Slide
Slide
Slide
previous arrow
next arrow

ರೈಲ್ವೆ ನೇಮಕಾತಿ: 3624 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

300x250 AD

ನವದೆಹಲಿ: ಭಾರತೀಯ ರೈಲ್ವೆ ಇಲಾಖೆಯ ಪಶ್ಚಿಮ ರೈಲ್ವೆ ವಿಭಾಗದಲ್ಲಿ 3,624 ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು 12ನೇ ತರಗತಿ ಉತ್ತೀರ್ಣರಾಗಿರಬೇಕು. ಇದಲ್ಲದೆ ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿಯಲ್ಲಿ ಕನಿಷ್ಠ 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಹಾಗೆಯೇ ITI ಪ್ರಮಾಣಪತ್ರ ಹೊಂದಿರುವುದು ಕಡ್ಡಾಯ.

ಅರ್ಜಿದಾರರು ಜುಲೈ 26, 2023ರ ಅನ್ವಯ ಕನಿಷ್ಟ 15 ರಿಂದ ಗರಿಷ್ಟ 24 ವರ್ಷಗಳ ನಡುವೆ ವಯೋಮಿತಿ ಹೊಂದಿರಬೇಕು.

300x250 AD

ಅಪ್ರೆಂಟಿಸ್ ಆಕ್ಟ್, 1961 ರ ಅಡಿಯಲ್ಲಿ ಅರ್ಹ ಅಭ್ಯರ್ಥಿಗಳನ್ನು ಮೆರಿಟ್ ಪಟ್ಟಿಯ ಆಧಾರದಲ್ಲಿ ಆಯ್ಕೆ ಮಾಡಲಾಗುತ್ತದೆ. ಇಲ್ಲಿ ಅರ್ಜಿದಾರರ ಮೆಟ್ರಿಕ್ಯುಲೇಶನ್‌ನಲ್ಲಿ ಶೇಕಡಾವಾರು ಅಂಕಗಳ ಸರಾಸರಿಯನ್ನು ತೆಗೆದುಕೊಳ್ಳುತ್ತದೆ. ಹಾಗೆಯೇ ಐಟಿಐ ಪ್ರಮಾಣಪತ್ರವನ್ನು ಕೂಡ ಗಣನೆಗೆ ತೆಗೆದುಕೊಳ್ಳಲಾಗುತ್ತದೆ.

ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ವೇತನವಾಗಿ ತಿಂಗಳಿಗೆ ರೂ. 18,000 ರಿಂದ ರೂ. 56,900 ರ ವರೆಗೆ ವೇತನ ನೀಡಲಾಗುತ್ತದೆ. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಪಶ್ಚಿಮ ರೈಲ್ವೆಯ ಅಧಿಕೃತ ವೆಬ್‌ಸೈಟ್ http://rrr-wr.com ಗೆ ಭೇಟಿ ನೀಡುವ ಮೂಲಕ ಜುಲೈ 26,2023ರೊಳಗೆ ಅರ್ಜಿ ಸಲ್ಲಿಸಬಹುದು.

Share This
300x250 AD
300x250 AD
300x250 AD
Back to top