• Slide
  Slide
  Slide
  previous arrow
  next arrow
 • ಸರ್ಕಾರಿ ನೆಡುತೋಪಿನಲ್ಲಿ 9.95 ಲಕ್ಷ ಸಸಿ, ರೈತರಿಗೆ ರಿಯಾಯಿತಿ

  300x250 AD

  ಯಲ್ಲಾಪುರ: ಆರ್‌ಎಸ್‌ಪಿಡಿ ಯೋಜನೆಯಲ್ಲಿ 2022-23ನೇ ಸಾಲಿನಲ್ಲಿ 1 ಲಕ್ಷ 47 ಸಾವಿರ 500 ಸಸಿಗಳನ್ನು ಬೆಳೆಸಲಾಗಿದ್ದು, 2023-24ನೇ ಸಾಲಿನಲ್ಲಿ ರೈತರಿಗೆ ವಿತರಿಸಬೇಕಾಗಿದೆ. ಯರಕನಬೈಲ್, ಸಬಗೇರಿ, ಭರಣಿ, ಬಸಳೆಬೈಲ್, ಚಿನ್ನಾಪುರ, ಬಾರೆ, ಕುರಿಕೊಪ್ಪ, ಕಾಳಗನಕೊಪ್ಪ, ಓರಲಗಿ ನರ್ಸರಿಗಳಲ್ಲಿ ವಿವಿಧ ಜಾತಿಯ ಹಾಗೂ ಸ್ಥಳೀಯ ಹವಾಗುಣಕ್ಕೆ ಹೊಂದಾಣಿಕೆಯಾಗುವ 9.95 ಲಕ್ಷ ಸಸಿಗಳನ್ನು ಬೆಳೆಸಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಜಿ.ಹೆಗಡೆ ಹೇಳಿದರು.

  ಈ ಸಸಿಗಳಲ್ಲಿ 812 ಇಂಚ್ ಅಳತೆಯ ಪಾಲಿಥೀನ್ ಚೀಲಗಳಲ್ಲಿ ಬೆಳೆಸಿದ ಸಸಿಗಳಿಗೆ ಪ್ರತಿ ಸಸಿಗೆ 23 ರೂಪಾಯಿಯಂತೆ ಹಾಗೂ 69 ಇಂಚ್ ಅಳತೆಯ ಪಾಲಿಥೀನ್ ಚೀಲಗಳಲ್ಲಿ ಬೆಳೆಸಿದ ಸಸಿಗಳಿಗೆ ಪ್ರತಿ ಸಸಿಗೆ 6 ರೂಪಾಯಿಯಂತೆ ವಿತರಣೆ ಮಾಡಲಾಗುತ್ತಿದೆ. ಕೆಎಪಿವೈ ಯೋಜನೆಯಡಿ ರೈತರಿಗೆ ರಿಯಾಯಿತಿ ದರದಲ್ಲಿ ಸಸಿಗಳನ್ನು ವಿತರಿಸಲಾಗುತ್ತಿದ್ದು, ಈ ಯೋಜನೆಯಡಿ ಸಸಿಗಳನ್ನು ಹಚ್ಚಿದ ನಂತರ ಮುಂದಿನ ಮೂರು ವರ್ಷಗಳಿಗೆ ಬದುಕುಳಿದ ಪ್ರತಿ ಸಸಿಗೆ ಮೊದಲ ವರ್ಷ 35 ರೂ, ಎರಡನೇ ವರ್ಷ 40 ರೂ. ಹಾಗೂ ಮೂರನೇ ವರ್ಷ 50 ರೂ., ಒಟ್ಟು 125 ರೂ.ಗಳನ್ನು ನೀಡಲಾಗುವುದು ಎಂದರು.

