• Slide
    Slide
    Slide
    previous arrow
    next arrow
  • ರಾಮನಗರ ಕ್ವಾರಿ ಪ್ರದೇಶಕ್ಕೆ ಶಾಸಕ ದೇಶಪಾಂಡೆ ಭೇಟಿ: ಪರಿಶೀಲನೆ

    300x250 AD

    ಜೊಯಿಡಾ: ತಾಲೂಕಿನ ರಾಮನಗರದಲ್ಲಿನ ಕ್ವಾರಿ ಹಾಗೂ ಕ್ರಷರ್ ಮೇಲೆ ಹಲವು ದೂರುಗಳು ಬಂದ ಹಿನ್ನಲೆಯಲ್ಲಿ ಶಾಸಕ ಆರ್.ವಿ.ದೇಶಪಾಂಡೆ ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿದರು.

    ರಾಮನಗರದಲ್ಲಿ ಹಲವು ಕ್ವಾರಿ ಹಾಗೂ ಕ್ರಷರ್‌ಗಳು ಹಲವು ವರ್ಷದಿಂದ ನಡೆಯುತ್ತಿದ್ದು, ಸ್ಥಳೀಯರು ಈ ಕ್ವಾರಿ ಹಾಗೂ ಕ್ರಷರ್ ಮೇಲೆ ಹಲವು ದೂರುಗಳನ್ನ ಮಾಡಿದ್ದರು. ಈ ಹಿನ್ನಲೆಯಲ್ಲಿ ಶಾಸಕ ಆರ್. ವಿ. ದೇಶಪಾಂಡೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಲ್ಲು ಪುಡಿ ಮಾಡುವ ಉದ್ಯಮವು ಜೀವ ಪರಿಸರಕ್ಕೆ ಸಾಕಷ್ಟು ಹಾನಿ ಮಾಡುತ್ತಿದ್ದು, ಪರಸರದ ಅಸಮತೋಲನಕ್ಕೆ ಕಾರಣವಾಗುತ್ತಿದೆ ಎಂಬ ದಟ್ಟವಾದ ಆರೋಪಗಳಿವೆ. ಅಧಿಕ ಪ್ರಮಾಣದ ದೂಳು ಹೊರಸೂಸುವಿಕೆಯಿಂದಾಗಿ ಜನಸಾಮಾನ್ಯರು ಹಲವಾರು ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುವ ಭೀತಿ ಕೂಡ ಉಂಟಾಗಿದೆ ಎಂದು ದೇಶಪಾಂಡೆ ಹೇಳಿದ್ದಾರೆ.
    ಕೆಲವು ಕಲ್ಲು ಕ್ರಷರ್‌ಗಳು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗಸೂಚಿಗಳನ್ನು ಅನುಸರಿಸುವುದಿಲ್ಲ ಎನ್ನುವ ಆರೋಪಗಳಿವೆ. ವಾಯುಮಾಲಿನ್ಯ ನಿಯಂತ್ರಣ ಸಾಧನಗಳನ್ನು ಅಳವಡಿಸದೇ ನೀರು ಚಿಮುಕಿಸುವ ಮತ್ತು ಧೂಳು ಹೊರತೆಗೆಯುವ ವ್ಯವಸ್ಥೆಗಳನ್ನು ಅಳವಡಿಸದೇ ಅವು ಕೆಲಸ ಮಾಡುವುದು ವಾಯು ಮಾಲಿನ್ಯಕ್ಕೆ ಕಾರಣವಾಗುತ್ತಿವೆ ಎಂಬ ಅಭಿಪ್ರಾಯವಿದೆ. ಕಲ್ಲು ಕ್ವಾರಿಗಳಲ್ಲಿ ನೀರು ಸಂಗ್ರಹವಾಗುತ್ತಿರುವುದರಿಂದ ರಾಮನಗರ ಭಾಗದಲ್ಲಿನ ಕೊಳವೆ ಬಾವಿಗಳು ಬತ್ತಿ ಹೋಗಿ, ನೀರಿನ ಅಭಾವಕ್ಕೂ ಕಾರಣವಾಗುತ್ತಿವೆ ಎಂದಿದ್ದಾರೆ.
    ಅಲ್ಲದೇ, ಕೆಲವು ಬಾರಿ ಈ ಘಟಕಗಳಲ್ಲಿ ಅನಿಯಂತ್ರಿತವಾಗಿ ಸ್ಪೋಟಕಗಳನ್ನು ಬಳಸುವುದರಿಂದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸಿಸುವ ಜನರ ಮನೆ-ಮಠಗಳಿಗೂ ಸಹ ಹಾನಿಯಾಗುತ್ತಿರುವುದನ್ನು  ಸ್ಥಳೀಯರು ಗಮನಕ್ಕೆ ತಂದಿದ್ದು ಈ ಬಗ್ಗೆ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ದೇಶಪಾಂಡೆ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಜೋಯಿಡಾ ತಹಶೀಲ್ದಾರ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top