Slide
Slide
Slide
previous arrow
next arrow

ವ್ಯಸನಮುಕ್ತ ಜೀವನದಿಂದ ಬದುಕು ಉಜ್ವಲ: ಪ್ರೊ.ದಾಕ್ಷಾಯಿಣಿ

300x250 AD

ಶಿರಸಿ: ಮಾದಕವಸ್ತು ಮತ್ತು ವ್ಯಸನಮುಕ್ತ ಜೀವನದಿಂದ ಮನುಷ್ಯನ ಬದುಕು ಉಜ್ವಲವಾಗುತ್ತದೆ. ಮಾದಕದ್ರವ್ಯ ವ್ಯಸನದಿಂದ ಯುವಜನತೆ ತನ್ನ ವಿನಾಶವನ್ನು ತಾನೆ ತಂದುಕೊಳ್ಳಲಿದೆ ಎಂದು ಪ್ರೊ.ದಾಕ್ಷಾಯಿಣಿ ಹೆಗಡೆ ಹೇಳಿದರು. ಅವರು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಅಂತರರಾಷ್ಟ್ರೀಯ ಮಾದಕದ್ರವ್ಯ ವಿರೋಧಿ ದಿನಾಚರಣೆ ಅಂಗವಾಗಿ ರೆಡ್ ಕ್ರಾಸ್ ಘಟಕದ ವತಿಯಿಂದ ಹಮ್ಮಿಕೊಂಡ ಜಾಗ್ರತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತ್ಯೇಕ ಅಥವಾ ಪರೋಕ್ಷವಾಗಿ ಇಂದಿನ ಯುವಜನತೆ ಮಾದಕ ವಸ್ತು ವ್ಯಸನಗಳಿಗೆ ದಾಸರಾಗುತ್ತಿದ್ದಾರೆ. ಇದರಿಂದ ಅವರ ಜೀವನ ವಿನಾಶದೆಡೆ ಸಾಗುತ್ತಿದೆ ಇದರಿಂದ ಹೊರ ಬಂದರೆ ಮಾತ್ರ ಅವರ ಬದುಕು ಹಸನಾಗುತ್ತದೆ. ಯುವಕರು ಇದರಿಂದ ಹೊರಬಂದು ವ್ಯಸನ ಮುಕ್ತ ಸಮಾಜ ನಿರ್ಮಾಣವಾಗುವಲ್ಲಿ ಪಾಲಕರು, ಆರಕ್ಷಕರು, ಶಿಕ್ಷಕರು ಎಲ್ಲರೂ ಕೈಜೋಡಿಸಿದಾಗ ಮಾತ್ರ ಉತ್ತಮ ದೇಶ ಕಟ್ಟಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಯುವ ರೆಡ್ ಕ್ರಾಸ್ ಘಟಕದ ಡಾ.ಆರ್.ಕೆಂಚಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿ ಅರ್ಪಿತ ಪ್ರಾರ್ಥಿಸಿದರು. ಉಪನ್ಯಾಸಕರಾದ ಗಣೇಶ ಹೆಗಡೆ ವಸಂತ ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಎಲ್ಲ ವಿದ್ಯಾರ್ಥಿಗಳು, ಸಿಬ್ಬಂದಿ ಹಾಜರಿದ್ದರು.

300x250 AD
Share This
300x250 AD
300x250 AD
300x250 AD
Back to top