• Slide
    Slide
    Slide
    previous arrow
    next arrow
  • ಜು.3ಕ್ಕೆ ರೋಟರಿ ಪದಗ್ರಹಣ ಸಮಾರಂಭ

    300x250 AD

    ಕುಮಟಾ: ರೋಟರಿ ಕ್ಲಬ್‌ನ ನೂತನ ರೋಟರಿ ವರ್ಷದ ಪದಗ್ರಹಣ ಸಮಾರಂಭವು ಜು.3ರ ಸಂಜೆ 6.35ಕ್ಕೆ ಏರ್ಪಾಟಾಗಿದೆ.
    ಪದಗ್ರಹಣ ಅಧಿಕಾರಿಯಾಗಿ 2024-25 ರ ಸಾಲಿಗೆ ಆಯ್ಕೆಯಾದ ರೋಟರಿ ಜಿಲ್ಲಾ ಗವರ್ನರ್ ಬೆಳಗಾವಿಯ ಶರದ್ ಪೈ ಆಗಮಿಸಲಿದ್ದು ಅವರು ಪ್ರಮಾಣ ವಚನ ಬೋಧಿಸಲಿದ್ದಾರೆ. ರೋಟರಿಯ ನೂತನ ಅಧ್ಯಕ್ಷರಾಗಿ ವಿಶ್ರಾಂತ ಮುಖ್ಯಾಧ್ಯಾಪಕ, ಬರಹಗಾರ ಎನ್.ಆರ್.ಗಜು, ಕಾರ್ಯದರ್ಶಿಯಾಗಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾಗಿ ನಿವೃತ್ತರಾದ ರಾಮದಾಸ ಗುನಗಿ ಹಾಗೂ ಖಜಾಂಚಿಯಾಗಿ ಅಭಿಯಂತರ, ಉದ್ಯಮಿ ಸಂದೀಪ ನಾಯಕ ಅಧಿಕಾರ ಸ್ವೀಕರಿಸಲಿದ್ದಾರೆ. ಉಪಾಧ್ಯಕ್ಷರಾಗಿ ವಸಂತ ಶಾನಭಾಗ, ಪವನ ಡಿ. ಶೆಟ್ಟಿ, ಸಹಕಾರ್ಯದರ್ಶಿಗಳಾಗಿ ಡಾ. ವಾಗೀಶ್ ಭಟ್, ಫ್ರಾಂಕಿ ಫರ್ನಾಂಡಿಸ್, ಸರ್ಜೆಂಟ್ ಎಟ್ ಆರ್ಮ್ ಗಣೇಶ್ ನಾಯ್ಕ ಹಾಗೂ 2024-25ರ ಅಧ್ಯಕ್ಷರಾಗಿ ಅತುಲ್ ಕಾಮತ ಆಯ್ಕೆಯಾಗಿದ್ದಾರೆ. ರೋಟರಿ ಅಸಿಸ್ಟಂಟ್ ಗವರ್ನರ್ ವಸಂತ ರಾವ್ ಆಶಯ ನುಡಿಗಳನ್ನಾಡಲಿದ್ದಾರೆ.

    ಇದೇ ಸಂದರ್ಭದಲ್ಲಿ ನೂತನ ಏನ್ಸ್ ಕ್ಲಬ್ ಅಧ್ಯಕ್ಷರಾಗಿ ವಿಜಯಲಕ್ಷ್ಮಿ ನಾಯ್ಕ, ಕಾರ್ಯದರ್ಶಿಯಾಗಿ ಶೈಲಾ ಗುನಗಿ ಹಾಗೂ ಖಜಾಂಚಿಯಾಗಿ ಶ್ರದ್ಧಾ ನಾಯಕ ಸೇವಾ ದೀಕ್ಷೆ ಪಡೆಯಲಿದ್ದಾರೆ. ರೋಟೇರಿಯನ್ನರಾದ ಡಾ. ನಿತಿಶ್ ಶಾನಭಾಗ ಕ್ಲಬ್ ಸೇವೆ, ಸತೀಶ ನಾಯ್ಕ ಸಮುದಾಯ ಸೇವೆ, ವಿನಾಯಕ ಬಾಳೇರಿ ವೃತ್ತಿಪರ ಸೇವೆ, ಸಿಎ ವಿನಾಯಕ ಹೆಗಡೆ ಅಂತರಾಷ್ಟ್ರೀಯ ಸೇವೆ ಹಾಗೂ ಯೋಗೇಶ್ ಎಂ. ಕೋಡ್ಕಣಿ ಯುವ ಸೇವೆಯ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಶಶಿಕಾಂತ ಕೋಲೇಕರ, ಜಿ.ಎಸ್.ಹೆಗಡೆ, ಜಯವಿಠಲ ಕುಬಾಲ, ಸುರೇಶ ಭಟ್, ಜಯಶ್ರೀ ಕಾಮತ, ಶಿಲ್ಪಾ ಜಿನರಾಜ್ ಹಾಗೂ ಡಾ.ಚೈತ್ರಾ ದೀಪಕ ನಾಯ್ಕ ವಿವಿಧ ಸಮಿತಿಯ ಚೇರಮೆನ್‌ರಾಗಿ ನೇಮಕಗೊಂಡಿದ್ದಾರಲ್ಲದೇ ಸಿಎ ವಿನಾಯಕ ಹೆಗಡೆ ಕಾರ್ಯಕ್ರಮದ ಸಂಯೋಜಕರಾಗಿರುತ್ತಾರೆ.
    ಸಮಾರಂಭಕ್ಕೆ ರೋಟರಿ ಪರಿವಾರ ಹಾಗೂ ಸಾರ್ವಜನಿಕರನ್ನು ಆಹ್ವಾನಿಸಿಲಾಗಿದೆಯೆಂದು, ಸಮಾರಂಭದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ರ‍್ಯಾಂಕ್ ಪಡೆದ ಅದಿತಿ ಪ್ರಕಾಶ ವೈದ್ಯ, ಜರ್ಮನಿಯ ಬರ್ಲಿನ್ ನಗರದಲ್ಲಿ ನಡೆದ ಸ್ಪೆಷಲ್ ಒಲಿಂಪಿಕ್ಸ್ನ ವಿಶ್ವ ಬೇಸಿಗೆ ಕ್ರೀಡಾಕೂಟದಲ್ಲಿ ಟೇಬಲ್ ಟೆನಿಸ್ ಸಿಂಗಲ್ಸ್ ಮತ್ತು ಡಬಲ್ಸ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ವಿಘ್ನೇಶ್ವರ ಲೋಕೇಶ್ವರ ನಾಯ್ಕ ಇವರನ್ನು ಸನ್ಮಾನಿಸಲಾಗುವುದು ಎಂದು ರೋಟರಿ ಪ್ರಕಟಣೆಯಲ್ಲಿ ತಿಳಿಸಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top