• Slide
    Slide
    Slide
    previous arrow
    next arrow
  • ಮನೆಯ ಹಿಂಬದಿಗೆ ಉರುಳಿ ಬಂದ ಬೃಹತ್ ಬಂಡೆಗಲ್ಲು: ತಪ್ಪಿದ ಭಾರಿ ಅನಾಹುತ

    300x250 AD

    ಕುಮಟಾ: ಮಂಗಲ ಕಾರ್ಯ ನಡೆಯಲಿರುವ ಮನೆಯೊಂದಕ್ಕೆ ಗುಡ್ಡ ಕುಸಿತದಿಂದ ಉರುಳಿ ಬಂದ ಬೃಹತ್ ಬಂಡೆಗಲ್ಲು ಹಾನಿ ಉಂಟು ಮಾಡಿದ್ದು, ಕೂದಲೆಳೆಯ ಅಂತರದಲ್ಲಿ ಭಾರಿ ಅನಾಹುತ ತಪ್ಪಿದ ಘಟನೆ ಕುಮಟಾ ತಾಲೂಕಿನ ತಂಡ್ರಕುಳಿಯಲ್ಲಿ ನಡೆದಿದೆ.
    ಕಳೆದ ಎರಡುಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಕುಮಟಾ ತಾಲೂಕಿನ ತಂಡ್ರಕುಳಿಯ ಗುಡ್ಡದ ಧರೆ ಕುಸಿದು, ಬೃಹತ್ ಗಾತ್ರದ ಬಂಡೆಗಲ್ಲೊoದು ಉರುಳಿ ಬಂದು ಗಣೇಶ ತುಳಸು ಅಂಬಿಗ ಅವರ ಮನೆಯ ಹಿಂಭಾಗಕ್ಕೆ ಗುದ್ದಿದೆ. ಈ ಅವಘಡದಿಂದ ಮನೆಯ ಗೋಡೆಗಳಿಗೆ ಬಿರುಕು ಬಿಟ್ಟಿವೆ. ಅದರಲ್ಲಿ ಒಂದು ಕೋಣೆಗೆ ಭಾರಿ ಹಾನಿಯಾಗಿದ್ದು, ಗೋಡೆ ಕುಸಿಯುವ ಆತಂಕ ಎದುರಾಗಿದೆ. ಅವಘಡ ನಡೆಯುವ ಸಂದರ್ಭದಲ್ಲಿ ಕುಟುಂಬಸ್ಥರು ಮನೆಯೊಳಗಿದ್ದು, ಕೂದಲೆಳೆಯ ಅಂತರದಲ್ಲಿ ಭಾರಿ ಅನಾಹುತ ತಪ್ಪಿದೆ.

    ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕಂದಾಯ ಅಧಿಕಾರಿಗಳು ಪರಿಶೀಲನೆ ನಡೆಸಿ, ಲಕ್ಷ ರೂ. ಹಾನಿಯಾಗಿರುವುದಾಗಿ ಅಂದಾಜಿಸಲಾಗಿದೆ. ಅಲ್ಲದೇ ಈ ಮನೆಯಲ್ಲಿ ಜೂ.28ರಂದು ವಿವಾಹ ಕಾರ್ಯಕ್ರಮವಿದ್ದು, ಮನೆಗೆ ಸುಣ್ಣ-ಬಣ್ಣ ಬಳಿದು, ಸಿಂಗರಿಸಲಾಗಿತ್ತು. ಆದರೆ ಈ ಅವಘಡದಿಂದ ಮನೆಯ ಅಂದ ಹಾಳಾಗಿದ್ದು, ಮುರುಕಲು ಮನೆತರ ಭಾಸವಾಗುವಂತಾಗಿದೆ. ಈ ಬಗ್ಗೆ ತೀವ್ರ ಬೇಸರ ಹಾಗೂ ಆತಂಕ ವ್ಯಕ್ತಪಡಿಸಿದ ಕುಟುಂಬಸ್ಥರು ಮತ್ತೆ ಧರೆ ಕುಸಿದರೆ, ನಮ್ಮೆಲ್ಲರ ಪಾಡೇನು ಎಂದು ತಮ್ಮ ಅಳಲು ತೋಡಿಕೊಂಡರು.
    ಇನ್ನು ಇದೇ ಭಾಗದಲ್ಲಿ 2017ರಂದು ನಡೆದ ಗುಡ್ಡ ಕುಸಿತದಿಂದ ಮೂವರು ಮಕ್ಕಳು ಜೀವಂತ ಸಮಾಧಿಯಾಗಿರುವುದು ನೆನಪಿಸಿಕೊಂಡರೆ, ಸ್ಥಳೀಯರಲ್ಲಿ ನಡುಕ ಹುಟ್ಟುವಂತಾಗಿದೆ. ತಾಲೂಕು ಆಡಳಿತ ಈ ಬಗ್ಗೆ ಗಮನ ಹರಿಸಿ, ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಆ ಭಾಗದ ಜನರು ಸಂಬ0ಧಪಟ್ಟ ಅಧಿಕಾರಿಗಳನ್ನು ಮತ್ತು ಶಾಸಕ ದಿನಕರ ಶೆಟ್ಟಿ ಅವರನ್ನು ಆಗ್ರಹಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top