Slide
Slide
Slide
previous arrow
next arrow

ಡಾ.ವಿಠ್ಠಲ ಭಂಡಾರಿ ಒಬ್ಬ ಸಾಂಸ್ಕೃತಿಕ ರಾಯಭಾರಿ: ಡಾ.ಎಂ.ಡಿ. ಒಕ್ಕುಂದ

300x250 AD

ದಾಂಡೇಲಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಒಡನಾಡಿ ಉತ್ತರ ಕನ್ನಡ, ಡಿ.ವೈ.ಎಪ್.ಐ, ಜನವಾದಿ ಮಹಿಳಾ ಸಂಘಟನೆ ಹಾಗೂ ಸಾವಿತ್ರಿಬಾಯಿ ಫುಲೆ ಸಮಾಜ ವಿಜ್ಞಾನ ಅಧ್ಯಯನ ಕೇಂದ್ರದ ಸಂಯುಕ್ತ ಆಶಯದಲ್ಲಿ ದಾಂಡೇಲಿಯ ಮೊರಾರ್ಜಿ ವಸತಿ ಶಾಲೆಯಲ್ಲಿ ಪ್ರೀತಿ ಪದಗಳ ಸಹಯಾನಿ ಡಾ. ವಿಠ್ಠಲ ಭಂಡಾರಿಯವರ ನೆನಪಿನಲ್ಲಿ ಹಮ್ಮಿಕೊಂಡಿದ್ದ ‘ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಹಾಗೂ ಶೈಕ್ಷಣಿಕ ಪ್ರೋತ್ಸಾಹ’ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿ,ಶೈಕ್ಷಣಿಕ ಪರಿಕರ ವಿತರಿಸಿ ಮಾತನಾಡಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ.ಎಂ.ಡಿ.ಒಕ್ಕುಂದ, ವೃತ್ತಿಯಲ್ಲಿ ಉಪನ್ಯಾಸಕರಾಗಿ, ಪ್ರವೃತ್ತಿಯಲ್ಲಿ ಬರಹಗಾರರಾಗಿದ್ದ ಡಾ. ವಿಠ್ಠಲ ಭಂಡಾರಿ ಕೇವಲ ವ್ಯಕ್ತಿಯಾಗಿರಲಿಲ್ಲ. ಅವರೊಂದು ಸಾಂಸ್ಕೃತಿಕ ರಾಯಭಾರಿಯಾಗಿದ್ದರು. ಪ್ರೀತಿಯ ಜೊತೆಗೆ ಮಾನವೀಯ ಮೌಲ್ಯಗಳನ್ನು ಹಂಚುವ ಮನುಷ್ಯ ಪ್ರೇಮಿಯಾಗಿದ್ದರು. ಜೀವ ಪರ ಕಾಳಜಿಯ ವಿಠ್ಠಲ ಭಂಡಾರಿ ಸೌಹಾರ್ದ ಸಮಾಜ ನಿರ್ಮಾಣದ ಕನಸನ್ನು ಕಂಡಿದ್ದರು ಎಂದು ನುಡಿದರು.

