Slide
Slide
Slide
previous arrow
next arrow

ಜು.29ಕ್ಕೆ ಲೋಕಕಲ್ಯಾಣಾರ್ಥ ಅಖಂಡ ಆಷಾಢ ಏಕಾದಶಿ ನಾಮಸಂಕೀರ್ತನೆ

300x250 AD

ಕಾರವಾರ: ತಾಲೂಕಿನ ಸಿದ್ದರ ಗ್ರಾಮದಲ್ಲಿ ಇರುವ ಶ್ರೀನರಸಿಂಹ ದೇವಸ್ಥಾನದಲ್ಲಿ ಆಶಾಡ ಏಕಾದಶಿಯಂದು ಅಖಂಡ ನಾಮಸಂಕೀರ್ತನೆ ಕಾಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಆಸ್ತಿಕರು, ದೈವ ಭಕ್ತರು, ಸೇರಿದಂತೆ ಇತರ ಹಿಂದು ಸನಾತನಿಗಳಿಗೆ  ಆಶಾಡ ಏಕಾದಶಿಯ ಪವಿತ್ರ ದಿನ. ಈ ದಿನವನ್ನು ಪಥಮ ಏಕಾದಶಿ ಎಂದೂ, ವೈಕುಂಠ ದ್ವಾರ ತೆರೆಯವು ದಿನವೆಂದು, ವಾರ್ಕರಿಗಳ ದಿನ ಎಂಬಿತ್ಯಾದಿ ಕಾರಣಕ್ಕೆ ಮಹತ್ವವನ್ನು ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಜುಲೈ 29ರಂದು ಆಶಾಢ ಏಕಾದಶಿಯ ವಿಶೇಷ ಕಾರ್ಯಕ್ರಮಗಳು ಸಿದ್ದರದ ಶ್ರೀನರಸಿಂಹ ದೇವಸ್ಥಾನದಲ್ಲಿ ನಡೆಯಲಿದೆ.

ಸಿದ್ದರದಲ್ಲಿ ನೆಲೆ ನಿಂತ ಪುರಾತನ ಧ್ವಿ ಹಸ್ತ ಉಗ್ರನಾರಸಿಂಹ ಜಾಗೃತ ಕ್ಷೇತ್ರದಲ್ಲಿ ಒಂದು ದಿನದ ಅಹೋರಾತ್ರಿ ನಿರಂತರ ನಾಮ ಸಂಕೀರ್ಥನೆ (ಭಜನಾ) ಕಾಯಕ್ರಮ ಏರ್ಪಡಿಸಲಾಗಿದೆ. ಲೋಕ ಕಲ್ಯಾಣಕ್ಕಾಗಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಈ ಪುಣ್ಯಕಾರ್ಯ ನಡೆಸಲಾಗುತ್ತಿದೆ. ದೇವಾಲಯದಲ್ಲಿ ನಿರಂತರ ಅಹೋರಾತ್ರಿ ಭಜನೆ, ನಾಮ ಸಂಕಿರ್ತನೆ, ಪವಿತ್ರ ವಾಧ್ಯಗಳ ವಾದನ, ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿದೆ.
ಭಜನಾ ಮಂಡಳಿಗಳು, ಕಲಾ ತಂಡಗಳು ಸೇರಿದಂದೆ ಇತರ ಭಕ್ತರು ಸೇವಾ ರೂಪದಲ್ಲಿ ಅಖಂಡ ನಾಮ ಸಂಕೀರ್ತನೆಯಲ್ಲಿ ಭಾಗವಹಿಸಲು ಮುಕ್ತ ಅವಕಾಶ ಇರುತ್ತದೆ. ಸ್ವ ಇಚ್ಛೆಯಿಂದ ಈ ಲೋಕ ಕಲ್ಯಾಣ ಕಾರ್ಯದಲ್ಲಿ ಭಾಗವಹಿಸಲು ಇಷ್ಟಪಡುವವರು ನೇರವಾಗಿ ಸಿದ್ದರ ಶ್ರೀನರಸಿಂಹ ದೇವಸ್ಥಾನ ಬಂದು ಭಾಗವಹಿಸಬಹುದು. ಹೆಚ್ಚಿನ ವಿವರಕ್ಕಾಗಿ ಕಮಿಟಿಯ ಆಡಳಿತ ಮೊಕ್ತೇಸರ ದತ್ತಾತ್ರಯ ಗಾಂವಕರ (ಮೊ.ಸಂ: Tel:+919481914922) ಅಥವಾ ಪದಾಧಿಕಾರಿ ರಾಜೇಂದ್ರ ರಾಣೆ (ಮೊ.ಸಂ.: Tel:+919448408643) ಅವರನ್ನು ಸಂರ್ಕಿಸಲು ಕೋರಲಾಗಿದೆ.

300x250 AD
Share This
300x250 AD
300x250 AD
300x250 AD
Back to top