Slide
Slide
Slide
previous arrow
next arrow

ಹಿಮಪರ್ವತ ಏರಿದ ‘ಧ್ರುವ ಭಟ್ಟ’

300x250 AD

ಜೋಯಿಡಾ: ತಾಲೂಕಿನ ಛಾಪಖಂಡ ನಿವಾಸಿ ಧ್ರುವ ಭಟ್ಟ ತಮ್ಮ ಚಿಕ್ಕ ವಯಸ್ಸಿನಲ್ಲೇ ಹಿಮಪರ್ವತ ಏರುವುದರ ಮೂಲಕ ಸಾಧನೆ ಮಾಡಿದ್ದಾರೆ.
ಭಾರತದಲ್ಲಿ ಅತಿ ಕಠಿಣ ಹಿಮ ಚಾರಣಗಳಲ್ಲಿ ಒಂದಾದ ಹಿಮಾಚಲ ಪ್ರದೇಶದ ಪಿನ್ ಪಾರ್ವತಿ ಟ್ರಕ್ ಅನ್ನು ಧ್ರುವ ಭಟ್ಟ ಏರಿದ್ದಾರೆ. ಗೋಕರ್ಣ ಹೈಕರ್ಸ್ನ ನಾಲ್ಕು ಜನರ ತಂಡದ ಜೊತೆ 9 ದಿನಗಳಲ್ಲಿ 130 ಕಿ.ಮೀ. ಅತಿ ದುರ್ಗಮ ಹಿಮದಲ್ಲಿ ಚಾರಣ ನಡೆಸಿದ್ದನ್ನು ಹಿಮಾಚಲ ಪತ್ರಿಕೆಗಳು ಸುದ್ದಿ ಪ್ರಕಟಿಸಿ ಪ್ರಶಂಸಿಸಿವೆ.

ಸಮುದ್ರ ಮಟ್ಟದಿಂದ 17451 ಅಡಿ ಎತ್ತರಕ್ಕೆ ತಲುಪಿ ಭಾರತದ ಧ್ವಜವನ್ನು ಹಾರಿಸಿದ 2023ರ ಮೊದಲ ತಂಡ ಇದಾಗಿದೆ. ಕ್ಷಣ ಕ್ಷಣಕ್ಕೂ ಹಿಮಪಾತದ ಶಿತಗಳನ್ನು ಎದುರಿಸುತ್ತ ಜೀವದ ಹಂಗಿಲ್ಲದೆ ಐದು ದಿನಗಳ ಕಾಲ ಸಂಪೂರ್ಣ ಹಿಮದ ರಾಶಿಯಲ್ಲಿ ನಡೆದು ಗುರಿ ತಲುಪಲಾಗಿದೆ. ದಾಂಡೇಲಿ ಬಂಗೂರನಗರ ಡಿಗ್ರಿ ಕಾಲೇಜಿನ ಪ್ರಥಮ ವರ್ಷದ ವಿಜ್ಞಾನ ವಿಭಾಗದ ವಿದ್ಯಾರ್ಥಿಯಾದ ಧ್ರುವ ಭಟ್ಟ ಕಾಡುಮನೆ ಹೋಮ್ ಸ್ಟೇ ಮಾಲಿಕ ನರಸಿಂಹ ಭಟ್ಟ ಮತ್ತು ಕಾವ್ಯ ಭಟ್ಟ ದಂಪತಿ ಮಗನಾಗಿದ್ದಾನೆ. ಕಳೆದ ವರ್ಷ ನೇಪಾಳದ ಅನ್ನಪೂರ್ಣ ವರ್ತುಲ ಚಾರಣವನ್ನು 20ರ ಹರೆಯದ ಈ ಹುಡುಗ ಯಶಸ್ವಿಯಾಗಿ ಪೂರೈಸಿದ್ದನ್ನು ಇಲ್ಲಿ ಸ್ಮರಿಸಬಹುದು.

300x250 AD
Share This
300x250 AD
300x250 AD
300x250 AD
Back to top