• Slide
    Slide
    Slide
    previous arrow
    next arrow
  • ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿದ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ

    300x250 AD

    ಗೋಕರ್ಣ: ಪುರಾಣ ಪ್ರಸಿದ್ಧ ಮಹಾಬಲೇಶ್ವರ ದೇವಾಲಯಕ್ಕೆ ಚಿತ್ರಾಪುರ ಮಠಾಧೀಶರಾದ  ಶ್ರೀ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿಯವರು ಆಗಮಿಸಿ ಆತ್ಮಲಿಂಗಕ್ಕೆ ಪೂಜೆ ನೆರವೇರಿಸಿದರು. ಮಂದಿರದ

    ಮೇಲುಸ್ತುವಾರಿ ಸಮಿತಿ ಸದಸ್ಯರಾದ ವೇ. ಮಹಾಬಲ ಉಪಾಧ್ಯಯ, ವೇ. ಪರಮೇಶ್ವರ ಮಾರ್ಕಾಂಡೆ, ವೇ. ದತ್ತಾತ್ರೇಯ ಹಿರೇಗಂಗೆ ಪೂಜಾ ಕೈಂಕರ್ಯ ನೆರವೇರಿಸಿದರು.

    300x250 AD

    ನಂತರ ಶ್ರೀಗಳಿಗೆ ಫಲ ಸಮರ್ಪಿಸಿ ಗೌರವಿಸಿ ವಂದಿಸಲಾಯಿತು. ಇದಕ್ಕೊ ಮೊದಲು ಮಹಾಗಣಪತಿ ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಇವೆರಡು ದೇವಾಲಯದ ಬೇಟಿ ಬಳಿಕ ತಾಮ್ರಗೌರಿ ಮಂದಿರಕ್ಕೆ ತೆರಳಿ ದೇವಿ ದರ್ಶನ ಪಡೆದರು. ಈ ವೇಳೆ ಮೂಲ ಮಠವಾದ ಬಂಡಿಕೇರಿ ಮಠದ ವೇ. ರವಿಕಿರಣ ಭಟ್, ಮಾಹಬಲೇಶ್ವರ ಮಂದಿರದ ಮೇಲುಸ್ತುವಾರಿ ಸಮಿತಿ ಸದಸ್ಯ ಮುರಳೀಧರ ಪ್ರಭು, ಮಠದ ಪದಾಧಿಕಾರಿಗಳು, ಈ ಭಾಗದ ಶಿಷ್ಯವೃಂದದವರು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top