Slide
Slide
Slide
previous arrow
next arrow

ಮಳೆಗಾಗಿ ಪ್ರಾರ್ಥಿಸಿ ಬಸವೇಶ್ವರನಿಗೆ ಜಲಾಭಿಷೇಕ

300x250 AD

ಹಳಿಯಾಳ: ಮಳೆ ಅಭಾವ ಎದುರಿಸುತ್ತಿರುವ ಹಳಿಯಾಳ ಕ್ಷೇತ್ರ ಸೇರಿದಂತೆ ನಾಡಿನಲ್ಲಿ ಉತ್ತಮ ಮಳೆಯಾಗಲೆಂದು ಪ್ರಾರ್ಥಿಸಿ ಪಟ್ಟಣದ ಶೆಟ್ಟಿಗಲ್ಲಿಯಲ್ಲಿರುವ ಶ್ರೀಬಸವೇಶ್ವರ ದೇವಸ್ಥಾನದಲ್ಲಿ ಸೋಮವಾರ ಜಲಾಭಿಷೇಕ ನೆರವೇರಿಸಲಾಯಿತು.

ಶ್ರೀಬಸವೇಶ್ವರ ದೇವಸ್ಥಾನ ಶೆಟ್ಟಿಗಲ್ಲಿ ಟ್ರಸ್ಟ್ ನೇತೃತ್ವದಲ್ಲಿ ಪಟ್ಟಣದ ಶ್ರೀಗುರು ವಿರಕ್ತ ಮಠದ ಪೀಠಾಧೀಶರಾಗಿರುವ ಶ್ರೀಕುಮಾರ ವಿರೂಪಾಕ್ಷೇಶ್ವರ ಮಹಾಸ್ವಾಮಿಗಳು ಹಾಗೂ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಗ್ರಾಮದೇವಿ ಉಡಚಮ್ಮ ದೇವಿ ದೇವಸ್ಥಾನದ ಹತ್ತಿರವಿರುವ ಶ್ರೀಬಸವೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ 7 ಗಂಟೆಯಿಂದಲೇ ರುದ್ರಾಭಿಷೇಕದೊಂದಿಗೆ ಜಲಾಭಿಷೇಕ ಆರಂಭಿಸಲಾಯಿತು. ನಿರಂತರವಾಗಿ ಸಾಯಂಕಾಲ 7.30ರವರೆಗೆ 12 ಗಂಟೆ 30 ನಿಮಿಷಗಳ ಕಾಲ ಬೃಹತ್ ನಂದಿ ವಿಗ್ರಹದ ಮೇಲೆ ಜಲಾಭಿಷೇಕ ನೇರವೆರಿಸಲಾಯಿತು.
ಜಲಾಭಿಷೇಕದಲ್ಲಿ ಪಾಲ್ಗೊಂಡಿದ್ದ ಶ್ರೀಕುಮಾರ ವಿರೂಪಾಕ್ಷೇಶ್ವರ ಮಹಾಸ್ವಾಮಿಗಳು ಮಾತನಾಡಿ, ಈಗಾಗಲೇ ಉತ್ತಮ ಮಳೆಯಾಗಿ ಕೃಷಿ ಜಮೀನುಗಳು ಫಲವತ್ತಾಗಬೇಕಿತ್ತು. ಅಂತರ್ಜಲ ಮಟ್ಟ ಹೆಚ್ಚಬೇಕಿತ್ತು. ಆದರೇ ವರುಣ ದೇವರ ಅವಕೃಪೆಯಿಂದ ಮನುಷ್ಯರು ಸೇರಿ ಪ್ರಾಣಿ- ಪಕ್ಷಿ ಸಂಕುಲಗಳು ಕೂಡ ಜೀವ ಜಲದ ಸಮಸ್ಯೆ ಎದುರಿಸಬೇಕಾದ ಪ್ರಸಂಗ ಬಂದಿರುವುದು ತೀರಾ ಕಳವಳಕಾರಿ ಸಂಗತಿಯಾಗಿದೆ. ನಾಡಿನಾದ್ಯಂತ ಮಳೆಗಾಗಿ ಪ್ರಾರ್ಥಿಸಿ ವರುಣ ದೇವರ ಅನುಗ್ರಹಕ್ಕಾಗಿ ವಿಶೇಷ ಪೂಜೆ ಪ್ರಾರ್ಥನೆಗಳು, ಜಲಾಭಿಷೇಕ ಸೇರಿ ಅನೇಕ ಪೂಜಾ ಕೈಂಕರ್ಯಗಳು, ಪ್ರಾರ್ಥನೆಗಳು ನಡೆಯುತ್ತಿವೆ ಇಂದು ಹಳಿಯಾಳದಲ್ಲಿ ಜಲಾಭಿಷೇಕ ಆರಂಭಿಸುತ್ತಿದಂತೆ ಮಳೆಯ ಆಗಮನವು ಆಗಿರುವುದು ಸಂತಸ ಹಾಗೂ ವರುಣ ದೇವರ ಕೃಪೆ ಆಗುವ ಆಶಾಭಾವನೆ ಮೂಡಿದೆ ಎಂದು ಸಂತಸ ವ್ಯಕ್ತಪಡಿಸಿದರು.

300x250 AD

ಹಳಿಯಾಳದಲ್ಲಿ ಬೆಳಿಗ್ಗೆ ಜಲಾಭಿಷೇಕ ಆರಂಭವಾಗುತ್ತಿದ್ದಂತೆ 10 ನಿಮಿಷಗಳ ಉತ್ತಮ ಮಳೆ ಹಾಗೂ ಆಗಾಗ್ಗೆ ತುಂತುರು ಮಳೆ ಆಗಿರುವುದು ರೈತರಲ್ಲಿ ಜನತೆಯಲ್ಲಿ ಮಳೆ ಆಗುವ ಆಶಾಭಾವನೆ ಮೂಡಿದೆ. ದೇವಸ್ಥಾನದಲ್ಲಿ ಜಲಾಭಿಷೇಕದೊಂದಿಗೆ ವಿಶೇಷ ಪೂಜೆ ಹಾಗೂ ಮಹಿಳೆಯರಿಂದ ವರುಣ ದೇವರ ಮೆಚ್ಚಿಸಲು ಜಾನಪದ ಭಕ್ತಿ ಗೀತೆಗಳು, ಭಜನೆ ನೆರವೆರಿಸಲಾಯಿತು. ದೇವಸ್ಥಾನ ಟ್ರಸ್ಟ್ ಕಮಿಟಿ ಸೇರಿ ಪಟ್ಟಣದ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top