300x250 AD

ಹೋರಾಟದ ಮೂಲಕವೇ ಬದುಕನ್ನು ಕಂಡುಕೊoಡಿದ್ದ ವಿಠ್ಠಲ್ ಭಂಡಾರಿ, ವಿದ್ಯಾರ್ಥಿ ಯುವಜನ ಸಂಘಟನೆಯಲ್ಲಿ ಸಾಕಷ್ಟು ಕೆಲಸ ಮಾಡಿದವರು. ಇಡೀ ನಾಡಿನಲ್ಲಿ ಸಾಂಸ್ಕೃತಿಕ ವ್ಯಕ್ತಿಯಾಗಿ ಬೆಳೆದು, ಸಮತೆ ಮತ್ತು ಪ್ರೀತಿ ಸಂದೇಶವನ್ನು ಸಾರುತ್ತ ನೂರಾರು ಕಾರ್ಯಕ್ರಮವನ್ನು ಸಂಘಟಿಸಿದವರು. ಬಡವರ, ತುಳಿತಕ್ಕೊಳಗಾದವರ ಕಷ್ಟಗಳಿಗೆ ಶೈಕ್ಷಣಿಕ ನೆರವು ನೀಡಿ ಕಲಿಕೆಗೆ ಪ್ರೋತ್ಸಾಹ ನೀಡಿದವರು ಎಂದ ಡಾ.ಎಂ.ಡಿ.ಒಕ್ಕು0ದರವರು ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವವನ್ನು ತಾವೇ ನಿರ್ಮಿಸಿಕೊಳ್ಳಬೇಕು. ಸತತ ಓದು, ಪರಿಶ್ರಮ, ನಾಯಕತ್ವದ ಗುಣಗಳೊಂದಿಗೆ ಬದುಕನ್ನು ಕಟ್ಟಿಕೊಳ್ಳುವ ಜೊತೆಗೆ ಸಾಮಾಜಿಕ ತಲ್ಲಣಗಳಿಗೂ ಸ್ಪಂದಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್.ವಾಸರೆಯವರು ಸಂವಿಧಾನ ಓದು ಎನ್ನುವ ಕಾರ್ಯಕ್ರಮವನ್ನು ನಾಡಿನೆಲ್ಲೆಡೆ ಸಂಘಟಿಸಿ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸುವ ಗುರುತರವಾದ ಕೆಲಸವನ್ನು ವಿಠ್ಠಲ್ ಭಂಡಾರಿ ಮಾಡಿದ್ದರು. ಗ್ರಾಮೀಣ ಕೃಪಾಂಕದ0ತಹ ಹಲವಾರು ಹೋರಾಟಗಳನ್ನು ಸಂಘಟಿಸಿ ರಾಜ್ಯದ ಗಮನ ಸೆಳೆದವರಾಗಿದ್ದರು ಎಂದರು.ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಗೌರವ ಕೋಶಾಧ್ಯಕ್ಷ ಮುರ್ತುಜಾ ಹುಸೇನ್ ಆನೆಹೊಸೂರ್ ವಿಠ್ಠಲ ಭಂಡಾರಿಯವರ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಳಕಳಿಯ ಬಗ್ಗೆ ಮಾತನಾಡಿದರು. ಭಾರತ ಪ್ರಜಾಸತ್ತಾತ್ಮಕ ಯುವಜನ ಸಂಘಟನೆಯ ಜಿಲ್ಲಾಧ್ಯಕ್ಷ ಡಿ. ಸ್ಯಾಮಸನ್ ಪ್ರಾಸ್ತಾವಿಕ ಮಾತನಾಡಿದರು. ನಗರಸಭೆಯ ಅಧಿಕಾರಿ ಮೈಕಲ್ ಫರ್ನಾಂಡೀಸ್, ಮೊರಾರ್ಜಿ ವಸತಿ ಶಾಲೆಯ ಅಧ್ಯಕ್ಷರಾದ ನೂರ್ ಅಹ್ಮದ್, ಕಾರ್ಮಿಕ ಮುಖಂಡ ಸಲೀಂ ಸಯ್ಯದ್ ಮುಂತಾದವರು ವೇದಿಕೆಯಲ್ಲಿದ್ದರು.
ಜನವಾದಿ ಮಹಿಳಾ ಸಂಘಟನೆಯ ಅಧ್ಯಕ್ಷೆ ರತ್ನದೀಪ ಎನ್. ಎಂ. ಕಾರ್ಯಕ್ರಮ ನಿರೂಪಿಸಿದರು. ಮೊರಾರ್ಜಿ ವಸತಿ ಶಾಲೆಯ ಅಧ್ಯಾಪಕ ಅಬ್ದುಲ್ ಖಾದ್ರಿ ಸ್ವಾಗತಿಸಿ ವಂದಿಸಿದರು. ಕಾಂತರಾವ್ ಸಹಕರಿಸಿದರು.

Share This
300x250 AD
300x250 AD
300x250 AD
Back to top