ಶಿರಸಿ: ತಾಲೂಕಿನ ದೊಡ್ನಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬ್ಯಾಗದ್ದೆಯಲ್ಲಿ ಕಾಡು ಹಂದಿ ಕಾಟ ಜೋರಾಗಿದ್ದು, ರೈತರು ಬೆಳೆದ ಬೆಳೆಗಳಿಗೆ ಕಂಟಕವಾಗಿ ಪರಿಣಿಮಿಸಿದೆ. ಬ್ಯಾಗದ್ದೆಯ ವೆಂಕಟ್ರಮಣ ನಾಯ್ಕಗೆ ಸೇರಿದ ಕಬ್ಬಿನ ಗದ್ದೆಗೆ ದಾಳಿ ನಡೆಸಿರುವ ಕಾಡು ಹಂದಿ ಸುಮಾರು ಒಂದು ಎಕರೆ ಕಬ್ಬನ್ನು ನಾಶಪಡಿಸಿದೆ. ಮಳೆಯ ಅಭಾವದ ನಡುವೆಯೂ ಕಷ್ಟಪಟ್ಟು ಬೆಳೆದ ಕಬ್ಬನ್ನು ಹಂದಿ ಕಾಟಕ್ಕೆ ಹಾನಿಯಾಗಿದ್ದು, ಪರಿಹಾರ ನೀಡಬೇಕೆಂದು ಸರಕಾರಕ್ಕೆ ಮನವಿ ಮಾಡಿದ್ದಾನೆ.
ಕಾಡುಹಂದಿ ಕಾಟ: ಕಬ್ಬಿನಗದ್ದೆ ನಾಶ
