ಸಿದ್ದಾಪುರ: ಶ್ರೀಕ್ಷೇತ್ರ ಕರ್ಕಿ ದೈವಜ್ಞ ಮಠದ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳ 38ನೇ ಚಾತುರ್ಮಾಸ್ಯ ವ್ರತ ಸಂಕಲ್ಪವನ್ನು ಕರ್ಕಿ ದೈವಜ್ಞ ಮಠದ ಆವರದಲ್ಲಿರುವ ಶ್ರೀ ಗುರು ನಿವಾಸದಲ್ಲಿ ವ್ಯಾಸಾದಿ ಗುರುಗಳ ಪೂಜೆಯೊಂದಿಗೆ ಪ್ರಾರಂಭವಾಗಲಿದೆ. ಈ ಕಾರ್ಯಕ್ರಮಕ್ಕೆ ಸಮಸ್ತ ಸಿದ್ದಾಪುರದ ಭಕ್ತ ಮಹಾಶಯರು ಹಾಗೂ ಸಮಾಜ ಬಾಂಧವರು ಭಾಗವಹಿಸಬೇಕೆಂದು ಕರ್ಕಿ ದೈವಜ್ಞ ಮಠದ ಪ್ರಧಾನ ಪುರೋಹಿತ ವೇದಮೂರ್ತಿ ಗುರುಭಟ್ ಕರ್ಕಿ ತಿಳಿಸಿದ್ದಾರೆ.
ಅವರು ಪಟ್ಟಣದ ಶ್ರೀಲಕ್ಷ್ಮೀನಾರಾಯಣ ದೇವಾಲಯದಲ್ಲಿ 38ನೇ ಚಾತುರ್ಮಾಸ್ಯ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, ಅಧಿಕಸ್ಯ ಅಧಿಕಂ ಪಲಂ ಎಂದು ಶಾಸ್ತ್ರಕಾರರು ಹೇಳಿದಂತೆ ಅಧಿಕ ಮಾಸದಲ್ಲಿ ನಾವು ಮಾಡುವ ಯಜ್ಞ, ದಾನ, ದೇವತಾ ಕಾರ್ಯಗಳಿಗೆ ವಿಶೇಷವಾದ ಅಧಿಕ ಫಲ ಪ್ರಾಪ್ತಿಯಾಗುವುದು. ಅಧಿಕ ಮಾಸದೊಂದಿಗೆ ಮೂರು ತಿಂಗಳುಗಳ ಕಾಲ ನಡೆಯುವ ಮಹಾಪರ್ವದಲ್ಲಿ ಎಲ್ಲರೂ ಭಾಗವಹಿಸಿ ಜ್ಞಾನೇಶ್ವರಿ ದೇವಿಯ ಹಾಗೂ ಪರಮಪೂಜ್ಯ ಶ್ರೀಗಳ ಆಶೀರ್ವಾದ ಪಡೆಯಬೇಕಾಗಿ ಆಮಂತ್ರಿಸಿದರು.
ಈ ಸಂದರ್ಭದಲ್ಲಿ ದೈವಜ್ಞ ಬ್ರಾಹ್ಮಣ ಸಮಾಜ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಶಾಂತರಾಮ್ ವಿ.ಶೇಟ್, ಪ್ರಧಾನ ಕಾರ್ಯದರ್ಶಿ ರಮೇಶ್ ಕೆ.ರಾಯಕರ, ಕೋಶಾಧ್ಯಕ್ಷ ಚಂದ್ರಹಾಸ ಜಿ.ಶೇಟ, ಕಾರ್ಯದರ್ಶಿ ರಮೇಶ್ ಜಿ.ಶೇಟ, ದೈವಜ್ಞ ಯುವಕ ಸಂಘದ ಅಧ್ಯಕ್ಷ ಪ್ರಶಾಂತ್ ಡಿ.ಶೇಟ್, ರಾಜರಾಜೇಶ್ವರಿ ಮಹಿಳಾ ಮಂಡಳಿಯ ಅಧ್ಯಕ್ಷ ವಿಜಯಾ ರಾಯ್ಕರ್, ಉಪಾಧ್ಯಕ್ಷ ಸುನಿತಾ ಶೇಟ್, ಸುವರ್ಣ ಕೋ- ಆಪರೇಟಿವ್ ಸೊಸೈಟಿಯ ಉಪಾಧ್ಯಕ್ಷ ಮುಕುಂದ ಎಸ್.ಶೇಟ್, ನಿರ್ದೇಶಕ ಬಾಬಾನಂದ್ ಎಚ್.ಶೇಟ್ ಹಾಗೂ ರಾಮದಾಸ ಎಂ.ರಾಯಕರ, ಸಂಜಯ್ ಎಚ್.ಶೇಟ್, ರಾಜು ಬನವಾಸಿ ಹಾಗೂ ಕರ್ಕಿ ಮಠದ ಜಗದೀಶ ಶೇಟ್ ಮತ್ತು ಸಮಾಜದವರು ಉಪಸ್ಥಿತರಿದ್ದರು.