• Slide
    Slide
    Slide
    previous arrow
    next arrow
  • ಕದರವೇ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಗಣೇಶ ವಡ್ಡರ ನೇಮಕ

    300x250 AD

    ಯಲ್ಲಾಪುರ: ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹಾಗೂ ಕಿರವತ್ತಿ ಘಟಕ ಉಸ್ತುವಾರಿಯನ್ನಾಗಿ ಕಿರವತ್ತಿಯ ಗಣೇಶ ತಿಪ್ಪಣ್ಣ ವಡ್ಡರ ಹಾಗೂ ಕಿರವತ್ತಿ ಘಟಕದ ಉಪಾಧ್ಯಕ್ಷರನ್ನಾಗಿ ಚಂದ್ರುಕುಮಾರ ಇಟಗಿ ಅವರನ್ನು ನೇಮಕ ಮಾಡಲಾಗಿದೆ ಎಂದು ರಾಜ್ಯ ಸಂಚಾಲಕ ಚಿದಾನಂದ ಹರಿಜನ ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿ ಚನ್ನಬಸಪ್ಪ ಹರಿಜನ ತಿಳಿಸಿದ್ದಾರೆ.

    ಗುರುವಾರ ಯಲ್ಲಾಪುರದ ಪರಿವೀಕ್ಷಣಾ ಮಂದಿರದಲ್ಲಿ ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ಸಭೆ ನಡೆದು ಅಲ್ಲಿ ನೇಮಕ ಮಾಡಿ ಆದೇಶ ಪತ್ರವನ್ನು ಹಸ್ತಾಂತರಿಸಲಾಯಿತು. ಆದೇಶ ಪತ್ರದಲ್ಲಿ ಡಾ. ಬಾಬಾ ಸಾಹೇಬ ಅಂಬೇಡ್ಕರವರ ತತ್ವ ಸಿದ್ಧಾಂತದ ಅಡಿಯಲ್ಲಿ ಸಂಘಟನೆ ಕಾರ್ಯ ಮಾಡಿ, ದಲಿತ ಸಮಾಜ, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಗಗಳ ಏಳಿಗೆಗೋಸ್ಕರ ಅವರ ಕುಂದು-ಕೊರತೆಗಳಿಗೆ ಅವರ ನೋವುಗಳಿಗೆ ಸ್ಪಂದಿಸಿ, ಕೆಲಸ ಕಾರ್ಯಗಳನ್ನು ಮಾಡಲು ತಮಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ ಎಂದು ತಿಳಿಸಲಾಗಿದೆ.
    ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಭಿಮಸಿ ವಾಲ್ಮಿಕಿ, ನೂರ್ ಅಹ್ಮದ ಎಸ್ ಮುಜಾವರ್ ಇನ್ನಿತರರು ಇದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top