ಶಿರಸಿ: ನಗರದ ವಿವಿಧಡೆ ಕೊಟ್ಪಾ2003 ಕಾಯಿದೆ ಅಡಿ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಜೂ.27ರಂದು ಕಾರ್ಯಾಚರಣೆ ನಡೆಸಲಾಗಿದೆ
ಹೊಸ ಬಸ್ ಸ್ಟಾಂಡ್, ಗಣೇಶ ನಗರದಲ್ಲಿರುವ ಅಂಗಡಿಗಳ ಮೇಲೆ ಆರೋಗ್ಯ,ಕಂದಾಯ, ICDS, ಸಮಾಜಕಲ್ಯಾಣ ಇಲಾಖೆ, ಆರಕ್ಷಕ ಇಲಾಖೆ ಅಧಿಕಾರಿಗಳು ಅನಧೀಕೃತವಾಗಿ ತಂಬಾಕು ಮಾರಾಟ ಮಾಡುತ್ತಿದ್ದ 25 ಅಂಗಡಿಗಳಿಗೆ ದಾಳಿ ಮಾಡಿ 10 ಕ್ಕೂ ಹೆಚ್ಚು ಅಂಗಡಿಕಾರರಿಗೆ ನೊಟಿಸ ನೋಟಿಸ್ ಜಾರಿ ಮಾಡಿ ದಂಡ ವಿಧಿಸಿದ್ದಾರೆ.
ಯಾವುದೇ ಮುನ್ನೆಚ್ಚರಿಕೆ ಫಲಕ ಅಳವಡಿಸದೆ ತಂಬಾಕು ಮಾರಾಟ ಹಾಗೂ ತಂಬಾಕು ಸೇವನೆ ಅಪರಾಧ ಆಗಿರುತ್ತಿದ್ದು ಈ ಬಗ್ಗೆ ಮಾಹಿತಿ ನೀಡಿ ಒಟ್ಟೂ 2,000 ರೂ. ದಂಡ ವಿಧಿಸಿ, ಕರಪತ್ರ ನೀಡಲಾಯಿತು.
ಈ ವೇಳೆ ತಹಶಿಲ್ದಾರ ಡಾ. ಸುಮಂತ್, ತಾಲೂಕಾ ಆರೋಗ್ಯಾಧಿಕಾರಿ ಡಾಕ್ಟರ್ ವಿನಾಯಕ ಭಟ್ಟ,ICDS ಇಲಾಖೆ ಮೇಲ್ವಿಚಾರಕ ಪರ್ಜಾನ ಶೇಖ, ಸಮಾಜ ಕಲ್ಯಾಣ ಇಲಾಖೆಯ ಕಿರಣ್ .ಟಿ ನಾಯ್ಕ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಗೌರಿ ಸಿ. ನಾಯ್ಕ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ V. C ಹಿರೇಮಠ,ಶಿರಶಿ ನಗರ ಪೋಲಿಸ್ ಠಾಣೆ ಪಿಎಸ್ಐ ರತ್ನಾ.S.K ಹಾಜರಿದ್ದರು.