ಕಾರವಾರ: ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಗಂಡು ಮಕ್ಕಳ ಶಾಲೆಯಲ್ಲಿ ಹಳೆ ವಿದ್ಯಾರ್ಥಿ ಸಾಯಿಪ್ರಕಾಶ್ ರಾಯ್ಕರ್ ತಾವು ಕಲಿತ ಶಾಲೆಯ ಮೇಲಿನ ಅಭಿಮಾನದಿಂದ ಇಲ್ಲಿ ಓದುತ್ತಿರುವ 165 ಮಕ್ಕಳಿಗೆ 60,000 ರೂ. ಮೌಲ್ಯದ ವರ್ಷಪೂರ್ತಿ ಸಾಕಾಗುವಷ್ಟು ಉತ್ತಮ ಗುಣಮಟ್ಟದ ನೋಟ್ ಪುಸ್ತಕಗಳನ್ನು ಉಚಿತವಾಗಿ ನೀಡಿ ತಮ್ಮ ಸಹಾಯ ಹಸ್ತವನ್ನು ನೀಡಿದ್ದಾರೆ.
ಅದನ್ನು ಅವರ ಸಹೋದರ ಮಂಜುನಾಥ ರಾಯ್ಕರ್‌ರವರ ಮೂಲಕ ವಿತರಿಸಿದರು. ಈ ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು, ಪಾಲಕರು ಮತ್ತು ಶಿಕ್ಷಕರು ಹಾಜರಿದ್ದರು. ನಿವೃತ್ತ ಶಿಕ್ಷಕಿ ಕುಮುದಾ ರಾಯ್ಕರ್, ಸಾಯಿಪ್ರಕಾಶ್ ರಾಯ್ಕರ್‌ರವರು ನೀಡಿದ ನೋಟ್ ಪುಸ್ತಕಗಳ ಪ್ರಯೋಜನ ಮಾಡಿಕೊಂಡು ನೀವು ಸಹ ವಿದ್ಯಾವಂತರಾಗಿ ಅವರಂತೆ ನೀವಾಗಲು ಪ್ರಯತ್ನಿಸಿ ಎಂದು ಹಿತೋಪದೇಶ ನೀಡಿದರು.
ದಾನಿಗಳಿಂದ ನೋಟ್‌ಬುಕ್ ವಿತರಣೆ
