• Slide
    Slide
    Slide
    previous arrow
    next arrow
  • ಲಾಲಗುಳಿ ಹನುಮಂತನ ಕೋಟೆ ಮೃತ್ತಿಕೆ ಅಯೋಧ್ಯೆಗೆ

    300x250 AD

    ಯಲ್ಲಾಪುರ: ತಾಲೂಕಿನ ಕನ್ನಡಗಲ್, ಲಾಲಗುಳಿ ಗ್ರಾಮದಲ್ಲಿರುವ ಹನುಮಂತನ ಕೋಟೆ ಶ್ರೀ ಆಂಜನೇಯ ದೇವರ ಮೂರ್ತಿಯ ಸ್ಥಳದಿಂದ ಯುವಾ ಬ್ರಿಗೇಡ್ ತಂಡವು ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಮೃತ್ತಿಕೆಯನ್ನು ಸಂಗ್ರಹಿಸಿದೆ.

    ವಿಜಯನಗರ ಕಾಲದ ಸೋದೆ ಅರಸರಿಂದ ನಿರ್ಮಿತವಾದ, ವ್ಯಾಸತೀರ್ಥರು ನಿರ್ಮಿಸಿದ 732 ಆಂಜನೇಯನ ವಿಗ್ರಹದ ಶೈಲಿಯಲ್ಲಿ ನಿರ್ಮಿತವಾದ ಹನುಮಂತ ದೇವರ ವಿಗ್ರಹಕ್ಕೆ ಪ್ರತಿ ಶನಿವಾರ ಲಾಲಗುಳಿಯವರು ಪೂಜೆ ಕೈಗೊಳ್ಳುತ್ತಾರೆ.

    300x250 AD

    ಅಯೋಧ್ಯೆಯ ಶ್ರೀರಾಮ‌ಮಂದಿರ ನಿರ್ಮಾಣಕ್ಕೆ ಹನುಮ ನಾಡಾದ ಕರ್ನಾಟಕದ ಎಲ್ಲಾ ಜಿಲ್ಲೆಯಲ್ಲಿ ಇರುವ ಸಾಧ್ಯವಾದಷ್ಟು ಹನುಮಾನ ಮಂದಿರವನ್ನು ಸ್ವಚ್ಚಮಾಡಿ ನಂತರ ಅಲ್ಲಿಂದ ಮೃತ್ತಿಕೆಯನ್ನು ಸಂಗ್ರಹಿಸಿ ಆ ಮೃತ್ತಿಕೆಯನ್ನು ರಾಮಮಂದಿರಕ್ಕೆ ಯುವಾ ಬ್ರಿಗೇಡ್ ವತಿಯಿಂದ ಕಳುಹಿಸಿಕೊಡಲು ನಿರ್ಧರಿಸಿದೆ.
    ಹಾಗೆಯೇ ಉತ್ತರಕನ್ನಡದ ಬೇರೆ ಬೇರೆ ತಾಲೂಕಿನಲ್ಲಿ ಯುವಾ ಬ್ರಿಗೇಡ್ ತಂಡದಿಂದ ಈ ಕಾರ್ಯಗಳು ನಡೆಯಲಿದ್ದು ಹೆಚ್ಚಿನ ಮಾಹಿತಿಗಾಗಿ
    9620838938 ಸಂಪರ್ಕಿಸಲು ಕೋರಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top