  300x250 AD

  ಹಸಿರು ಕರ್ನಾಟಕ ಯೋಜನೆಯಡಿಯಲ್ಲಿ, ಬೀಜ ಬಿತ್ತನೆ ಅಭಿಯಾನದಲ್ಲಿ ಜೂನ್ 5 ರಿಂದ ವಿಭಾಗದ ವಿವಿಧ ಅರಣ್ಯ ಪ್ರದೇಶಗಳ ಖರಾಬ ಪ್ರದೇಶ, ವೇಸ್ಟ್ ಲ್ಯಾಂಡ್, ರೈತರ ಜಮೀನಿನ ನಾಲಾ ಬಂಡ್‌ಗಳ ಮೇಲೆ ವಿವಿಧ ಸ್ಥಳೀಯ ಜಾತಿಯ ಬೀಜಗಳನ್ನು ಬಿತ್ತನೆ ಮಾಡಲಾಗುವುದು. ಸಾರ್ವಜನಿಕರಲ್ಲಿ, ಶಾಲಾ ಮಕ್ಕಳಲ್ಲಿ ಅರಣ್ಯ ಹಾಗೂ ಪರಿಸರದ ಬಗ್ಗೆ, ಜಾಗೃತಿ ಮೂಡಿಸಲು ಕ್ರಮಕೈಗೊಳ್ಳಬೇಕಾಗಿದೆ. ಸದ್ರಿ ಕಾರ್ಯಕ್ರಮಕ್ಕೆ ಶಾಲಾ ಕಾಲೇಜು ಮಕ್ಕಳು, ಎನ್‌ಸಿಸಿ, ಎನ್‌ಎಸ್ ಎಸ್ ಹಾಗೂ ಸೌಟ್ ಮತ್ತು ಗೈಡ್ಸ್ ಮಕ್ಕಳನ್ನು ಉಪಯೋಗಿಸಿಕೊಳ್ಳಲಾಗುವುದು ಎಂದು ಹೇಳಿದರು.
  ಪ್ರಸ್ತುತ ಸಾಲಿನಲ್ಲಿ ವನ ಮಹೋತ್ಸವ ಸಪ್ತಾಹ ಕಾರ್ಯಕ್ರಮದಲ್ಲಿ ಯಲ್ಲಾಪುರ ವಿಭಾಗ ವ್ಯಾಪ್ತಿಯಲ್ಲಿ ವಿವಿಧ ಶಾಲಾ ಕಾಲೇಜು ಆವರಣ, ಸೈಡಿಯಂ ಸುತ್ತ ಸರ್ಕಾರಿ ಕಛೇರಿಗಳ ಆವರಣ, ನ್ಯಾಯಾಲಯದ ಆವರಣ, ಆಸ್ಪತ್ರೆ ಆವರಣ, ಗ್ರಾಮ ಅರಣ್ಯ ಸಮಿತಿಗಳ ಪ್ರದೇಶ, ಸರ್ಕಾರಿ ಜಾಗಗಳಲ್ಲಿ ಅಂದಾಜು 195 ಕಾರ್ಯಕ್ರಮಗಳ ಮೂಲಕ 25 ಸಾವಿರದ 900 ಸಸಿಗಳನ್ನು, ನೆಡಲು ಯೋಜನೆ ರೂಪಿಸಲಾಗಿದೆ. ಯಲ್ಲಾಪುರ ವಿಭಾಗದ ವಿವಿಧ ಅರಣ ಪ್ರದೇಶಗಳಲ್ಲಿ 9 ಲಕ್ಷ 95 ಸಾವಿರ ಸಸಿಗಳನ್ನು ನೆಡಲಾಗುವುದು. ವನಮಹೋತ್ಸವ ಕಾರ್ಯಕ್ರಮವನ್ನು ಜುಲೈ 1 ರಂದು ಶಾಸಕರು ಯಲ್ಲಾಪುರದಲ್ಲಿ ಚಾಲನೆ ನೀಡಲಿದ್ದಾರೆ ಎಂದುಮಾಹಿತಿ ನೀಡಿದರು.
  ಎಸಿಎಫ್ ಆನಂದ ಎಚ್.ಎ., ಮಂಚಿಕೇರಿ ಎಸಿಎಫ್ ಹಿಮವತಿ ಭಟ್, ಯಲ್ಲಾಪುರ ಆರ್‌ಎಫ್‌ಓ ಎಲ್ ಎ ಮಠ, ಡಿಆರ್‌ಎಫ್‌ಓ ಸಂಜಯಕುಮಾರ ಮುಂತಾದವರು ಇದ್ದರು.

  Share This
  300x250 AD
  300x250 AD
  300x250 AD
  Leaderboard Ad
  Back to top