• Slide
  Slide
  Slide
  previous arrow
  next arrow
 • ಶತಾಯುಷಿ ಸಾಲೇಕೊಪ್ಪ ಪಟೇಲಜ್ಜ ಇನ್ನಿಲ್ಲ

  300x250 AD

  ಶಿರಸಿ: ಪ್ರಗತಿ ಪರ ರೈತ, ಮಾಲ್ಕಿ ಭೂಮಿಯಲ್ಲಿ ಹಸಿರು ಬೆಳೆಸಿದ ತಾಲೂಕಿನ ಸಾಲೇಕೊಪ್ಪದ ಶತಾಯುಷಿ ವೆಂಕಟರಮಣ ಸೀತಾರಾಮ ಹೆಗಡೆ (ಪಟೇಲರಮನೆ) ಬುಧವಾರ ನಿಧನರಾದರು.

  ವಯೋ ಸಹಜ ಕೆಲ ದಿನಗಳಿಂದ ಅನಾರೋಗ್ಯದಲ್ಲಿ ಇದ್ದ ಅವರು
  ಬ್ರಿಟೀಷ್ ಕಾಲದ ಪೊಲೀಸ್ ಪಟೇಲರೂ ಆಗಿದ್ದರು. ಪಟೇಲ್ ಅಜ್ಜ ಎಂದೇ ಹೆಸರಾಗಿದ್ದ ವೆಂಕಟರಮಣ ಹೆಗಡೆ ಅವರ‌ನ್ನು ಈ ಹಿಂದೆ ಕೃಷಿ ಜಯಂತಿ ಸಂದರ್ಭದಲ್ಲಿ ಸ್ವರ್ಣವಲ್ಲೀ ಶ್ರೀಗಳು ಅತ್ಯುತ್ತಮ ಬೆಟ್ಟ‌ ನಿರ್ವಹಣಾ‌ ಪ್ರಶಸ್ತಿ ನೀಡಿ ಗೌರವಿಸಿದ್ದರು. ಬಿಸಲಕೊಪ್ಪ ಸೇವಾ ಸಹಕಾರಿ ಸಂಘದ ನಿರ್ದೇಶಕರಾಗಿಯೂ ಕಾರ್ಯ ಮಾಡಿದ್ದ ಇವರು ರಂಗ ಭೂಮಿ ತಜ್ಞ ಮಾಸ್ಟರ್ ಹಿರಣ್ಣಯ್ಯ, ಹಿರಿಯ ಪತ್ರಕರ್ತರಾದ ಗರುಡನಗಿರಿ ನಾಗರಾಜ್, ಸಿ. ಸೀತಾರಾಮ್ ಸೇರಿದಂತೆ ಅನೇಕ ಸಾಧಕರ ಆಪ್ತರಾಗಿದ್ದರು.
  ತನ್ನ ಬಳಿ ಆಗುವ ತನಕವೂ ಪ್ರತೀ ವರ್ಷ ಕಾಶಿ ಹಾಗೂ ಧರ್ಮಸ್ಥಳ ಕ್ಷೇತ್ರ ಪ್ರವಾಸ ಮಾಡುತ್ತಿದ್ದ ಅವರು ಇಬ್ಬರು‌ ಪುತ್ರರು, ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top