Slide
Slide
Slide
previous arrow
next arrow

ಲಯನ್ಸ್ ಕ್ಲಬ್ಬಿನಿಂದ ಡಯಾಲಿಸಿಸ್ ಯಂತ್ರಗಳ ದೇಣಿಗೆ

300x250 AD

ಶಿರಸಿ: ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ಎರಡು ಡಯಾಲಿಸಿಸ್ ಯಂತ್ರಗಳನ್ನು ಹಸ್ತಾಂತರಿಸಲಾಯಿತು. ಲಯನ್ಸ ಕ್ಲಬ್ಬಿನ ನಿರಂತರವಾದ ಸೇವೆಯನ್ನು ಗುರುತಿಸಿ ಲಯನ್ಸ್ ಅಂತರರಾಷ್ಟ್ರೀಯ ಸಂಸ್ಥೆಯು ಒಂದು ಡಯಾಲಿಸಿಸ್ ಯಂತ್ರವನ್ನು ಕ್ಲಬ್’ಗೆ ನೀಡಿದ್ದರು. ಸಾರ್ವಜನಿಕರಿಗೆ ಉಪಯೋಗವಾಗಲೆಂದು ಅದನ್ನು ಪಂಡಿತ ಆಸ್ಪತ್ರೆಗೆ ನೀಡಲಾಯಿತು. ಇನ್ನೊಂದು ಯಂತ್ರವನ್ನು MJF ಲಯನ್ ಉದಯ ಸ್ವಾದಿಯವರು ಡಾ.ಭಾಸ್ಕರ ಸ್ವಾದಿ ಚಾರಿಟೇಬಲ್ ಟ್ರಸ್ಟಿನ ಮೂಲಕ ನೀಡಿದ್ದು,ಅವೆರಡನ್ನೂ ಹಸ್ತಾಂತರಿಸಿ ಲಯನ್ಸ ಜಿಲ್ಲೆ 317 Bಯ ಜಿಲ್ಲಾಧಿಕಾರಿ MJF ಲಯನ್ ಸುಗ್ಗಲಾ ಯೆಳಮಲಿ ಮಾತನಾಡಿದರು.

ಯಂತ್ರವನ್ನು ಸ್ವೀಕರಿಸಿದ ಮುಖ್ಯ ಆರೋಗ್ಯಾಧಿಕಾರಿ ಡಾ. ಗಜಾನನ ಭಟ್ ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿ ಡಯಾಲಿಸಿಸ್ ಯಂತ್ರಗಳ ಅವಶ್ಯಕತೆಯನ್ನು ತಿಳಿಸಿದರು. ಕ್ಲಬ್ಬಿನ ಅಧ್ಯಕ್ಷರಾದ MJF ಲಯನ್ ತ್ರಿವಿಕ್ರಮ ಪಟವರ್ಧನ ಪ್ರಾಸ್ತಾವಿಕ ನುಡಿಗಳನ್ನು ನುಡಿದರು. ಉದಯ ಸ್ವಾದಿಯವರು ಟ್ರಸ್ಟಿನ ಬಗ್ಗೆ ಮಾತನಾಡಿದರು. ಡಯಾಲಿಸಿಸ್ ಯಂತ್ರಗಳು ಬರುವುದಕ್ಕೆ ಶ್ರಮಿಸಿದ ರೀಜನ್ ಛೇರಪರ್ಸನ್ MJF ಲಯನ್ ಜ್ಯೋತಿ ಭಟ್ಟ ವಂದನಾರ್ಪಣೆ ಮಾಡಿದರು. ಲಯನ್ ಸಂಜಯ ಯೆಳಮಲಿ, ಕಾರ್ಯದರ್ಶಿ MJF ರಮಾ ಪಟವರ್ಧನ್, MJF ಕೆ.ಬಿ.ಲೋಕೇಶ ಹೆಗಡೆ, MJF ಚಂದ್ರಶೇಖರ ಹೆಗಡೆ, ಮುಂಬರುವ ಅಧ್ಯಕ್ಷ ಅಶೋಕ ಹೆಗಡೆ, ಲಯನ್ ಡಾ.ಮಹೇಶ ಭಟ್ ಮತ್ತು ಲಯನ್ ಸದಸ್ಯರು ಹಾಗೂ ಡಾ.ಭಾಸ್ಕ ಸ್ವಾದಿ ಟ್ರಸ್ಟಿನ ಟ್ರಸ್ಟಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಜುಲೈ 2ರಂದು ಶಿರಸಿ ಸಿದ್ದಾಪುರ ಶಾಸಕ ಭೀಮಣ್ಣ ನಾಯ್ಕ ಕ್ಷೇತ್ರ ಲೋಕಾರ್ಪಣೆ ಮಾಡುವರು.

300x250 AD
Share This
300x250 AD
300x250 AD
300x250 AD
Back to top