Slide
Slide
Slide
previous arrow
next arrow

ಶಿಕ್ಷಕಿ ವರ್ಗಾವಣೆ: ಶಾಲೆಗೆ ಬೀಗ ಹಾಕಿ ಪ್ರತಿಭಟನೆ

300x250 AD

ಕುಮಟಾ: ತಾಲೂಕಿನ ಉಪ್ಪಿನಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಸಂಧ್ಯಾ ರಾಯ್ಕರ ವರ್ಗಾವಣೆಯನ್ನು ಖಂಡಿಸಿ ಗ್ರಾಮಸ್ಥರು ಮತ್ತು ಎಸ್‌ಡಿಎಂಸಿಯವರು ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ತಾಲೂಕಿನ ಅಳಕೋಡ ಗ್ರಾಪಂ ವ್ಯಾಪ್ತಿಯ ಉಪ್ಪಿನಪಟ್ಟಣ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 20 ವರ್ಷಗಳಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಸಂಧ್ಯಾ ರಾಯ್ಕರನ್ನು ಹೆಚ್ಚುವರಿ ಶಿಕ್ಷಕಿ ಎಂದು ಪರಿಗಣಿಸಿದ ಶಿಕ್ಷಣ ಇಲಾಖೆ ಅವರನ್ನು ಭಟ್ಕಳ ತಾಲೂಕಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಆದರೆ ಈ ಶಾಲೆಯಲ್ಲಿ 88 ವಿದ್ಯಾರ್ಥಿಗಳಿದ್ದು, ಸಂಧ್ಯಾ ಅವರನ್ನು ವರ್ಗಾಯಿಸಿದರೆ ಮೂವರು ಶಿಕ್ಷಕರೇ 1ರಿಂದ 7ನೇ ತರಗತಿವರೆಗೆ ಪಾಠ ಮಾಡುವುದು ಕಷ್ಟಸಾಧ್ಯ. ಅಲ್ಲದೇ ಸಂಧ್ಯಾ ಅವರು ಕಳೆದ 20 ವರ್ಷದಿಂದ ಇದೇ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಮಕ್ಕಳೊಂದಿಗೆ, ಪಾಲಕರೊಂದಿಗೆ ಮತ್ತು ಗ್ರಾಮಸ್ಥರರೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದಾರೆ. ಇಡೀ ಊರಿಗೆ ಅವರು ಅಚ್ಚುಮೆಚ್ಚಿನ ಶಿಕ್ಷಕಿಯ ಜೊತೆಗೆ ಮಕ್ಕಳ ಪ್ರೀತಿ ವಿಶ್ವಾಸ ಗಳಿಸಿದ ಶಿಕ್ಷಕಿಯಾಗಿದ್ದಾರೆ. ಅವರ ವರ್ಗಾವಣೆ ಶಾಲಾ ಮಕ್ಕಳಿಗೆ ತೀವ್ರ ನೋವು ಉಂಟಾಗಿದೆ.

ಹಾಗಾಗಿ ವಿದ್ಯಾರ್ಥಿಗಳು, ಪಾಲಕರು, ಎಸ್‌ಡಿಎಂಸಿ ಅವರು ಈ ವರ್ಗಾವಣೆಯನ್ನು ತಡೆಯುವಂತೆ ಆಗ್ರಹಿಸಿ ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು. ಮಕ್ಕಳ ಹಿತದೃಷ್ಟಿಯಿಂದ ಅವರನ್ನು ಪುನಃ ಇದೇ ಶಾಲೆಗೆ ನೇಮಕ ಮಾಡುವವರೆಗೂ ಶಾಲೆಯ ಬೀಗ ತೆರೆಯುವುದಿಲ್ಲ ಎಂದು ಪಟ್ಟು ಹಿಡಿದರು. ಅಲ್ಲದೇ ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಭಟ್ ಅವರಿಗೆ ಮನವಿ ಸಲ್ಲಿಸಿದರೂ ಅವರು ಸ್ಪಂದಿಸಿಲ್ಲ. ಹಾಗಾಗಿ ಮಕ್ಕಳನ್ನು ಶಾಲೆಯಿಂದ ಹೊರಹಾಕಿ ಬಿಸಿ ಊಟ ನೀಡದೇ ಪ್ರತಿಭಟಿಸಬೇಕಾಯಿತು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

300x250 AD

ಇನ್ನೂ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪಂಚಾಯತ್ ನಿಕಟಪೂರ್ವ ಸದಸ್ಯ ಗಜಾನನ ಪೈ ಮಾತನಾಡಿ, ಇಂತಹ ಶಿಕ್ಷಕರು ನಮ್ಮ ಶಾಲೆಗೆ ಅವಶ್ಯಕತೆ ಇದೆ. ಶಾಸಕರ ಬಳಿ ಚರ್ಚಿಸಿ ಪುನಃ ಇದೆ ಶಾಲೆಗೆ ವಾಪಾಸ್ ಕರೆತರಲು ಪ್ರಯತ್ನ ಮಾಡುತ್ತೇನೆ ಎಂದರು. ಪ್ರತಿಭಟನೆಯಲ್ಲಿ ಊರಿನ ಪ್ರಮುಖರಾದ ಹರಿಶ್ಚಂದ್ರ ಗೌಡ, ನಯನ ಗೌಡ, ಶ್ರೀಧರ್ ಗೌಡ, ಮಾರು ಮುಕ್ರಿ, ಶಶಿಕಲ್ ಅಂಬಿಗ, ಅನಂತ್ ಶಾನಭಾಗ್ ಹಾಗೂ ಎಸ್. ಡಿ. ಎಮ್. ಸಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಇದ್ದರು.

Share This
300x250 AD
300x250 AD
300x250 AD
Back to top