• Slide
    Slide
    Slide
    previous arrow
    next arrow
  • ಕಾಂಗ್ರೆಸ್‌ನ ದುರಾಡಳಿತದಿಂದ ರಾಜ್ಯದ ಜನತೆ ಕರಾಳ ದಿನಗಳನ್ನು ನೋಡಬೇಕಿದೆ: ಸುನೀಲ್ ಹೆಗಡೆ

    300x250 AD

    ಹಳಿಯಾಳ: ಕ್ಷೇತ್ರದಲ್ಲಿ ಅಭಿವೃದ್ಧಿ ನಿಂತ ನೀರಾಗಿದೆ. ಮನಸೋ ಇಚ್ಛೆ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದಲ್ಲಿ ಹಣದ ಕೊರತೆಯಿದೆ. ಹೀಗಾಗಿ ಶಾಸಕ ಆರ್.ವಿ.ದೇಶಪಾಂಡೆ ಅವರು ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿಲ್ಲ. ಪ್ರಸ್ತುತ ಕಾಂಗ್ರೆಸ್‌ನ ದುರಾಡಳಿತದಿಂದ ಮುಂದಿನ ದಿನಗಳಲ್ಲಿ ರಾಜ್ಯದ ಜನತೆ ಕರಾಳ ದಿನಗಳನ್ನು ನೋಡಬೇಕಿದೆ ಎಂದು ಮಾಜಿ ಶಾಸಕ ಸುನೀಲ್ ಹೆಗಡೆ ಆತಂಕ ವ್ಯಕ್ತಪಡಿಸಿದರು.
    ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಭಾನುವಾರ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಮಾಜಿ ಪ್ರಧಾನಿ ದಿ.ಇಂದಿರಾಗಾ0ಧಿ ಅವರು ಹೇರಿದ್ದ ತುರ್ತುಪರಿಸ್ಥಿತಿ ವಿರೋಧಿ ದಿನಾಚರಣೆಯಲ್ಲಿ ಮಾತನಾಡಿದರು.
    ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಮತ್ತೇ ಅಧಿಕಾರಕ್ಕೆ ಬರುವುದರ ಜೊತೆಗೆ ಮರಳಿ ಕರ್ನಾಟಕ ರಾಜ್ಯದಲ್ಲಿಯೂ ಆಡಳಿತದ ಚುಕ್ಕಾಣಿ ಹಿಡಿಯಲಿದೆ ಎಂದು ಭವಿಷ್ಯ ನುಡಿದ ಅವರು, ದೇಶಕ್ಕೆ ಕಾಂಗ್ರೆಸ್‌ನಿ0ದ ಸ್ವಾತಂತ್ರ್ಯ ದೊರಕಿದೆ ಎಂದು ಹೇಳುತ್ತಾರೆ. ಆದರೆ ಇದು ಶುದ್ಧ ಸುಳ್ಳಾಗಿದೆ. ಕ್ರಾಂತಿಕಾರಿಗಳು, ದೇಶಭಕ್ತ ಲಕ್ಷಾಂತರ ಹೋರಾಟಗಾರರು ತಮ್ಮ ಪ್ರಾಣವನ್ನು ತ್ಯಾಗ ಮಾಡಿ ದೇಶವನ್ನು ಬ್ರಿಟಿಷರಿಂದ ಮುಕ್ತಗೊಳಿಸಿದ್ದಾರೆಯೇ ಹೊರತು ಕಾಂಗ್ರೆಸ್ಸಿನಿ0ದ ದೇಶಕ್ಕೆ ಸ್ವಾತಂತ್ರ್ಯ ಬಂದಿಲ್ಲವೆ0ದರು.
    ತುರ್ತುಪರಿಸ್ಥಿತಿಯ0ತಹ ಕರಾಳ ದಿನಗಳ ಕುರಿತು ಮಾತುಕತೆ ಮತ್ತು ಚಿಂತನೆ ನಡೆಸದ ಕೆಲವು ಬುದ್ಧಿವಂತರು ಅಸಹಿಷ್ಣುತೆ ಕುರಿತು ಮಾತನಾಡುತ್ತಿದ್ದಾರೆ. ಇವರ ಒಲವು ಯಾರ ಪರವಾಗಿದೆ. ಅವರು ಏಕೆ ಕೇವಲ ಏಕಪಕ್ಷೀಯವಾಗಿ ಮಾತನಾಡುತ್ತಾರೆ ಎಂಬುದು ಎಲ್ಲರಿಗೂ ಅರ್ಥವಾಗುತ್ತಿದೆ ಎಂದ ಸುನೀಲ್ ಹೆಗಡೆ ಮೋದಿ ಆಡಳಿತದಲ್ಲಿ ಶಾಂತಿಯುತ ಹಾಗೂ ಅಭಿವೃದ್ಧಿಯ ಆಡಳಿತಕ್ಕೆ ಆದ್ಯತೆ ನೀಡಲಾಗಿದ್ದು, ಭಾರತ ಪ್ರಗತಿ ಪಥದಲ್ಲಿ ಸಾಗಿದೆ ಎಂದರು.
    ಪ್ರಮುಖರಾದ ಅಜೋಬಾ ಕರಂಜೆಕರ, ಶಿವಾನಿ ನರಸಾನಿ, ತಾನಾಜಿ ಪಟ್ಟೇಕರ, ಜಯಲಕ್ಷ್ಮಿ ಚವ್ಹಾಣ, ಚಂದ್ರಕಾ0ತ ಕಮ್ಮಾರ, ಉದಯ ಹೂಲಿ, ಯಲ್ಲಪ್ಪಾ ಹೊನ್ನೋಜಿ, ಹನುಮಂತ ಚಲವಾದಿ, ಸಂತೋಷ ಘಟಕಾಂಬಳೆ, ಉಮೇಶ ದೇಶಪಾಂಡೆ, ರತ್ನಮಾಲಾ ಮುಳೆ, ವಾಸು ಪೂಜಾರಿ, ಶಾಂತಾ ಹಿರೇಕರ ಇತರರು ಇದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top