉದ್ಯೋಗವನ್ನೆ ನಂಬಿ ಬದುಕುತ್ತಿದ್ದಾರೆ. ಆದರೆ ಸದಸ್ಯ ಈ ಗ್ಯಾರೆಂಟಿ ಘೋಷಣೆಗಳಿಂದ ಜೀವನ ನಡೆಸುವುದು ಕಷ್ಟಕರವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.